ಕೊಕ್ಕೋ ಧಾರಣೆ ಅಲ್ಪ ಇಳಿಕೆ, ಅಡಿಕೆ ಧಾರಣೆ ಹೆಚ್ಚಳ

 



ಏರುಗತಿಯಲ್ಲಿ ಸಾಗಿದ್ದ ಕೊಕ್ಕೋ ಧಾರಣೆ ಏಪ್ರಿಲ್ 30 ರಂದು 320 ಗರಿಷ್ಠ ಹಂತಕ್ಕೆ ತಲುಪಿತ್ತು ನಿನ್ನೆ 305 ರೂಪಾಯಿಗೆ ಕ್ಯಾಂಪ್ಕೋ ಖರೀದಿ ಮಾಡಿದ್ದು,15 ರೂಪಾಯಿ ಇಳಿಕೆ ಕಂಡಿದೆ.ಒಣ ಕೊಕ್ಕೋ 960 ಬೆಲೆ ಇದೀಗ 900 ರೂಪಾಯಿ ಗೆ ಖರೀದಿಯಾಗಿದೆ. ಅಡಿಕೆ ಚೇತರಿಕೆ ಮೂಡಿದ್ದು ಚುನಾವಣೆ ನಿಗದಿಯಾದಂದಿನಿಂದಲೂ ಕ್ಯಾಂಪ್ಕೋ ಸ್ಥಿರತೆ ಕಾಪಾಡಿಕೊಂಡು ಬಂದಿದ್ದು ಈಗ ಧಾರಣೆ ಏರಿದೆ.ಚಾಲಿ ಹೊಸ ಅಡಿಕೆ 365 ರಲ್ಲಿದ್ದದ್ದು ಇದೀಗ 370 ಕ್ಕೆ ಏರಿದೆ. ಸಿಂಗಲ್ ಚೋಲ್ 440 ರೂ ಗಳಲ್ಲಿ ನಿಂತಿದ್ದರೆ ಗುರುವಾರ 450 ಕ್ಕೆ ಖರೀದಿಯಾಗಿದೆ.ಉತ್ತರ ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಮೇ 3 ನೇ ವಾರಕ್ಕೆ ಮುಗಿಯಲಿದ್ದು ಅಡಿಕೆ ಧಾರಣೆ ಹೆಚ್ಚಳ ನಿರೀಕ್ಷೆ ಇದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget