May 2024

 



ಬೆಳ್ತಂಗಡಿ: ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಕೆ.ವಸಂತ ಬಂಗೇರ‌ ಅವರ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮೇ 21ಮಂಗಳವಾರ ಬೆಳ್ತಂಗಡಿ ಗೆ ಆಗಮಿಸಲಿದ್ದಾರೆ.



ಮಂಗಳವಾರ ಬೆಳಿಗ್ಗೆ ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಸ್ತೆಯ ಮೂಲಕ ಗುರುವಾಯನಕೆರೆಗೆ ಬಂದು ಇಲ್ಲಿನ ಎಫ್.ಎಂ ಗಾರ್ಡನ್ ನಲ್ಲಿ ನಡೆಯುವ ದಿ ಕೆ ವಸಂತ ಬಂಗೇರ ಅವರ ಉತ್ತರ ಕ್ರಿಯೆ ಕಾರ್ಯಕ್ರಮದಲ್ಲಿ ಭಾಗಿಗಳಾಗಲಿದ್ದಾರೆ.

 



ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ-2ಕ್ಕೆ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಅದರಂತೆ ಜೂನ್.14ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ-2 ಪ್ರಾರಂಭಗೊಳ್ಳಲಿದೆ.



ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರಾದಂತ ಎನ್ ಮಂಜುಶ್ರೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಅದರಲ್ಲಿ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-2ನ್ನು ದಿನಾಂಕ:07-06-2024 ರಿಂದ 14-06-2024 ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು, ಸದರಿ ಪರೀಕ್ಷೆ-2ನ್ನು ಮುಂದೂಡಿ ದಿನಾಂಕ14-06-2024 ರಿಂದ 22-06-2024ರವರೆಗೆ ನಡೆಸಲು ತೀರ್ಮಾನಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಮಂಡಲಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಹೀಗಿದೆ ಎಸ್ ಎಸ್ ಎಲ್ ಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿ

-ದಿನಾಂಕ 14-06-2024ರ ಶುಕ್ರವಾರ – ಪ್ರಥಮ ಭಾಷೆ – ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್(ಎನ್ ಸಿಇಆರ್ ಟಿ), ಸಂಸ್ಕೃತ.

-ದಿನಾಂಕ 15-06-2024ರ ಶನಿವಾರ- ತೃತೀಯ ಭಾಷೆ – ಹಿಂದಿ( ಎನ್ ಸಿ ಇ ಆರ್ ಟಿ), ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.

ಎನ್ ಎಸ್ ಕ್ಯೂ ಎಫ್ ಪರೀಕ್ಷಾ ವಿಷಯಗಳು- ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್, ಆಪರೆಲ್ ಮೇಡ್ ಆಪ್ಸ್ ಅಂಡ್ ಹೋಮ್ ಫರ್ನಿಷಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಹಾರ್ಡ್ ವೇರ್

-ದಿನಾಂಕ 19-06-2024ರ ಬುಧವಾರ – ಕೋರ್ ಸಬ್ಜೆಕ್ಟ್ – ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿರಯರಿಂಗ್-IV, ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಅಂಡ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2, ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್-IV, ಇಂಜಿನಿಯರಿಂಗ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್-IV, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಪ್ರೋಗ್ರಾಮಿಂಗ್ ಇನ್ ANSI C, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥ ಶಾಸ್ತ್ರ.

-ದಿನಾಂಕ 20-06-2024ರ ಗುರುವಾರ- ಕೋರ್ ಸಬ್ಜೆಕ್ಟ್ – ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ.

-ದಿನಾಂಕ 21-06-2024ರ ಶುಕ್ರವಾರ – ದ್ವಿತೀಯ ಭಾಷೆ – ಇಂಗ್ಲೀಷ್, ಕನ್ನಡ

-ದಿನಾಂಕ 22-06-2024ರ ಶನಿವಾರ – ಕೋರ್ ಸಬ್ಜೆಕ್ಟ್ – ಸಮಾಜ ವಿಜ್ಞಾನ.

 


ಇಂಡಿಯಾ ಮೈತ್ರಿಕೂಟ ಅಧಿಕಾರ ಬಂದ ಮರುಕ್ಷಣವೇ ಅಗ್ನಿಪಥ ಯೋಜನೆ ಯನ್ನು ಮೊಟಕುಗೊಳಿಸಿ ಕಸದ ಬುಟ್ಟಿಗೆ ಎಸೆಯಲಾಗುವುದೆಂದು ರಾಹುಲ್ ಗಾಂಧಿ ದೆಹಲಿ ಚುನಾವಣೆ ಪ್ರಚಾರ ಸಂದರ್ಭದಲ್ಲಿ ತಿಳಿಸಿದ್ದಾರೆ. ಜಿ ಯಸ್ ಟಿ ಸರಳಿಕರಣಗೊಳಿಸಿ ಮತ್ತು ಬೃಹತ್ ಉದ್ದಿಮೆದಾರರ ಬದಲಿಗೆ ಸಣ್ಣ ಉದ್ದಿಮೆದಾರರಿಗೆ ನೆರವು ನೀಡಲಾಗುವುದು ಪ್ರಧಾನಿ ಮೋದಿ ನೇರವಾಗಿ ನಮ್ಮ ಜೊತೆ ಚರ್ಚೆ ಮಾಡಲು ಬರುತ್ತಿಲ್ಲ,ದೇಶ ಅಂಬಾನಿ, ಅದಾನಿ ಕೈಲಿದೆಯೆಂದು ವಾಗ್ದಾಳಿ ನಡೆಸಿದರು.

 



ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಕಟ್ಟು ನಿಟ್ಟಾದ ನಿಯಮಗಳು ಈಗಲೂ ಜಾರಿಯಲ್ಲಿದೆ,ಮದ್ಯಪಾನ ಕುರಿತಾಗಿ ನಿಷೇಧ ಕೂಡ ಹೇರಿದೆ,ಕಳೆದ ಫಿಫಾ ಫುಟ್ಬಾಲ್ ಪಂದ್ಯಾಟ ಅರೇಬಿಕ್ ರಾಷ್ಟ್ರ ಗಳಲ್ಲಿ ನಡೆದಾಗ ಮದ್ಯ ದ ವಿಚಾರದಲ್ಲಿ ತನ್ನ ಸಾಂಪ್ರದಾಯಿಕ ನಿಯಮಗಳಿಗೆ ಒತ್ತು ನೀಡಿ ಅವಕಾಶ ನೀಡಿರಲಿಲ್ಲ.ಯುಎಇ ತನ್ನ ಮದ್ಯ ನೀತಿಯಲ್ಲಿ ಬದಲಾವಣೆ ತಂದಿದ್ದು ದೇಶದಲ್ಲಿ ಮದ್ಯ ತಯಾರಿಕೆಗೆ ಒಪ್ಪಿಗೆ ನೀಡಿದೆ,ಈ ಹಿನ್ನಲೆಯಲ್ಲಿ ಮೊದಲ ಚಾಡ್ ಮ್ಯಾಕ್ ಇ ಬಿಯರ್ ಅಂಗಡಿ ತೆರೆಯಲಾಗಿದೆ.ಈ ಮೊದಲು ಮದ್ಯ ಮಾರಾಟಕ್ಕೆ ಅವಕಾಶ ವಿತ್ತದರು ತಯಾರಿಸುವಂತಿಲ್ಲ,ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಬೇಡಿಕೆ ಹಿನ್ನಲೆಯಲ್ಲಿ ಮದ್ಯ ನೀತಿ ನಿಯಮಗಳಲ್ಲಿ ಬದಲಾವಣೆ ಮಾಡಿ ಸರ್ಕಾರ ಈ ಕ್ರಮ ಕೈಗೊಂಡಿದೆ.

 



ನಮ್ಮ ಬಣವನ್ನು ಪ್ರಧಾನಿ ಮೋದಿ ನಕಲಿ ಶಿವಸೇನೆಯೆಂದು ಕರೆದಿದ್ದು ಆದರೆ ಮೋದಿ ಆರೆಸ್ಸೆಸ್ ನ್ನು ನಿಷೇಧಿಸುವ ದಿನಗಳು ದೂರವಿಲ್ಲವೆಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು,ನಂತರ ದೇಶದಲ್ಲಿ ಅಚ್ಛೆ ದಿನ್ ಪ್ರಾರಂಭವಾಗಲಿದೆ ಯೆಂದು ಉದ್ಧವ್ ಠಾಕ್ರೆ ತಿಳಿಸಿದ್ದಾರೆ.

 



ಸಿಂಗಾಪುರ ದಲ್ಲಿ ಕೋವಿಡ್ 19 ಅಲೆ ಶುರುವಾಗಿದ್ದು,ಮಾಸ್ಕ್ ಕಡ್ಡಾಯಗೊಳಿಸಿದೆ.ಮೇ 5 ರಿಂದ 11 ರವರೆಗೆ 26 ಸಾವಿರ ಜನಕ್ಕೆ ಕೋವಿಡ್ ಸೋಂಕು ದೃಢಪಟ್ಟಿದೆ.ಕೋವಿಡ್ ಹೊಸ ಅಲೆ ಆರಂಭಿಕ ಭಾಗದಲ್ಲಿದ್ದು ಜೂನ್ ಕೊನೆಯ ವೇಳೆಗೆ ವ್ಯಾಪಕವಾಗಲಿದೆಯೆಂದು ಸಿಂಗಾಪುರ ಆರೋಗ್ಯ ಸಚಿವಾಲಯ ತಿಳಿಸಿದೆ.ಕೋವಿಡ್ 19 ರೂಪಾಂತರಿ ಜೆ ಎನ್ 1 ಮತ್ತು ಅದರ ಉಪತಳಿ ಕೆಪಿ 1 ಕಾಣಿಸುಕೊಳ್ಳುತ್ತಿದ್ದು ಇವು ಹೆಚ್ಚು ರೂಪಾಂತರಗೊಂಡ ಪರಿಣಾಮ ತೀವ್ರವಾದ ಆರೋಗ್ಯ ಸಮಸ್ಯೆಯ ಸೂಚನೆಗಳಿಲ್ಲವೆಂದು ಸಿಂಗಾಪುರ ಸರ್ಕಾರ ಸ್ಪಷ್ಟಪಡಿಸಿದೆ.

 



ಚೆನ್ನೈ ಸೂಪರ್ ಕಿಂಗ್ ಮತ್ತು ರಾಯಲ್ ಚಾಲೆಂಜರ್ಸ್  ಬೆಂಗಳೂರು ನಡುವೆ ನಿನ್ನೆ ಬೆಂಗಳೂರು ಲ್ಲಿ ನಡೆದ ಪಂದ್ಯಾಟದಲ್ಲಿ  ರಾಯಲ್ ಚಾಲೆಂಜರ್ಸ್ ಸಿಯಸ್ ಕೆ ತಂಡವನ್ನು 27 ರನ್ನುಗಳಿಂದ ಸೋಲಿಸಿ ಪ್ಲೇ ಆಫ್ ಪ್ರವೇಶ ಪಡೆದುಕೊಂಡಿದೆ.ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಗೆ 218 ರನ್ ಗಳಿಸಿತು ಗುರಿ ಬೆನ್ನೆಟ್ಟಿದ ಚೆನ್ನೈ 20 ಓವರ್ ಏಳು ವಿಕೆಟ್ ಗೆ 191 ರನ್ ಗಳಿಸಿ ಸೋಲು ಅನುಭವಿಸಿತು.ಆರು ಪಂದ್ಯಗಳಲ್ಲಿ ನಿರಂತರವಾಗಿ ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ಫಿನಿಕ್ಸ್ ನಂತೆ  ಪ್ಲೇ ಆಫ್ ಅರ್ಹತೆ ಪಡೆದಿದೆ.

 


 ಮೇ.15 ರಿಂದ ಆರಂಭವಾಗಿದ್ದ ಎಸ್ ಎಸ್ ಎಲ್ ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.




ಈ ಹಿನ್ನಲೆ ಎಸ್. ಎಸ್.ಎಲ್.ಸಿ. ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್ 07 ರಿಂದ ನಡೆಯಬೇಕಿದ್ದ ಎಸ್. ಎಸ್.ಎಲ್.ಸಿ ಪರೀಕ್ಷೆ-2 ಯನ್ನು ಕೂಡ ಮುಂದೂಡಲಾಗಿದ್ದು, ಅದನ್ನು ಜೂ.14 ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.

ಈ ಹಿಂದೆ ಮೇ 15ರಿಂದ ಜೂನ್ 5ರವರೆಗೆ ವಿಶೇಷ ಪರಿಹಾರ ಬೋಧನೆ ತರಗತಿ ನಡೆಸಲು ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದರೆ, ಈಗ ಸರ್ಕಾರದ ಸೂಚನೆ ಮೇರೆಗೆ ದಿನಾಂಕವನ್ನು ಮುಂದೂಡಿರುವ ಪ್ರೌಢ ಶಿಕ್ಷಣ ಇಲಾಖೆ, ವಿಶೇಷ ತರಗತಿಗಳನ್ನು ಮೇ 29 ರಿಂದ ಜೂನ್ 13ರವರೆಗೆ ನಡೆಸಲು ಆದೇಶ ನೀಡಲಾಗಿದೆ.

 



ಬೆಂಗಳೂರು : ರಾಜ್ಯ ಸರಕಾರ ನೇರವಾಗಿ ಜನರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಬರ ಪರಿಹಾರ, ವಿವಿಧ ಯೋಜನೆಗಳ ಸಹಾಯಧನ, ಸಾಮಾಜಿಕ ನೆರವು ಯೋಜನೆಯ ಸಹಾಯಧನ ಮುಂತಾದನ್ನು ರೈತರ ಒಪ್ಪಿಗೆ ಇಲ್ಲದೆ ಅವರ ಸಾಲದ ಖಾತೆಗೆ ಹಣ ಹೊಂದಾಣಿಕೆ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.




ಸಿಎಂ ವಿವಿಧ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ್ದು, ಬರ ಪರಿಹಾರ, ಪಿಂಚಣಿ ಹಣವನ್ನು ರೈತರ ಅನುಮತಿ ಇಲ್ಲದೆ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಸೂಚಿಸಿದ್ದಾರೆ.

ಕೆಲವು ಕಡೆ ಬ್ಯಾಂಕಗಳು ಪರಿಹಾರ ಹಣವನ್ನು ರೈತರ ಸಾಲಕ್ಕೆ ಹೊಂದಿಸುತ್ತಿರುವ ಕುರಿತು ದೂರು ವರದಿಗಳು ಬರುತ್ತಿವೆ. ಈ ವಿಷಯದಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ನೀಡಿರುವ ನಿರ್ದೇಶನ ಉಲ್ಲಂಘಿಸಿದರೆ ಅಂತಹ ಬ್ಯಾಂಕಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಿ.ಎಂ ತಿಳಿಸಿದ್ದಾರೆ.

 



ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಹುದಿನದ ಬೇಡಿಕೆಯಾಗಿದ್ದ ಗ್ರಾಮೀಣ ಪತ್ರಕರ್ತರರಿಗೆ ಬಸ್ ಪಾಸ್ ನೀಡುವ ಸಂಬಂಧ ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾತು ಕೊಟ್ಟಂತೆ ಈ‌ ವರ್ಷದ ಬಜೆಟ್ ನಲ್ಲಿ ಅದನ್ಬು ಘೋಷಣೆ ಸಹ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ  ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಪ್ರಧಾನ‌ ಕಾರ್ಯದರ್ಶಿಗಳು ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರು ರಾಜ್ಯದ ಅಡಳಿತದ ಶಕ್ತಿದೇಗುಲವಾದ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿಗ ತೆರಳಿ ಅಭಿನಂದನೆ ಪತ್ರ ಸಲ್ಲಿಸಿದರು.




ಸಂಘದ ನಿಯೋಗದೊಂದಿಗೆ ಮುಖ್ಯಮಂತ್ರಿಗಳು ಮನದುಂಬಿ ಮಾತನಾಡಿದರು. ರಾಜ್ಯದ ಸಾವಿರಾರು ಗ್ರಾಮೀಣ ಪತ್ರಕರ್ತರಿಗೆ ನಿಮ್ಮ ಘೋಷಣೆಯಿಂದ ತುಂಬ ಅನುಕುಲ ಆಗಲಿದ್ದು, ನಿಮ್ಮ ಈ ಉದಾರತೆಗೆ ಪತ್ರಕರ್ತರ ಸಂಘ ಸದಾ ಚಿರರುಣಿಯಾಗಿರುತ್ತದೆ ಎಂದು ತಗಡೂರು ಹೇಳಿದರು. ಇದಕ್ಕೆ ಮುಖ್ಯಮಂತ್ರಿಗಳು ನಗುತ್ತಲ್ಲೆ ಕೈಜೋಡಿಸಿದರು.

ನಿಯೋಗದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪುಂಡಲಿಕ್ ಬಾಳೋಜಿ, ಭವಾನಿಸಿಂಗ್ ಠಾಕೂರ್, ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಖಜಾಂಚಿ  ವಾಸುದೇವ ಹೊಳ್ಳ, ಹಾಸನ ಜಿಲ್ಲಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಮದನಗೌಡ,    ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ವಿಜಯನಗರ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ರಾಯಚೂರಿನ ಗುರುನಾಥ್,  ಮಂಗಳೂರು ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ ಇಂದಾಜೆ,ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟಾ, ಖಜಾಂಚಿ ಪುಷ್ಪರಾಜ್ ಮೊದಲಾದವರು ಉಪಸ್ಥಿತರಿದ್ದರು.

 


ಮುಂದಿನ ಶೆಕ್ಷಣಿಕ ವರ್ಷದಿಂದ ಹತ್ತನೇ ತರಗತಿಯಲ್ಲಿ ಗ್ರೆಸ್ ಮಾರ್ಕ್ ರದ್ದುಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಶಿಕ್ಷಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಶಿಕ್ಷಣ ಇಲಾಖೆ ಯಿಂದ ಗ್ರೆಸ್ ಮಾರ್ಕ್ ಸಾಕಷ್ಟು ವಿರೋಧ ಬಂದಿದೆ,ಈ ಕ್ರಮ ಅವೈಜ್ಞಾನಿಕ ಅಭಿಪ್ರಾಯಗಳಿವೆ , ಹತ್ತನೇ ತರಗತಿಯಲ್ಲಿ ಗ್ರೇಸ್ ಮಾರ್ಕ್ ಕೊಡುವ ಅಗತ್ಯವಿದೆಯೇ ಸಿದ್ದರಾಮಯ್ಯ ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ. ಈ ಬಾರಿ ಮಾತ್ರ ಗ್ರೇಸ್ ಮಾರ್ಕ್ ಮುಂದಿನ ಬಾರಿ ಈ ಕ್ರಮ ಕೈಬಿಡಲಾಗುವುದೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.ಮುಂದಿನ ವರ್ಷದಿಂದ ಹಿಂದಿನ ಪದ್ಧತಿಯಂತೆ ಮುಂದುವರಿಯಲಿದ್ದು,20% ಗ್ರೇಸ್ ಮಾರ್ಕ್ ಗಳಿಗೆ ಅವಕಾಶವಿಲ್ಲ ತೀರ್ಮಾನವನ್ನು ಸರ್ಕಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ.

 



ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ವಿಕಾಸ ವರ್ಗ  ದ್ವಿತೀಯ ಪ್ರಾರಂಭಗೊಂಡಿದೆ.ರಾಷ್ಟ್ರಾದ್ಯಂತ  936 ಶಿಕ್ಷಾರ್ಥಿಗಳು ಭಾಗವಹಿಸಿದ್ದು ರಾಜ್ಯದ ಒಟ್ಟು 24 ಜನ ಈ ವಿಕಾಸ ವರ್ಗದಲ್ಲಿ ಶಿಕ್ಷಾರ್ಥಿಗಳಾಗಿದ್ದಾರೆ.




ವರ್ಗದ ಸರ್ವಾಧಿಕಾರಿ ಇಕ್ಬಾಲ್ ಸಿಂಗ್,ಆರೆಸ್ಸೆಸ್ ಪ್ರಮುಖರಾದ ಡಾ:ಕೃಷ್ಣ ಗೋಪಾಲ್, ಪರಾಗ್ ಅಭ್ಯಂಕರ್, ಮುಕುಂದ್ ಸಿ.ಆರ್ ಮತ್ತಿತರ ರು ಉಪಸ್ಥಿತರಿದ್ದರು. ಜೂನ್ 8 ರವರೆಗೆ ಈ ವರ್ಗ ನಡೆಯಲಿದೆ.

 



ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇದೇ 18ರಿಂದ 21ರವರೆಗೆ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ 19 ಮತ್ತು 20ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಆರೆಂಜ್ ಅಲರ್ಟ್‌ ಇರುವ ದಿನಗಳಲ್ಲಿ ಮಿಂಚು, ಗುಡುಗು ಸಿಡಿಲುಗಳಿಂದ ಕೂಡಿದ ಭಾರಿ ಮಳೆಯಾಗಲಿದೆ. ಜಿಲ್ಲೆಯ ಕೆಲವೆಡೆ 11.55 ಸೆಂ.ಮೀನಿಂದ 20.44 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.



ಇದೇ 18 ಮತ್ತು 21ರಂದು ಜಿಲ್ಲೆಯಲ್ಲಿ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಈ ಎರಡು ದಿನಗಳಲ್ಲಿ ಗುಡುಗು ಸಿಡಿಲುಗಳಿಂದ ಕೂಡಿದ ಮಳೆಯಾಗಲಿದೆ. ಕೆಲವೆಡೆ 6.45 ಸೆಂ.ಮೀ.ಯಿಂದ 11.55 ಸೆಂ.ಮೀ.ವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 



ಈ ಬಾರಿ ವಿಶೇಷವಾಗಿ ಸ್ಥಳೀಯ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು.ಈ ಮೂಲಕ ಸ್ಥಳೀಯವಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಆದೇಶಿಸಲಾಗಿದೆ.ಈ ಬಾರಿ ಮಳೆಯ ಪ್ರಮಾಣ ಅಧಿಕವಿರುವ ಕಾರಣ ಬೇರೆ ಬೇರೆ ಕಡೆಗಳಿಗೆ ಬೇರೆ ಬೇರೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಗ್ರಾಮೀಣ ಪ್ರದೇಶಗಳಿಗೆ ಒಂದು ಯೋಜನೆಯಾದರೆ ನಗರ ಪ್ರದೇಶಗಳಿಗೆ ಪ್ರತ್ಯೇಕ ಯೋಜನೆ ಹಮ್ಮಿಕೊಳ್ಳಲಾಗುವುದು. ಈ ಯೋಜನೆಯಲ್ಲಿ ಸ್ಥಳೀಯಾಡಳಿತಕ್ಕೆ ಸಂಪೂರ್ಣ ಜವಾಬ್ದಾರಿ ನೀಡಲಾಗುತ್ತದೆ. ಸ್ಥಳೀಯವಾಗಿ ಆಗುವ ಸಮಸ್ಯೆಗಳಿಗೆ ಸ್ಥಳೀಯವಾಗಿ ನಿವಾರಣೆ ಮಾಡುವುದು ಯೋಜನೆಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕುಕ್ಕೆ ಸುಬ್ರಹ್ಮಣ್ಯದಲ್ಲಿ  ಹೇಳಿದರು.




ಕುಕ್ಕೆಸುಬ್ರಹ್ಮಣ್ಯದಲ್ಲಿ ಮೇ.16  ಸಂಜೆ ನಡೆದ ಪುತ್ತೂರು ಉಪ ವಿಭಾಗದ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಮೊದಲಾದ ಪ್ರದೇಶಗಳ ಅಧಿಕಾರಿಗಳೊಂದಿಗೆ ನಡೆಸಲಾದ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಯ ಬಳಿಕ ಅವರು ಮಾತನಾಡಿದರು. ಗ್ರಾಮ ಪಂಚಾಯತ್ ಸೇರಿದಂತೆ ಇತರ ಕಚೇರಿಗಳಲ್ಲಿ ಮತ್ತು ಮಾದ್ಯಮಗಳಲ್ಲಿ 

ಯೋಜನೆಯ ವಿವರಗಳನ್ನು ಬಿತ್ತರಿಸಲಾಗುವುದು ಎಂದರು.



*ಸ್ಥಳೀಯವಾಗಿ ವ್ಯವಸ್ಥೆ*: 

ಸ್ಥಳೀಯವಾಗಿ ಜೆಸಿಬಿ, ರೋಪ್ ಗಳು, ಬೋಟ್, ಮಿಷನ್, ಸೈಯಿಂಗ್ ಮಿಷನ್ ಗಳು ಇತ್ಯಾದಿಗಳನ್ನು ಸ್ಥಳೀಯವಾಗಿ ತಯಾರಿರುವಂತೆ ವ್ಯವಸ್ಥೆ ಮಾಡಲಾಗುವುದು.ಅದನ್ನು ದಾಟಿ ಬರುವ ಸಮಸ್ಯೆಗಳ‌ ನಿವಾರಣೆಗೆ ತಹಶೀಲ್ದಾರ್ ಗೆ ಮತ್ತು ಅಗ್ನಿ ಶಾಮಕ ದಳಕ್ಕೆ ಜವಾಬ್ದಾರಿ ನೀಡಲಾಗುವುದು.  ನಂತರ ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ಗಳಿಗೆ ಜವಬ್ದಾರಿ ಹೊರಿಸುವ ಯೋಜನೆಯನ್ನು ಮಾಡಲಾಗಿದೆ.ಈ‌ ಮೂಲಕ ಪ್ರಾಕೃತಿಕ ವಿಕೋಪ   ಅಳವಡಿಸಿಕೊಳ್ಳಬೇಕಾದ ಮುಂಜಾಗ್ರತಾ ಕ್ರಮವನ್ನು ಯೋಜನಾಬದ್ದವಾಗಿ ಅಳವಡಿಸಿಕೊಳ್ಳಲಾಗಿದೆ ಎಂದು ಡಿಸಿ ಹೇಳಿದರು.



*ಈಗಾಗಲೇ ಮುಂಜಾಗ್ರತಾ ಸಭೆ ನಡೆಸಲಾಗಿದೆ*:

ಪುತ್ತೂರು ಉಪ ವಿಭಾಗದ ಪ್ರದೇಶಗಳ 

ಪುತ್ತೂರು ಉಪವಿಭಾಗ ವ್ತಾಪ್ತಿಯ ಕಡಬ, ಸುಳ್ಯ, ಬೆಳ್ತಂಗಡಿ, ಪುತ್ತೂರು ಪ್ರದೇಶಗಳೊಂದಿಗೆ ಪ್ರಾಕೃತಿಕ ವಿಕೋಪದ ಮುಂಜಾಗ್ರತಾ  ಕ್ರಮ ಅನುಸರಿಸುವ ಸಲುವಾಗಿ ಸಭೆ ನಡೆಸಲಾಗಿದೆ.ಈ ಭಾಗಗಳ ಅಧಿಕಾರಿಗಳೊಂದಿಗೆ ಅಲ್ಲಿನ ಪರಿಸರ ಮತ್ತು ಪ್ರಾಕೃತಿಕ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ.ಈಗಾಗಲೇ ಈ ಬಗ್ಗೆ ಮೂರು ಸಭೆಗಳನ್ನು ನಡೆಸಲಾಗಿದೆ.ಇದೀಗ 4 ನೇ ಬಾರಿಗೆ ಪುತ್ತೂರು ಉಪ ವಿಭಾಗದ ವ್ಯಾಪ್ತಿಯ ಸಭೆಯನ್ನು ಮಾಡಲಾಗಿದೆ ಎಂದು ನುಡಿದರು. 


   *5 ಲಕ್ಷ ರೂ ಪರಿಹಾರ*: 

ಪ್ರಾಕೃತಿಕ ವಿಕೋಪ ಪರಿಹಾರವಾಗಿ 24 ಗಂಟೆಯೊಳಗೆ 5 ಲಕ್ಷ ರೂ  ನೀಡಲಾಗುವುದು.ಈಗಾಗಲೇ ಕಡಬದಲ್ಲಿ ಸಿಡಿಲು ಬಡಿದ ಓರ್ವರು ಉತ್ತರ ಪ್ರದೇಶದವರು ಇರುವ ಕಾರಣ ಅವರ ವಾರಸುದಾರರ ಬಗ್ಗೆ ತಿಳಿದುಕೊಂಡು ಅವರ ವಾರಸುದಾರರಿಗೆ ಮೊತ್ತ ನೀಡಲಾಗುವುದು.ಈ ಬಗ್ಗೆ  ಈಗಾಗಲೇ ಅಲ್ಲಿನ ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆಯಲಾಗಿದೆ.ಅವರಿಂದ ವಿವರ ಬಂದ ತಕ್ಷಣ ನೀಡಲಾಗುವುದು. ಕೆಲ ಕಡೆ ನಡೆದ ಘಟನೆಗಳಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ ಎಂದು ಡಿಸಿ ನುಡಿದರು.


*ಜಾಗೃತಿ ಮೂಡಿಸಲು ಕರೆ*

 ಸಿಡಿಲು, ಗುಡುಗು,ಗಾಳಿ ಮಳೆಯ ಬಗ್ಗೆ ಸಾರ್ವಜನಿಕರಲ್ಲಿ ಮಾದ್ಯಮದವರು ಜಾಗೃತಿ ಮೂಡಿಸಬೇಕು.ಗುಡುಗು,ಸಿಡಿಲು, ಗಾಳಿ ಮಳೆ ಸಂದರ್ಭ ಸಾರ್ವಜನಿಕರು ಜಾಗ್ರತೆ ವಹಿಸಬೇಕು.ಸರ್ವರೂ ಈ ಸಂದರ್ಭದಲ್ಲಿ ಜಾಗರೂಕರಾಗಿ ಇರಬೇಕು ಎಂದು ಹೇಳಿದರು.

 

*ಸಿಡಿಲಿನ ಬಗ್ಗೆ ಆ್ಯಪ್*

ಸಿಡಿಲಿನ ಬಗ್ಗೆ ಒಂದು ಆಪ್ ಇದೆ. ಡಿಸಾಸ್ಟ್ರಸ್ ಮೆನೇಜ್ ಮೆಂಟ್ ನಿಂದ ಈ ಆಪ್ ರಚಿಸಲಾಗಿದೆ. ಸಿಡಿಲಿನ  ಬಗ್ಗೆ ತಿಳಿಸುವ ಆಪ್ ಇದಾಗಿದೆ.ಇದನ್ನು ಡೌನ್ ಲೋಡ್ ಮಾಡಿಕೊಂಡು ಸಿಡಿಲು ಬರುವ ತಾಣದ ಬಗ್ಗೆ ಮೊದಲೆ ತಿಳಿದುಕೊಳ್ಳಲು ಆಗುತ್ತದೆ.ಆದುದರಿಂದ ಈ ಆಪ್ ತುಂಬಾ ಪ್ರಯೋಜನಕಾರಿ ಮತ್ತು  ಸಹಕಾರಿ .ಸಿಡಿಲು ಬರುವ ಸಂದರ್ಭ ತಿಳಿದುಕೊಂಡು  ಆದಷ್ಟು ಮನೆಯ ಒಳಗೆ ಇದ್ದು, ವಿದ್ಯುತ್ ಉಪಕರಣಗಳ ಉಪಯೋಗ ಮಾಡದಂತೆ, ಮರಗಳ ಅಡಿಯಲ್ಲಿ ನಿಲ್ಲದಂತೆ  ಸಾರ್ವಜನಿಕರು ಎಚ್ಚರಿಕೆ ವಹಿಸಲು ಇದು ಉಪಯೋಗವಾಗುತ್ತದೆ. ಸಹ

.ಅಲ್ಲದೆ ಈ ಭಾಗದಲ್ಲಿ ಲೈಟ್ನಿಂಗ್ ಎರೆಸ್ಟ್ ರಚಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ಡಿಸಿ ನುಡಿದರು

 ಈ ಸಂದರ್ಭದಲ್ಲಿ

ಪುತ್ತೂರು  ಉಪವಿಭಾಗ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ,

ಸುಳ್ಯ ತಹಶಿಲ್ದಾರ್ ಮಂಜುನಾಥ ಜಿ., ಕಡಬ ತಹಶಿಲ್ದಾರ್ ಪ್ರಭಾಕರ ಕಜೂರೆ, ಪುತ್ತೂರು ತಹಶಿಲ್ದಾರ್ ಕುಂಞಿ ಅಹ್ಮದ್, ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಮ್, ಕಡಬ ಕಂದಾಯ ನಿರೀಕ್ಷಕ ಪೃಥ್ವಿಕುಮಾರ್, ಪಂಜ ಕಂದಾಯ ನಿರೀಕ್ಷಕ ರಂಜನ್ ಕಲ್ಕುದಿ, ಕಡಬ ಉಪ ತಹಶಿಲ್ದಾರ್ ಮನೋಹರ್ ಕೆ.ಟಿ. ಸುಳ್ಯ ನ.ಪಂ. ಮುಖ್ಯಾಧಿಕಾರಿ ಬಿ.ಎಂ.ಡಾಂಗೆ, ಸುಬ್ರಹ್ಮಣ್ಯ ಗ್ರಾ.ಪಂ. ಕಾರ್ಯದರ್ಶಿ ಮೋನಪ್ಪ.ಡಿ ಸೇರಿದಂತೆ  ಪುತ್ತೂರು ಉಪವಿಭಾಗ ವ್ಯಾಪ್ತಿಯ ನಾಲ್ಕು ತಾಲೂಕುಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 



ಅಡಿಕೆ ಬೆಳೆಯನ್ನೇ ನಂಬಿರುವ ರೈತರ ಪಾಲಿಗೆ ಬೆಲೆ ಹೆಚ್ಚುತ್ತಾ ಸಾಗುತ್ತಿದ್ದು ಮುಖದಲ್ಲಿ ಮಂದಹಾಸ ಮೂಡಿದೆ.

ಮಂಗಳೂರು ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ಧಾರಣೆ ಏರುಗತಿಯಲ್ಲಿ ಸಾಗಿದ್ದು ಡಬ್ಬಲ್‌ ಚೋಲ್‌, ಸಿಂಗಲ್‌ ಚೋಲ್‌ ಧಾರಣೆ 500 ರೂ. ಹತ್ತಿರಕ್ಕೆ ತಲುಪಿದೆ.

ಮೇ 15ರಂದು ಹೊರ ಮಾರುಕಟ್ಟೆಯಲ್ಲಿ 390 ರೂ. ತನಕ ಖರೀದಿಯಾಗಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿನ ಧಾರಣೆ ಗಮನಿಸಿದರೆ ಹೊಸ ಅಡಿಕೆಗೆ ಮಾತ್ರ ಇಲ್ಲಿ ಬೇಡಿಕೆ ಇರುವುದು ಕಂಡು ಬಂದಿದೆ. ಕ್ಯಾಂಪ್ಕೋದಲ್ಲಿ ಮೇ 15ರಂದು ಹೊಸ ಅಡಿಕೆಗೆ 380 ರೂ., ಸಿಂಗಲ್‌ ಚೋಲ್‌ಗೆ 465 ರೂ., ಡಬ್ಬಲ್‌ ಚೋಲ್‌ಗೆ 475 ರೂ. ದಾಖಲಾಗಿದೆ.




ಕೆ.ಜಿ.ಗೆ 320 ರೂ. ವರೆಗೆ ಏರಿಕೆ ಕಂಡಿದ್ದ ಹಸಿ ಕೊಕ್ಕೋ ಧಾರಣೆ ಇದೀಗ 220 ರೂ.ಗೆ ಇಳಿದಿದೆ. ಬುಧವಾರ ಕ್ಯಾಂಪ್ಕೋ ಸಂಸ್ಥೆ 150-220 ವರೆಗೆ ಹಸಿ ಕೊಕ್ಕೋ ಖರೀದಿಸಿದೆ. ಒಣ ಕೊಕ್ಕೊ ಧಾರಣೆ 650- 700 ರೂ.ಗಳಷ್ಟಿತ್ತು.

ಮಳೆ ಇಲ್ಲದೇ ಅಡಿಕೆ ಕೃಷಿಗೆ ನೀರಿನ ಅಭಾವ ಎದುರಾಗಿದ್ದರು ಬೆಲೆ ಹೆಚ್ಚುವತ್ತ ಸಾಗುತ್ತಿದ್ದು ರೈತರು ಸಂತಸದಲ್ಲಿದ್ದರು ಎಷ್ಟು ದಿನಗಳ ವರೆಗೆ ಈ ಬೆಲೆ ಇರುತ್ತದೆ ಎಂಬುದು ಕಾದು ನೋಡಬೇಕಾಗಿದೆ.

 



ಸುಳ್ಯದ ರಥಬೀದಿ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿ ಶ್ರೀಮತಿ ತೇಜಾಕ್ಷಿ ನಂದಕುಮಾರ್ ಬಾರೆತ್ತಡ್ಕ ಕೋಡ್ತೀಲು ಇವರ ನೂತನ ಆಡಳಿತದೊಂದಿಗೆ  ಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್ ರೈಟಿಂಗ್ ಎಜ್ಯುಕೇಶನ್ ಮೇ.10 ರಂದು ಶುಭಾರಂಭಗೊಂಡಿದೆ.




ಇಲ್ಲಿ  ಕಂಪ್ಯೂಟರ್ ನಲ್ಲಿ ಅನುಭವವಿರುವ ನುರಿತ ಶಿಕ್ಷಕರಿದ್ದು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಸಿಕೊಡಲಾಗುವುದು. ಗ್ರಾಫಿಕ್ ಡಿಸೈನ್,ಟೈಪ್ ರೈಟಿಂಗ್ ಹಾಗೂ ಎಲ್ಲಾ ತರದ ಕಂಪ್ಯೂಟರ್ ಕೋರ್ಸುಗಳು ಲಭ್ಯವಿದ್ದು

ದಾಖಲಾತಿ ಆರಂಭಗೊಂಡಿರುವುದಾಗಿ ಮಾಲಕರು ತಿಳಿಸಿದ್ದಾರೆ.




 



ಮಂಗಳೂರು(ಉಡುಪಿ): ರಾಜ್ಯದ ಸಮುದ್ರ ಕರಾವಳಿಯ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಹಾರ್ಬರ್ ಕ್ರಾಫ್ಟ್ ನಿಯಮದಡಿ ನೀಡಲಾದ ಪರವಾನಿಗೆಯಂತೆ ಮಲ್ಪೆ ಬೀಚ್, ಸೀವಾಕ್ ಪ್ರದೇಶದಲ್ಲಿ ಓಡಾಟ ನಡೆಸುವ ಎಲ್ಲಾ ತರಹದ ಪ್ರವಾಸೀ ಬೋಟ್ ಚಟುವಟಿಕೆಗಳನ್ನು ಮತ್ತು ಸೈಂಟ್ ಮೆರೀಸ್ ದ್ವೀಪಕ್ಕೆ ತೆರಳುವಂತಹ ಪ್ರವಾಸೀ ಬೋಟ್ ಚಟುವಟಿಕೆಗಳನ್ನು ಮೇ 16 ರಿಂ ಸೆಪ್ಟೆಂಬರ್ 15 ರವರೆಗೆ ಹಾರ್ಬರ್ ಕ್ರಾಫ್ಟ್ ನಿಯಮಗಳ ಅನ್ವಯ ಸ್ಥಗಿತಗೊಳಿಸಲಾಗಿದೆ ಎಂದು ಉಡುಪಿ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

 



ಭಾರತ ದೇಶ ಜಗತ್ತಿಗೆ ನಿಬ್ಬೆರಗಾಗುವಂತೆ ಅಭಿವೃದ್ಧಿ ಸಾಧಿಸಿದೆಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.ಕಳೆದ ಹತ್ತು ವರ್ಷಗಳಲ್ಲಿ ದೇಶ ಒಂದು ಪ್ರಗತಿಯತ್ತ ಸಾಗುತ್ತಿದ್ದು,ಎಲ್ಲಾ ವಿಚಾರಗಳಲ್ಲೂ ಜಗತ್ತಿಗೆ ಮಾದರಿಯಾದ ಕಾರ್ಯ ನಡೆದಿದೆ.ದೇಶ ಸದ್ಯಕ್ಕೆ ಪ್ರಗತಿಯತ್ತ ಹೆಜ್ಜೆಯತ್ತ ಸಾಗಿದೆಯೆಂದು ರಶ್ಮಿಕಾ ಮಂದಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 



ನೈಋತ್ಯ ಪದವೀಧರ ಕ್ಷೇತ್ರ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಚುನಾವಣಾ ಕಾರ್ಯಾಲಯ ತೆರೆಯಲಾಗಿದೆ ಈ ಸಂದರ್ಭದಲ್ಲಿ ಪರೋಕ್ಷವಾಗಿ ಹಾಲಿ ಶಾಸಕ ಯಶಪಾಲ್ ಸುವರ್ಣ ವಿರುದ್ಧ  ಅಸಮಾಧಾನ ಹೊರ ಹಾಕಿದ್ದಾರೆ ಕಳೆದ ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪಿದರು ಅವರ ಬೆನ್ನಿಗೆ ನಿಂತು ಕೆಲಸ ಮಾಡಿರುವೆ,ಕ್ಷೇತ್ರದಲ್ಲಿ ನನ್ನ ಅವಧಿಯ ಅಭಿವೃದ್ಧಿ ಕಾರ್ಯ ಉದ್ಘಾಟನೆಗೆ ಸೌಜನ್ಯಕ್ಕೂ ನನ್ನನ್ನು ಕರೆಯುತ್ತಿಲ್ಲ ಪಕ್ಕದ ಕಾಪು ಶಾಸಕ ಗುರ್ಮೆ ಮಾಜಿ ಶಾಸಕ ಲಾಲಜಿ ಎಲ್ಲಾ ಕಾರ್ಯಕ್ರಮದಲ್ಲಿ ಅವರನ್ನೇ ಕರೆದು ಉದ್ಘಾಟಿಸುತ್ತಿದ್ದರೆ,ಈ ಬಾರಿ ಲೋಕಸಭಾ ಚುನಾವಣೆ ಕರಪತ್ರ ದಲ್ಲಿ ನನ್ನ ಫೋಟೋ ಕೂಡ ಮುದ್ರಿಸಿಲ್ಲ,ನಾನು ಪಕ್ಷಕ್ಕಾಗಿ ದುಡಿದಿದ್ದೇನೆ,ಚುನಾವಣೆ ಯಲ್ಲಿ ನನ್ನ ಪಕ್ಷದ ವಿರುದ್ಧ ಒಂದು ಮಾತನಾಡಿಲ್ಲ, ಆದರೆ ನನ್ನನ್ನು ನಡೆಸಿಕೊಂಡ ರೀತಿ  ನನಗೆ ಅನ್ಯಾಯ ಮಾಡಿದ್ದಾರೆ ಈ ಎಲ್ಲಾ ಕಾರಣಕ್ಕೆ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ,ಉಡುಪಿ ಕ್ಷೇತ್ರದಲ್ಲಿ ನನ್ನನ್ನು ಎಲ್ಲಾ ವಿಚಾರಗಳಲ್ಲಿ ಕಡೆಗಣಿಸಲಾಗಿದೆ,ನಾನು ಬಿಜೆಪಿ ಯೇ ಮುಂದೆಯೂ ಬಿಜೆಪಿ ಯೆಂದು ರಘುಪತಿ ಭಟ್ ಹೇಳಿದರು.

 



ಮಾಣಿ - ಮೈಸೂರು ಹೆದ್ದಾರಿ ಚತುಷ್ಪಥಗೊಳ್ಳುವ ಹಿನ್ನೆಲೆಯಲ್ಲಿ ಸುಳ್ಯದ ಪೈಚಾರಿನಲ್ಲಿ ಕಾಮಗಾರಿ ಹಂತದಲ್ಲಿರುವ ಸೇತುವೆಯ ಬಳಿಯ ಅಂಗಡಿ ಮತ್ತು ಮನೆಗಳಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ತಂಡ ಮೇ 15ರಂದು  ಭೇಟಿ ನೀಡಿ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟ ಜಾಗವನ್ನು ತೆರವುಗೊಳಿಸುವಂತೆ ಮನವಿ ಮಾಡಿ ಸೂಚನೆ ನೀಡಿದ್ದಾರೆ.



ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ 4 ಸೇತುವೆಗಳ ಅಗಲೀಕರಣ ಗೊಳ್ಳುತ್ತಿದ್ದು, ಈಗಾಗಲೇ ಮೂರು ಸೇತುವೆಗಳು ಕಾಮಗಾರಿ ಪೂರ್ಣಗೊಂಡಿದೆ.

ಪೈಚಾರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಅಗಲೀಕರಣಕ್ಕೆ ಸ್ಥಳೀಯ ಅಂಗಡಿ ಮುಂಗಟ್ಟುಗಳು ಮತ್ತು ಕೆಲವು ಮನೆಗಳ ಕಾಂಪೌಂಡ್ ಗೋಡೆಗಳ ತೆರವು ಕಾರ್ಯ ನಡೆಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು  ಭೇಟಿ ನೀಡಿ ಅಂಗಡಿ ಮತ್ತು ಮನೆಗಳ ಮಾಲಕರಿಗೆ ಮಾಹಿತಿಯನ್ನು ನೀಡಿ ತೆರವುಗೊಳಿಸಬೇಕಾದ ಪ್ರದೇಶದ ಬಗ್ಗೆ ಗುರುತುಗಳನ್ನು ಮಾಡಿ ಮಾಹಿತಿಯನ್ನು ನೀಡಿರುತ್ತಾರೆ.


ಪೈಚಾರು ಬದ್ರಿಯಾ ಮಸೀದಿ ಮುಂಭಾಗದಿಂದ ರಸ್ತೆಯ ಎರಡು ಭಾಗಗಳಲ್ಲಿ ಕುಂಞಿ ಪಳ್ಳಿ ವಕೀಲರ ಮನೆಯ ತನಕ ಸುಮಾರು 300 ಮೀಟರ್ ಉದ್ದ ಮತ್ತು  ರಸ್ತೆಗೆ 3 ಡಿವೈಡರ್ ನಿಂದ ದ 9.8 ಮೀಟರ್ ಅಗಲದಲ್ಲಿ ವಿಸ್ತೀರ್ಣಗೊಳ್ಳಲಿದ್ದು,ಸ್ಥಳ ಗುರುತು ಮಾಡಿ ಆದಷ್ಟು ಶೀಘ್ರದಲ್ಲಿ ತೆರವುಗೊಳಿಸಲು ಸೂಚನೆ ನೀಡಿದ್ದಾರೆ.


ಈ ಸಂದರ್ಭದಲ್ಲಿ  ರಾಷ್ಟ್ರೀಯ ಹೆದ್ದಾರಿ ಮಂಗಳೂರು ಇಲಾಖೆಯ ಭೂ ಸ್ವಾಧೀನಾಧಿಕಾರಿ ಮಾಣಿಕ್ಯ, ಎ ಡಬ್ಲ್ಯೂ ಇ ಶಿವಪ್ರಸಾದ್, ಎ ಇ ಕೀರ್ತಿ, ಎ ಇ ಇ ನಾಗರಾಜ್, ಗುತ್ತಿಗೆದಾರ ಮಂಗಳೂರು ಮುಗ್ರೋಡಿ ಸುಧಾಕರ ಶೆಟ್ಟಿ, ಸುಳ್ಯ ಕಂದಾಯ ನಿರೀಕ್ಷಣಾಧಿಕಾರಿ ಅವಿನ್ ರಂಗತಮಲೆ ಮೊದಲಾದವರು ಉಪಸ್ಥಿತರಿದ್ದರು.

 



ಬಿಜೆಪಿ ಈ ಬಾರಿ 300 ಆಸುಪಾಸು ಸ್ಥಾನಗಳನ್ನು ಏಕಾಂಗಿಯಾಗಿ ಪಡೆದುಕೊಳ್ಳಲಿದ್ದು ಓಡಿಸ್ಸಾ,ಪಶ್ಚಿಮ ಬಂಗಾಳ,ತೆಲಂಗಾಣ, ಅಂಧ್ರ ದಲ್ಲಿ ಬಿಜೆಪಿ ಗೆ ಸೀಟು ಗಳು ಪ್ಲಸ್ ವಾಗಲಿದ್ದು,ಉತ್ತರ ಮತ್ತು ಪಶ್ಚಿಮ ದಲ್ಲಿ ಹಿನ್ನೆಡೆಯಾಗುವ ಯಾವ ಅಂಶಗಳಿಲ್ಲ, ದಕ್ಷಿಣ ಭಾಗದಲ್ಲಿ ವೋಟ್ ಶೇರ್ ಏರಿಕೆಯಾಗಲಿದೆ,ಈ ಚುನಾವಣೆಯಲ್ಲಿ ಸರ್ಕಾರ ವಿರುದ್ಧ ನೆಗೆಟಿವ್ ಅಂಶಗಳು ಕಂಡುಬಂದಿಲ್ಲ,ತೆಲಂಗಾಣ ದಲ್ಲಿ 8 ರಿಂದ ಒಂಬತ್ತು ಸ್ಥಾನ ಪಡೆಯಬಹುದೆಂದು ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.

 


ಜೂನ್ 3ರಂದು ನಡೆಯುವ ವಿಧಾನ ಪರಿಷತ್ ನ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಎನ್.ಡಿ.ಎ. ಅಭ್ಯರ್ಥಿ ಯಾಗಿ ಎಸ್.ಎಲ್.ಭೋಜೇಗೌಡ ರು ಮೈಸೂರಿನ ವಿಭಾಗೀಯ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸುಳ್ಯದಿಂದ ಜೆಡಿಎಸ್  ದ.ಕ. ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಸುಳ್ಯ ತಾಲೂಕು ಜನತಾದಳ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಉಮೇಶ್ ಗೌಡ ಮತ್ತಿತರರಿದ್ದರು.

 


ಪ್ರಧಾನಿ ನರೇಂದ್ರ ಮೋದಿ ವಾರಾಣಸಿ ಯಿಂದ ನಾಮಪತ್ರ ಸಲ್ಲಿಸಿದ್ದಾರೆ.

 ಈ ವೇಳೆ ತಮ್ಮ ಆಸ್ತಿ ವಿವರ ತಿಳಿಸಿದ್ದು ಒಟ್ಟು 3.02 ಕೋಟಿ    ಹೊಂದಿದ್ದರೆ ಅದರಲ್ಲಿ 52 ,920 ನಗದು  2,85,60,338 ಎಫ್ ಡಿ ಯಿದ್ದು ತನಗೆ ಸ್ವಂತ ಕಾರು, ಮನೆ ಇರುವುದಿಲ್ಲವೆಂದು ನಾಮಪತ್ರ ಸಲ್ಲಿಕೆ ವೇಳೆ ತಿಳಿಸಿದ್ದಾರೆ.




 ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಾಣಸಿ ಯಲ್ಲಿಂದು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಗಂಗಾ ನದಿಗೆ ತೆರಳಿ ಆರತಿ ಮಾಡಿ ನಮಸ್ಕರಿಸಿ ಕಾಲ ಭೈರವೇಶ್ವರ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆಗೂಡಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

 


ನೈಋತ್ಯ ಶಿಕ್ಷಕರ ಕ್ಷೇತ್ರ ಜೆಡಿಯಸ್ ಅಭ್ಯರ್ಥಿ ತಮ್ಮಲ್ಲಿ 32 ಕೋಟಿ ಮಿಕ್ಕಿ ಆಸ್ತಿಯಿದೆ ಘೋಷಿಸಿಕೊಂಡಿದ್ದಾರೆ.9 ಕೋಟಿ ಮಿಕ್ಕಿ ಚರಾಸ್ತಿ,22 ಕೋಟಿ ಮೌಲ್ಯ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ, ಮಗ,ಮಗಳು 30 ಲಕ್ಷ ನಗದು, ಷೇರು, ಬಂಡವಾಳ ಮತ್ತು 9 ಕೋಟಿ ಹೆಚ್ಚು ಹೂಡಿಕೆ ಮಾಡಿದ್ದಾರೆ.ತಮ್ಮ ಬಳಿ ಬೆಂಜ್,BMW,ಇನ್ನೊವಾ ಹೈಕ್ರಾಸ್, ಸೇರಿ ಐದು ವಾಹನಗಳು,ಪತ್ನಿ ವೊಕ್ಸೋವ್ಯಾಗನ್ ಮತ್ತು ಹುಂಡೈ i 10 ಹೊಂದಿರುವುದಾಗಿ ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ.

 



ಮುಂದಿನ ದಿನಗಳಲ್ಲಿ ಅಲ್ಲಾಹುನ ದಯೆಯಿಂದ ಹಿಜಾಬ್ ಧರಿಸಿದ  ಮುಸ್ಲಿಂ ಮಹಿಳೆ ಈ ದೇಶವನ್ನು ಮುನ್ನಡೆಸಲಿದ್ದು,ಆ ದಿನವನ್ನು ನನ್ನ ಕಣ್ಣುಗಳಲ್ಲಿ ನೋಡಬೇಕೆನ್ನುವುದು ನನ್ನ ಆಸೆಯಾಗಿದೆಯೆಂದು ಖಾಸಗಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಓವೈಸಿ ಹೇಳಿದ್ದಾರೆ.ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲುವಿಗಾಗಿ ಹೋರಾಟ ನಡೆಸಿದೆ,ಜನರ ತೀರ್ಮಾನ ಅಂತಿಮವಾಗಿರುತ್ತದೆ,ಗೆಲ್ಲದಿದ್ದರು ನಮ್ಮ ಹೋರಾಟ ನಿರಂತರವಾಗಲಿದೆಂದರು. ಮುಸ್ಲಿಂ ರನ್ನು ದ್ವೇಷಿಸುವ ಗುಣ ಅವರ ಡಿಎನ್ ಎ ಲ್ಲಿ ಬಂದಿದೆ,ಅದೇ ಅವರ ಸಿದ್ದಂತಾವಾಗಿದೆ,ಮೋದಿ 2002 ರಿಂದ ಅದನ್ನೇ ಪ್ರತಿಪಾದಿಸುತ್ತ ಬಂದಿದ್ದಾರೆಂದು ಓವೈಸಿ ಈ ವೇಳೆ ತಿಳಿಸಿದರು.

 


ಜೂನ್ 4 ಚುನಾವಣಾ ಫಲಿತಾಂಶ ನಂತರ ಉತ್ತರಪ್ರದೇಶ ವನ್ನು ಮಾಫಿಯಾ ಮುಕ್ತ ರಾಜ್ಯವೆಂದು ಘೋಷಿಸಲಾಗುವುದೆಂದು ಯು.ಪಿಯ ಸಿ.ಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಕ್ರಿಮಿನಲ್ ಹಿನ್ನೆಲೆ ಕುರಿತು ಸರ್ಕಾರ ನಿಲುವು ಸ್ಪಷ್ಟ ಮಾಫಿಯಾ ರೌಡಿಗಳ ಆಸ್ತಿ ಮುಟ್ಟುಗೋಲು ಹಾಕಿ ಹಿಂದುಳಿದ ವರ್ಗಗಳಿಗೆ ಮರುಹಂಚಿಕೆ ಮಾಡಲಾಗುವುದು. ಬಡವರು,ಅನಾಥರು, ಮಹಿಳೆಯರು,ಅಂಗವಿಕಲರ ಸೌಲಭ್ಯಗಳಿಗೆ ವಶಪಡಿಸಿದ ಬಳಸಲು ಕ್ರಮ ಕೈಗೊಳ್ಳಲಾಗುವುದು.ಎರಡನೇ ಹಂತದಲ್ಲಿ ಮಾಫಿಯಾ ಭೂಮಿಗಳಲ್ಲಿ ಆಸ್ಪತ್ರೆ,ಶಾಲೆ ನಿರ್ಮಿಸಲಾಗುವುದು ಈ ಬಗ್ಗೆ ಸರ್ಕಾರ ಕ್ರಿಯಾ ಯೋಜನೆ ಸಿದ್ದವಾಗಿದೆ.ರಾಜ್ಯದಲ್ಲಿ ಗಲಭೆ ಸೃಷ್ಟಿಸುವ ಯಾರೇ ಆಗಲಿ ಕಠಿಣ ಶಿಕ್ಷೆ,ಏಳು ತಲೆಮಾರು ಅನುಭವಿಸುವ ಕಠಿಣ ಶಿಕ್ಷೆ ಕ್ರಮ ಕೈಗೊಳ್ಳಲಾಗುವುದೆಂದು ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.

 



ಬಿಹಾರ ಮಾಜಿ ಉಪ ಮುಖ್ಯಮಂತ್ರಿ ,ಸಜ್ಜನ ರಾಜಕಾರಣಿ ಬಿಜೆಪಿ ನಾಯಕ ಸುಶೀಲ್ ಮೋದಿ ನಿನ್ನೆ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ.ಅರೆಸ್ಸೆಸ್ ಮೂಲಕ ಸಾಮಾಜಿಕ ಕ್ಷೇತ್ರಕ್ಕೆ ಕಾಲಿಟ್ಟ ಸುಶೀಲ್ ಮೋದಿ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಗಿ,ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿದ್ದರು.1990 ರಲ್ಲಿ ಬಿಜೆಪಿ ಮೂಲಕ ನಿರಂತರವಾಗಿ ವಿಧಾನಸಭಾ, ಪರಿಷತ್ ,ಲೋಕಸಭೆಗೆ ಆಯ್ಕೆಯಾಗಿದ್ದರು.ಲಾಲೂ ಪ್ರಸಾದ್ ಮೇವು ಹಗರಣ ಬಯಲಿಗೆಳೆದವರು,ಬಾಂಗ್ಲಾ ನುಸುಳುಕೋರರ ವಿರುದ್ದ ಹೋರಾಟ, ಹಣಕಾಸು ಸಚಿವರಾಗಿ ಸಮರ್ಥವಾಗಿ ನಿಭಾಯಿಸಿದವರು,ಇವರ ನಿಧನಕ್ಕೆ ಪ್ರಧಾನಿ ಮೋದಿ,ರಾಜಕೀಯ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.

 



ಉಡುಪಿ: ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.


ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿಯೂ ಪಕ್ಷವು ಉಡುಪಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಿತ್ತು.ಆ ಸಂದರ್ಭದಲ್ಲಿಯೂ ಭಟ್ ಅವರು ಬೇಸರಗೊಂಡಿದ್ದರು. ಬಳಿಕ ಪಕ್ಷದ ವರಿಷ್ಠರು ವಿಧಾನ ಪರಿಷತ್ ನಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆ ಬಳಿಕ ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿ, ಅಭ್ಯರ್ಥಿಯ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಲೋಕಸಭೆ ಚುನಾವಣೆಯಲ್ಲೂ ಶಿವಮೊಗ್ಗ ಕ್ಷೇತ್ರದ ಉಸ್ತುವಾರಿಯನ್ನು ವಹಿಸಿಕೊಂಡು ಅಭ್ಯರ್ಥಿಯ ಪರವಾಗಿ ಉತ್ತಮವಾಗಿ ಕೆಲಸ ಮಾಡಿದ್ದರು.


ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದ ರಘುಪತಿ ಭಟ್ ಅವರಿಗೆ ಕಡೆ ಕ್ಷಣದಲ್ಲಿ ಪಕ್ಷವು ಕೈಕೊಟ್ಟಿದೆ. ಶಿವಮೊಗ್ಗದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಭಟ್ ಆಸೆಗೆ ತಣ್ಣೀರೆರಚಿದೆ. ಪಕ್ಷದ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡಿರುವ ಭಟ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.


ಪದವೀಧರರ ಹೊಸ ಮತದಾರ ಸೇರ್ಪಡೆಗೆ ತುಂಬಾ ಪ್ರಯತ್ನ ಮಾಡಿದ್ದೇನೆ. 36 ಸಾವಿರ ಹೊಸ ಮತದಾರ ಸೇರ್ಪಡೆ ಮಾಡಲು ಕಾರ್ಯಕರ್ತರ ಜೊತೆ ಶ್ರಮಿಸಿದ್ದೇನೆ. ಇದೇ ಪದವೀಧರರು ಒತ್ತಡ ಹಾಕಿ ನಿಮಗೆ ತುಂಬಾ ಅನ್ಯಾಯ ಆಗಿದ್ದು, ಕೆಲಸಗಾರನನ್ನು ಪಕ್ಷವು ನಿರ್ಲಕ್ಷಿಸಿರುವುದು ದುರಂತ ಎಂದು ಸಿಡಿಮಿಡಿಗೊಂಡಿದ್ದಾರೆ.


ಬೇಸರ ಆಗಿದ್ದು, ಹಿರಿಯ ಕಾರ್ಯಕರ್ತನಿಗೆ ನೀಡಿದ್ದರೆ ನಾನು ಗೌರವಿಸುತ್ತಿದ್ದೆ. ಗಿರೀಶ್ ಪಾಟೀಲ್, ದತ್ತಾತ್ರೆಯ, ಜ್ಞಾನೇಶ, ವಿಕಸ್ ಪುತ್ತೂರು ಇದ್ದರು ಅವರಿಗೂ ನೀಡದೆ ಅನ್ಯಾಯವಾಗಿದೆ.


ದುಡಿದ ಕಾರ್ಯಕರ್ತನಿಗೆ ನೀಡದೆ, ಇತ್ತೀಚೆಗೆ ಬಂದ ನಾಯಕನಿಗೆ ನೀಡಿದ್ದು ಬಹಳ ಬೇಸರವಾಗಿದೆ ಎಂದರು.

 



ಕುಕ್ಕೆ  ಆದಿ ಸುಬ್ರಹ್ಮಣ್ಯದ ಕಲ್ಯಾಣ ಮಂಟಪದ ಮೇಲ್ಚಾವಣಿಯಲ್ಲಿ ಗಾಂಜಾ ಪತ್ತೆಯಾದ ಆರೋಪ ಕೇಳಿ ಬಂದಿದ್ದು ಅಧಿಕಾರಿಗಳ ಪರಿಶೀಲನೆ ವೇಳೆ ಗಿಡ ನಾಪತ್ತೆಯಾದ ಘಟನೆ ನಡೆದಿದೆ.


ಗಾಂಜಾ ಗಿಡ ಇರುವ ಬಗ್ಗೆ ಗಮನಿಸಿದ ಸ್ಥಳೀಯರು ಅದರ ಪೋಟೋ ತೆಗೆದು ಪೊಲೀಸರಿಗೆ ಮತ್ತು ಅರಣ್ಯಾಧಿಕಾರಿಗಳಿಗೆ  ಮಾಹಿತಿ ನೀಡಿದ್ದರೆನ್ನಲಾಗಿದ್ದು  ಪರಿಶೀಲನೆ ವೇಳೆ ಗಾಂಜಾ ಗಿಡ ಇತ್ತೆನ್ನುವ ಜಾಗದಲ್ಲಿ ಗಿಡ ನಾಪತ್ತೆ ಯಾಗಿರುವುದಾಗಿ ವರದಿಯಾಗಿದೆ. 


 ಸುಮಾರು 4 ರಿಂದ 5ಫೀಟ್ ಎತ್ತರ ಬೆಳೆದಿರುವ ಗಾಂಜಾ ಗಿಡ ನೆಟ್ಟದ್ದು ಯಾರು, ತೆರವುಗೊಳಿಸಿರುವುದು ಯಾರು ಎಂಬ ಬಗ್ಗೆ ಸಂಶಯ ಮೂಡಿದ್ದು  ತನಿಖೆಯಿಂದಷ್ಟೆ ತಿಳಿದು ಬರಬೇಕಾಗಿದೆ.

 



ಲೋಕಸಭೆಗೆ ನಾಲ್ಕನೇ ಹಂತದಲ್ಲಿಂದು ಚುನಾವಣೆ ನಡೆಯಲಿದೆ.9 ರಾಜ್ಯಗಳ ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ದ 96 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಖಿಲೇಶ್ ಯಾದವ್,ಗಿರಿರಾಜ್ ಸಿಂಗ್, ಓವೈಸಿ, ಟಿಯಂ ಸಿ  ಮುಹುವಾ ಮೊಯಿತ್ರ ಕಣದಲ್ಲಿರುವ ಪ್ರಮುಖರು,ದೇಶದ ಒಟ್ಟು 379 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಂತಾಗಿದೆ.

 



ವಾಹನ ಗಳಿಗೆ ಎಚ್ ಎಸ್ ಆರ್ ಪಿ  ನೋಂದಣಿ ಫಲಕ ಗಡುವು ಎರಡು ಬಾರಿ ವಿಸ್ತರಿಸಿದರು  ವಾಹನ ಮಾಲೀಕರು ನಿರಾಸಕ್ತಿ ತೋರಿದ್ದಾರೆ. ರಾಜ್ಯದಲ್ಲಿ 2 ಕೋಟಿ ವಾಹನಗಳ ಸಂಖ್ಯೆಯಲ್ಲಿ 36 ಲಕ್ಷ ವಾಹನ ಗಳು ಹೊಸ ಫಲಕ ಅಳವಡಿಸಿದ್ದು 1.64 ಕೋಟಿ ವಾಹನ ಅಳವಡಿಸಿಲ್ಲ.ನಕಲಿ ನೋಂದಣಿ ಫಲಕ ತಪ್ಪಿಸಲು  ಸರ್ಕಾರ ಈ ನಿಯಮ ವನ್ನು ಜಾರಿ ಮಾಡಿತ್ತು. 2019 ರಲ್ಲಿ ಹೆಚ್ ಯಸ್ ಆರ್ ಪಿ ನೀತಿ ಜಾರಿಗೆ ತಂದಿದ್ದು ಹಿಂದಿನ ಹಳೆ ವಾಹನಗಳು ಇನ್ನು ಅಳವಡಿಸಿಕೊಂಡಿರುವುದಿಲ್ಲ.

 



ಅನೇಕ ದಿನಗಳಿಂದ  ಬಿಸಿಲಿನ ದಾಹಕ್ಕೆ ತೊಂದರೆ ಅನುಭವಿಸಿದ ಕರಾವಳಿ ಜನ ಕ್ಕೆ ವರುಣ ಕೃಪೆ ತೋರಿದ್ದಾನೆ. ಕಳೆದ ಎರಡು ದಿನಗಳಿಂದ ಸುಳ್ಯ,ಪುತ್ತೂರು,ಮಂಗಳೂರು ಬಹುತೇಕ ಕಡೆ ಸಾಧಾರಣ ಒಳ್ಳೆ ಮಳೆಯಾಗಿದೆ, ಇಂದು ಮುಂಜಾವು ಮಳೆ ಪ್ರಾರಂಭವಾಗಿದ್ದು ಕೆಲವು ಕಡೆ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೇ, ಗಾಳಿ ಗೆ ಮರಗಳು ಬಿದ್ದಿರುವುದರಿಂದ ತೊಂದರೆ ಉಂಟಾಗಿದೆ. ಗಾಳಿ,ಮಳೆಗೆ ತಾಲೂಕಿನಲ್ಲಿ ವಿದ್ಯುತ್ ಸಂಪರ್ಕ  ಇಲ್ಲದಂತೆ ಆಗಿದೆ.ಕೃಷಿಕರು ಈ ಮಳೆಯಿಂದ ನಿಟ್ಟುಸಿರು ಬಿಡುವಂತಾಗಿದ್ದು ಎರಡು ದಿನ ಮಳೆ ಮುಂದುವರಿಯುವ ಲಕ್ಷಣವಿದೆ.




 



ಬಿಜೆಪಿ ಮುಖಂಡ ಬ್ರಿಜೇಶ್ ಚೌಟ ಕಳೆದ ಅನೇಕ ದಿನಗಳಿಂದ ಬಿಜೆಪಿ,ಎನ್ ಡಿಎ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ.ನಿನ್ನೆ ಮುಂಬೈ ದಕ್ಷಿಣ ಕೇಂದ್ರ  ಲೋಕಸಭಾ ಎನ್ ಡಿಎ ಅಭ್ಯರ್ಥಿ ರಾಹುಲ್ ಶೇವಾಳೆ ಪರ  ಪ್ರಚಾರ ಅಂಗವಾಗಿ ತುಳು- ಕನ್ನಡಿಗ ಸಮ್ಮೇಳನದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಸುರೇಂದ್ರನ್ ಬಿಜೆಪಿ ಮಹಾರಾಷ್ಟ್ರ ದ ಪ್ರಮುಖರು, ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕ ರು ಭಾಗವಹಿಸಿದ್ದರು.




MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget