ಜಾನಪದ ವಿದ್ವಾಂಸ, ಸಾಹಿತಿ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ

 



ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ, ಸಾಹಿತಿ, ನಿವೃತ್ತ ಉಪನ್ಯಾಸಕ  ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ (79) ನಿನ್ನೆ ರಾತ್ರಿ ನಿಧನರಾಗಿದ್ದಾರೆ.


ಜಾನಪದ ಜಗತ್ತಿನ ಮಾಹಿತಿಯನ್ನು ಸಂಶೋಧನೆ ಮತ್ತು ಬರಹಗಳ ಮೂಲಕ ನಾಡಿನ ಮನೆ ಮನೆಗೆ ಬಿತ್ತರಿಸಿದ ಪಾಲ್ತಾಡಿಯವರು ವಿವಿಧ ಜಾನಪದ ಸಂಘಟನೆಗಳ ಮೂಲಕ ಆಚರಣೆಗಳನ್ನು ಕೆಡ್ಡಸ, ಬಿಸು, ಆಟಿ  ಆಚರಣೆಗಳ ಮಹತ್ವವನ್ನು ಸಮಾಜಕ್ಕೆ ತಲುಪಿಸಿದವರು.


ಭೂತಾರಾಧನೆ, ಜನಪದ ಕುಣಿತಗಳ ಕುರಿತು ಆಳವಾದ ಮಾಹಿತಿ ಮತ್ತು ಅವರು ಹಲವು ಮಂದಿಗೆ ಡಾಕ್ಟರೇಟ್ ಸಹಿತ ಹಲವು ಪದವಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ


ಪತ್ನಿ ಸುಮಾ ಆರ್. ಆಚಾರ್, ಪುತ್ರಿಯರಾದ ಕಿರಣ ಪಿ.ಆರ್, ಸುಪ್ರಿಯ ಪಿ.ಆರ್, ಪುತ್ರ ಹರ್ಷವರ್ಧನ ಪಿ.ಆರ್ ಹಾಗೂ ಅಳಿಯ ಕೃಷ್ಣ ಎಂ.ವಿ, ಜಯಪಾಲ್ ಎಚ್.ಆರ್. ಸೊಸೆ ಸುಧಾ ಟಿ.ಜೆ ಹಾಗೂ ಮೊಮ್ಮಕ್ಕಳು ಸುಹೃತ್, ಸಹಜ, ನಿಸ್ವನ, ಅವಲೋಕಿತ, ನಲ್ಮೆ, ಆತ್ಮೀಯ ಅವರನ್ನು  ಅಗಲಿದ್ದಾರೆ.


ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಅವರ ಮನೆಯಾದ ಪುತ್ತೂರು ತಾಲ್ಲೂಕಿನ ಪಾಲ್ತಾಡಿ ಗ್ರಾಮದ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget