March 2024

 



ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬದಲಾದ ರಾಜಕೀಯ ಸ್ಥಿತಿಯಲ್ಲಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆಂದು ಅವರ ಆಪ್ತ ವಲಯ ದ ಮಾಹಿತಿ. ಬಿಜೆಪಿ ಜೆಡಿಯಸ್ ಮೈತ್ರಿ ಹಿನ್ನಲೆಯಲ್ಲಿ ಮಂಡ್ಯ ಕ್ಷೇತ್ರ JDS ಸ್ಪರ್ಧಿಸಲಿದೆ,, ಹೀಗಾಗಿ ಸುಮಲತಾ ರಿಗೆ ಟಿಕೆಟ್ ತಪ್ಪಿದ್ದು ಈ ಕಡೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದ್ದು ಸುಮಲತಾ ರ ರಾಜಕೀಯ ತ್ರಿಶಂಕು ಸ್ಥಿತಿಯಲ್ಲಿದೆ ಈ ವೇಳೆ ಬಿಜೆಪಿ ಅವರಿಗೆ ರಾಜ್ಯಸಭಾ ಆಫರ್ ನೀಡಿದ್ದು ತೀರ್ಮಾನವನ್ನು ಒಂದೆರೆಡು ದಿನ ಪ್ರಕಟಿಸುವ ಸಾಧ್ಯತೆ ಇದೆ.

 



ನಮ್ಮ ಕಾರ್ಯಕರ್ತರಿಗೆ ಧಮ್ಕಿ,ಬೆದರಿಕೆ ಹಾಕಿದರೆ ನಾವು ಸುಮ್ಮನಿರಲು ಸಾಧ್ಯವಿಲ್ಲ,ನಮಗೂ ತಾಳ್ಮೆಯಿದೆ,ಸಾವಿರಾರು ಕಾರ್ಯಕರ್ತರ ತಪಸ್ಸ್ಸು,ಬೆವರಿನಿಂದ ಈ ಪಕ್ಷ ಬೆಳೆದು ನಿಂತಿದೆ.ಪಕ್ಷ ತೀರ್ಮಾನ ಮಾಡಿದ ಮೇಲೆ ನಾವೆಲ್ಲ ಬದ್ಧವಾಗಿ ಕೆಲಸ ಮಾಡಬೇಕೆಂದು ಈಶ್ವರಪ್ಪ ಗೆ ಬಿವೈ ರಾಘವೇಂದ್ರ ಟಾಂಗ್ ನೀಡಿದರೆ. 


 ಶಿವಮೊಗ್ಗ ನಗರ ಬಿಜೆಪಿ ಶಾಸಕ ಚೆನ್ನಬಸಪ್ಪ ಮಾತನಾಡಿ ಬಿಜೆಪಿ ಪಕ್ಷ,ನಾಯಕರ ಬಗ್ಗೆ ಮಾತನಾಡುತ್ತ ಹೋದರೆ ನಾವು ಸಹಿಸಲು ಸಾಧ್ಯವಿಲ್ಲ,ಈ ರೀತಿ ಮುಂದುವರಿದರೆ ನಾವು ಖಡಕ್ ಆಗಿ ಪ್ರತಿಕ್ರಿಯಿಸಬೇಕಾಗಬಹುದು ಎಚ್ಚರವಿರಲೆಂದು ವಿರೋಧಿಗಳಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ.




 



ಶಿವಮೊಗ್ಗ ಲೋಕಸಭಾ  ಕಣದಲ್ಲಿ ಬಂಡಾಯ ವಾಗಿ ಸ್ಪರ್ಧೆಗೆ ಇಳಿದಿರುವ ಈಶ್ವರಪ್ಪ ವಿರುದ್ಧ ಶಿವಮೊಗ್ಗ ಬಿಜೆಪಿ ಮುಖಂಡರು ಬಹಿರಂಗವಾಗಿ ವಾಗ್ದಾಳಿ ಮಾಡಿದ್ದಾರೆ

 



ಬಿಜೆಪಿ ಹಿರಿಯ ನಾಯಕ,ಮಾಜಿ ಉಪಪ್ರಧಾನಿ ಯಲ್.ಕೆ.ಅಡ್ವಾಣಿ ಯವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತ ಅತ್ಯುನ್ನತ ಪುರಸ್ಕಾರ ಭಾರತ ರತ್ನ ಪ್ರಧಾನ ಮಾಡಿದರು.



ಅನಾರೋಗ್ಯ, ವಯಸ್ಸಿನ ಹಿನ್ನಲೆ ಅಡ್ವಾಣಿ ಯವರ ದೆಹಲಿ ನಿವಾಸಕ್ಕೆ ತೆರಳಿ ರಾಷ್ಟ್ರ ಪತಿ ಗಳು ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆಗಿದ್ದರು.





 



ಕಾಂಗ್ರೇಸ್  ಕಾರ್ಯಕರ್ತರ ಸಭೆಯಲ್ಲಿ ಮೋದಿ,ಮೋದಿ ಘೋಷಣೆ ಕೂಗುವವರ ಕಪಾಳಕ್ಕೆ ಹೊಡೆಯಿರಿ ' ವಿವಾದಾತ್ಮಕ ಹೇಳಿಕೆ ನೀಡಿದ ಶಿವರಾಜ್ ತಂಗಡಿಗೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ನಿನ್ನೆ ಕನಕಗಿರಿ ಯಲ್ಲಿ ನಡೆದ ಜಾತ್ರೋತ್ಸವ ದಲ್ಲಿ ಭಾಗವಹಿಸಿದ ಸಂದರ್ಭ ದಲ್ಲಿ ಮೋದಿ ಮೋದಿ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು "ಈಗ ಬಂದು ಕಪಾಳಕ್ಕೆ ಹೊಡೆದು ನೋಡಿ" ಯೆಂದರು. ಈ ಘಟನೆ ನಂತರ ಸಚಿವ ತಂಗಡಗಿ ಸ್ಥಳದಿಂದ ತೆರಳಿದರು.

 



ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಆದಿಚುಂಚನಗಿರಿ ಸಂಸ್ಥಾನದ ಶ್ರೀಶ್ರೀ ನಿರ್ಮಲಾನಂಧ ನಾಥ ಸ್ವಾಮೀಜಿ ಭೇಟಿಯಾಗಿ,ಆಶೀರ್ವಾದ ಪಡೆದುಕೊಂಡರು. ಈ ಬಾರಿ ಮಂಡ್ಯದಲ್ಲಿ ಬಿಜೆಪಿ ಮೈತ್ರಿಕೂಟ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.ಕಳೆದ ಚುನಾವಣೆಯಲ್ಲಿ ಪುತ್ರ ನಿಖಿಲ್ JDS-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.




 



ಮಂಗಳೂರು: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಭಾನುವಾರ ಬೆಳಗ್ಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಪ್ರಚಾರ ಕಾರ್ಯ ಆರಂಭಿಸಿದರು.




ನಾರಾಯಣ ಗುರುಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಅವರು, ಶ್ರೀ ಗೋಕರ್ಣನಾಥೇಶ್ವರ ದೇವರಿಗೆ ಅರ್ಚನೆ ಸಲ್ಲಿಸಿದರು.

 



  








ಬಿಜೆಪಿ ದಾವಣಗೆರೆ ಕ್ಷೇತ್ರ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಬಗ್ಗೆ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಮಾತಿನ ಭರದಲ್ಲಿ "ಮನೆಯಲ್ಲಿ ಅಡಿಗೆ ಮಾಡಿಕೊಂಡಿರುವ ಮಹಿಳೆಯನ್ನು ತಂದು ಅಭ್ಯರ್ಥಿ ಮಾಡಿದ್ದಾರೆ,ಅವರಿಂದ ಅಭಿವೃದ್ಧಿ ಸಾಧ್ಯವಿಲ್ಲವೆಂದಿದ್ದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಇದೆ ವೇಳೆ ಸೈನಾ ನೆಹ್ವಾಲ್ ಸಾಮಾಜಿಕ ಜಾಲತಾಣ ದಲ್ಲಿ "ಪ್ರತಿ ಮಹಿಳೆಯು ಹೋರಾಟ ಮಾಡಬಲ್ಲಲು,ಹಿಂದೆ ನಾನು ಒಲಿಂಪಿಕ್ಸ್ ಲ್ಲಿ ಪದಕ ಗೆದ್ದಾಗ ಏನು ಅಗಬೇಕೆಂದು ಇವರು ಬಯಸಿದ್ದರೋ ಪ್ರಶ್ನೆ ಮಾಡಿದ್ದಾರೆ,ಮಹಿಳೆಯರು ಏನಾದರೂ ಸಾಧಿಸಲು ಹೊರಟಾಗ ಇಂತಹ ಹೇಳಿಕೆ ನೀಡಿರುವ ಉದ್ದೇಶವೇನು? ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಲಿ.ಇಂತಹ ಹೇಳಿಕೆಯಿಂದ ಮಹಿಳೆಯರನ್ನು ಕುಗ್ಗಿಸಲು ಸಾಧ್ಯವಿಲ್ಲವೆಂದು ಸೈನಾ ನೆಹ್ವಾಲ್ ಬ್ಲಾಗ್ ಲ್ಲಿ ಬರೆದುಕೊಂಡಿದ್ದಾರೆ.

 



ಕಡಬ ದಲ್ಲಿ ಅಕ್ರಮ ಗೋವು ಸಾಗಾಟ ನಡೆಸುತ್ತಿದ್ದ ಕಾರು ಢಿಕ್ಕಿಯಾಗಿ ಓರ್ವ ಮೃತಪಟ್ಟ ಘಟನೆ ಮರ್ಧಳ ಜಂಕ್ಷನ್ ಬಳಿ ನಡೆದಿದೆ.ಕಾರು ಆಕ್ಸಿಡೆಂಟ್ ನಡೆಸಿ ಎಸ್ಕೇಪ್ ಆಗಿದ್ದಲ್ಲದೆ,ಅಕ್ರಮ ವಾಗಿ ಗೋವು ಕೂಡ ಸಾಗಾಟ ವಿಚಾರ ತಿಳಿಯುತ್ತಿದ್ದಂತೆ ನೂರಾರು ಜನ ಹಿಂದೂ ಕಾರ್ಯಕರ್ತರು ಕಡಬ ಸಮುದಾಯ ಆರೋಗ್ಯ ಕೇಂದ್ರ ಬಳಿ ಜಮಾಯಿಸಿ ತಕ್ಷಣ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಬರುವಂತೆ ಆರೋಪಿಗಳನ್ನು ಶೀಘ್ರವಾಗಿ ವಶಕ್ಕೆ ಪಡೆಯುವಂತೆ ಒತ್ತಾಯಿಸಿದ್ದಾರೆ, ಪಟ್ಟು ಬಿಡದ ಪ್ರತಿಭಟನಾಕಾರರು ರಾಜ್ಯ ಹೆದ್ದಾರಿ ಯಲ್ಲಿ  ಶಾಸಕರಾದ ಹರೀಶ್ ಪೂಂಜಾ, ಮುರುಳ್ಯ ಮುಖಂಡರಾದ ವೆಂಕಟ್ ವಲಳಂಬೆ,ಕೃಷ್ಣ ಶೆಟ್ಟಿ ಕಡಬ, ಹಿಂದೂ ಸಂಘಟನೆ ಕಾರ್ಯಕರ್ತರು ಧರಣಿ ನಡೆಸಿದರು. ಕಡಬ ಪರಿಸರದಲ್ಲಿ ಈ ರೀತಿ ಘಟನೆ ಅನೇಕ ಬಾರಿ ನಡೆದಿದ್ದು,ಇಲಾಖೆ ಕಡಿವಾಣ ಹಾಕಬೇಕೆಂದು ಹಿಂದೂ ಸಂಘಟನೆ ಪ್ರಮುಖರು ಒತ್ತಾಯಿಸಿದ್ದಾರೆ

 



ಅಲ್ಪಸಂಖ್ಯಾತರ ಕಡೆಗಣನೆ ಆರೋಪ- ಕಡಬ ಕಾಂಗ್ರೆಸ್ ಸಮಾವೇಶದಲ್ಲಿ ನೂಕಾಟ,ತಳ್ಳಾಟ


ಕಡಬ: ಕಡಬ ಒಕ್ಕಲಿಗ ಗೌಡರ ಸಮುದಾಯ ಭವನದಲ್ಲಿ ಇಂದು ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಅಭ್ಯರ್ಥಿ ಪದ್ಮರಾಜ್ ಮುಖಂಡರಾದ ವಿನಯ್ ಕುಮಾರ್ ಸೊರಕೆ ಸಮ್ಮುಖದಲ್ಲಿ  ಭಿನ್ನಮತ ಸ್ಪೋಟಗೊಂಡಿದ್ದು, ನೂಕಾಟ ತಳ್ಳಾಟ ನಡೆದಿದೆ. 



ಸಮಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ಕೆಲ ಮುಸ್ಲಿಂ ಸಮುದಾಯದ ನಾಯಕರು ಕಾಂಗ್ರೆಸ್‌ ಪಕ್ಷದಲ್ಲಿ ಮುಸ್ಲಿಂ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.ಇದರಿಂದ ಸಭೆಯಲ್ಲಿ ಮಾತಿಗೆ ಮಾತು ಬೆಳೆದು ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು.ಪಕ್ಷದ ಕಾರ್ಯಕ್ರಮ ಕ್ಕೆ ಜನ ಸೇರಿಸಲು ಮುಸ್ಲಿಂ ರು ಆದರೆ ವೇದಿಕೆಯಲ್ಲಿ ಒಬ್ಬ ಮುಸ್ಲಿಂ ಮುಖಂಡರಿಗೆ ಅವಕಾಶವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.ಕೆಲ ಮುಸ್ಲಿಂ ನಾಯಕರು ಸಭೆಯಿಂದ ಹೊರನಡೆದ ಬಳಿಕ ಸಭೆ ಮುಂದುವರೆದಿದೆ.ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಡಬ ಕಾಂಗ್ರೇಸ್ ಲ್ಲಿ ಭಿನ್ನಮತ ಸ್ಪೋಟಗೊಂಡಿತ್ತು.

 




 ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಏ.26 ಹಾಗೂ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮೇ 7ರಂದು ನಡೆಯಲಿದೆ. ಆ ದಿನಗಳಂದು ಆಯಾ ಚುನಾವಣಾ ಕ್ಷೇತ್ರಗಳಿಗೆ ಸೀಮಿತಗೊಳಿಸಿ ಸಾರ್ವತ್ರಿಕ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.


ಈ ಸಂಬಂಧ ಆದೇಶ ಹೊರಡಿಸಿರುವ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ, ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವಂತಹ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಒಳಗೊಂಡಂತೆ 26.04.2024  ಮತ್ತು 7.05.2024 ರಂದು ನಡೆಯುವ ಚುನಾವಣೆಗೆ ಸಾರ್ವತ್ರಿಕ ರಜೆ ಘೋಷಿಸಿದೆ.



ಲೋಕಸಭಾ ಕ್ಷೇತ್ರಗಳ ಅರ್ಹ ಮತದಾರರಾಗಿರುವ ಎಲ್ಲ, ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡಲು ಆದೇಶಿಸಿದೆ. ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಕೂಡ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುಂತೆ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.

 




ಲೋಕಸಭಾ ಚುನಾವಣೆಗೆ ಸುಳ್ಯದಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿಯನ್ನು ಸುಳ್ಯ ಸೆಂಟರ್ ನಲ್ಲಿ ತೆರೆಯಲಾಗಿದ್ದು, ಕಚೇರಿಯ ಉದ್ಘಾಟನೆ ನಡೆಯಿತು.


ಮಾಜಿ ಸಚಿವ ಬಿ.ರಮಾನಾಥ ರೈ‌ ಕಚೇರಿಯನ್ನು ಉದ್ಘಾಟಿಸಿದರು. ಮಾಚಿ ಸಚಿವ ವಿನಯ‌ಕುಮಾರ್ ಸೊರಕೆ, ಗೇರು‌ ಅಭಿವೃದ್ದಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ, ಐವನ್ ಡಿಸೋಜಾ, ಬ್ಲಾಕ್ ಅಧ್ಯಕ್ಷ ಪಿ.ಸಿ.ಜಯರಾಮ, ಜಿ.ಕೃಷ್ಣಪ್ಪ, ಎನ್.ಜಯಪ್ರಕಾಶ್ ರೈ, ಭರತ್ ಮುಂಡೋಡಿ, ನಿತ್ಯಾನಂದ ಮುಂಡೋಡಿ, ಎಸ್.ಸಂಶುದ್ದೀನ್, ಶಾಹುಲ್ ಹಮೀದ್ ಕುತ್ತಮೊಟ್ಟೆ, ಸದಾನಂದ ಮಾವಜಿ, ಶಾಫಿ ಕುತ್ತಮೊಟ್ಟೆ, ರಘು ಬಿ, ರಾಧಾಕೃಷ್ಣ ಬೊಳ್ಳೂರು, ಪಿ.ಎಸ್.ಗಂಗಾಧರ್, ಇಸಾಕ್ ಸಾಹೇಬ್ ಪಾಜಪಳ್ಳ, ಸರಸ್ವತಿ ಕಾಮತ್, ಧನಂಜಯ ಅಡ್ಪಂಗಾಯ ಸಹಿತ ಹಲವು ಗಣ್ಯರು‌ ಭಾಗವಹಿಸಿದ್ದರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

 











ಕೋಲಾರ ಕಾಂಗ್ರೆಸ್ ಪಕ್ಷ ದ ಅಭ್ಯರ್ಥಿ ಘೋಷಣೆ ಮಾಡಿದ್ದು ಅಚ್ಚರಿಯಾಗಿ ಬೆಂಗಳೂರು ಮೂಲದ ಗೌತಮ್ ಕೆ.ವಿ ಯವರಿಗೆ ಟಿಕೆಟ್ ನೀಡಿದೆ.  ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಗಳ ಜಗಳದ ತಾರಕ್ಕೇರಿತು ಒಂದು ಹಂತದಲ್ಲಿ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ರಿಗೆ ಟಿಕೆಟ್ ಫಿಕ್ಸ್ ವೆಂದಿತ್ತು ಆದರೆ ಸಚಿವ ಸುಧಾಕರ್  ಮತ್ತು  ಶಾಸಕರು ರಾಜೀನಾಮೆ ಬೆದರಿಕೆ ಒಡ್ಡಿ ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡದಂತೆ ಪಟ್ಟು ಹಿಡಿದಿದ್ದರು,ಕೊನೆಗೆ ಅಳೆದು ತೂಗಿ ಗೌತಮ್ ಕೆ.ವಿ ಗೆ ಕೋಲಾರ ಟಿಕೆಟ್ ನೀಡಿದೆ, ಕೋಲಾರ ಕಾಂಗ್ರೇಸ್ ಬಣ ರಾಜಕೀಯ ಮುಂದಿನ ಹಂತದಲ್ಲಿ ಎಲ್ಲಿವರೆಗೆ ತಲುಪಲಿದೆ ಕಾದು ನೋಡಬೇಕು

 



ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿ ನಂತರ ಬಿಜೆಪಿ ಪಕ್ಷ ಸೇರ್ಪಡೆಗೊಂಡು ವಕ್ತಾರರಾಗಿ,ವಿಧಾನಪರಿಷತ್ ಸದಸ್ಯರಾಗಿದ್ದರು, ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಸಮ್ಮುಖದಲ್ಲಿ ಸೇರ್ಪಡೆಯಾದರು. ಈ ಹಿಂದೆಯೇ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸವಿಸ್ತಾರ ವರದಿ ಪ್ರಕಟಿಸಿತ್ತು.

 



ಮೀನುಗಾರ ಸಮಾಜದಿಂದಾಗಿ ಇಂದು ನಮ್ಮ ಜಲ ಗಡಿ ಸುರಕ್ಷಿತವಾಗಿದೇ, ಒಂದು ರೀತಿಯಲ್ಲಿ ಸೈನಿಕರ ರೀತಿ ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆಂದು ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮೀನುಗಾರರ ಪ್ರಕೋಷ್ಠ ಸಮಾವೇಶ ಭಾಷಣ ದಲ್ಲಿ ಹೇಳಿದರು.



ಮೀನುಗಾರರ ರಾಷ್ಟ್ರ ಭಕ್ತಿ ನಮಗೆ ಆದರ್ಶ,ಹಿಂದುತ್ವ ವಿಚಾರದಲ್ಲಿ ಬದ್ದತೆ ಅಲ್ಲದೆ ಗುಡಿ,ಮಂದಿರ ನಿರ್ಮಾಣ ಗಳ ಮೂಲಕ ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ಅವರ ಪಾತ್ರ ಹಿರಿದು,ಹಿಂದೂ ಸಮಾಜಕ್ಕೆ ಮೀನುಗಾರ ಬಂಧುಗಳು ಶಕ್ತಿಯೆಂದು ಚೌಟರು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಬಿ.ನಾಗರಾಜ್ ಶೆಟ್ಟಿ, ಮೀನುಗಾರರ ಮುಖಂಡ ರಾದ ರಾಮಚಂದ್ರ ಬೈಕಂಪಾಡಿ,ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ಪ್ರಕೋಷ್ಠ ಸಂಯೋಜಕ ಸುಧೀರ್ ಶೆಟ್ಟಿ, ಮೀನುಗಾರ ಪ್ರಕೋಷ್ಟದ ಅಧ್ಯಕ್ಷ ಗಿರೀಶ್ ಕರ್ಕೇರ ಮೀನುಗಾರ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




 



ಕೇರಳ ಬಿಜೆಪಿ ಘಟಕ ಅಧ್ಯಕ್ಷ ಕೆ.ಸುರೇಂಧ್ರನ್ ವಯನಾಡ್ ಕ್ಷೇತ್ರದಿಂದ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ತಮ್ಮ ಅಫಿಡವಿಟ್ ಲ್ಲಿ ತನ್ನ ಮೇಲೆ 242 ಪ್ರಕರಣಗಳು ದಾಖಲಾಗಿದ್ದ ಬಗ್ಗೆ ತಿಳಿಸಿದ್ದಾರೆ. ಕೆ.ಸುರೇಂದ್ರನ್ ಈ ಹಿಂದೆ ಮಂಜೇಶ್ವ ರ ವಿಧಾನ ಸಭಾ ಕ್ಷೇತ್ರದ ಲ್ಲಿ ಕೆಲ ಮತಗಳಿಂದ ಸೋಲನ್ನು ಅನುಭವಿಸಿದ್ದರು. ಶಬರಿಮಲೆ ರಕ್ಷಾ ಯಾತ್ರೆ ಮೂಲಕ ಮಹಿಳೆಯರು ಶಬರಿಮಲೆ ಪ್ರವೇಶವಾತಿ ಬಗ್ಗೆ ಜನಾಂದೋಲವನ್ನು ನಡೆಸಿದ್ದರು. ಪಕ್ಷ,ಜನಾಂದೋಲನ,ಸಂಘಟನೆ ದೃಷ್ಟಿಯಿಂದ ನನ್ನ ಮೇಲೆ ಪ್ರಕರಣ ದಾಖಲಾಗಿರುತ್ತದೆಂದು ನಾಯಕರು ಸ್ಪಷ್ಟಪಡಿಸಿದ್ದಾರೆ.

 



ಸುಳ್ಯ: ಚುನಾವಣಾ ಪ್ರಚಾರಕ್ಕಾಗಿ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಮಾ. 30ರಂದು ಸುಳ್ಯಕ್ಕೆ ಅಗಮಿಸಿದ್ದು, ಬೆಳಿಗ್ಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಚಾರ ಆರಂಭಿಸಿದರು.ನಂತರ ಸುಳ್ಯ ದ ಕಲ್ಕುಡ ದೈವಸ್ಥಾನ,ಅರಂಬೂರಿನ ತೆರೇಸಾ ಚಚ್೯ , ಮೊಗರ್ಪಣೆ ದರ್ಗಾ ಭೇಟಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸಂಸ್ಥೆಯ ಡಾ.ಕೆ.ವಿ. ಚಿದಾನಂದ ಗೌಡರ ಮನೆಗೆ ಭೇಟಿ ನೀಡಿದರು.





 ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಸುಳ್ಯ ಕ್ಷೇತ್ರದ ಡಿಸಿಸಿ ಉಸ್ತುವಾರಿ ಎನ್.ಜಯಪ್ರಕಾಶ್ ರೈ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಪ್ರಮುಖರಾದ ರಾಧಾಕೃಷ್ಣ ಬೊಳ್ಳೂರು, ಕಿರಣ್ ಬುಡ್ಲೆಗುತ್ತು, ವಿಜಯ ಕುಮಾರ್ ಸೊರಕೆ, ಡಾ. ಎನ್.ಎ. ಜ್ಞಾನೇಶ್, ಮಹಮ್ಮದ್ ಕುಂಞಿ ಗೂನಡ್ಕ, ಕೆ.ಎಂ.ಮುಸ್ತಫ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಪಿ.ಎ.ಮಹಮ್ಮದ್, ರಾಜು ಪಂಡಿತ್, ರಂಜಿತ್ ರೈ ಮೇನಾಲ, ಇಸ್ಮಾಯಿಲ್ ಪಡ್ಪಿನಂಗಡಿ, ಸಂಶುದ್ದೀನ್, ಮಹಮ್ಮದ್ ಫವಾಝ್, ಕೇಶವ ಮೊರಂಗಲ್ಲು, ಅಶೋಕ್ ಚೂಂತಾರು, ಧೀರಾ ಕ್ರಾಸ್ತಾ ಮತ್ತಿತರರು ಉಪಸ್ಥಿತರಿದ್ದರು.











 



ಲೋಕಸಭಾ ಚುನಾವಣೆ ಹಿನ್ನಲೆ ಖಾಸಗಿ ನ್ಯೂಸ್ ಚಾನೆಲ್ ವಿಸ್ತಾರ ನಡೆಸಿರುವ ಪಲ್ಸ್ ಆಫ್ ಕರ್ನಾಟಕ ಸರ್ವೆಯಲ್ಲಿ ಬಿಜೆಪಿ-ಜೆಡಿಯಸ್ ಮೈತ್ರಿಕೂಟ ಸದ್ಯಕ್ಕೆ ಮೇಲುಗೈ ಸಾಧಿಸಿದೆ,ಆದರೆ ಕಳೆದ ಬಾರಿ ಹೋಲಿಸಿದರೆ ಕೆಲ ಸೀಟು ಕಳೆದುಕೊಳ್ಳಬಹುದೆಂದು ಸರ್ವೆಯಲ್ಲಿ ತಿಳಿದು ಬಂದಿದೆ. ಒಟ್ಟು 28 ಸ್ಥಾನ ಗಳ ಪೈಕಿ ಬಿಜೆಪಿ 15-19, ಕಾಂಗ್ರೆಸ್ 6-11,ಜೆಡಿಯಸ್ 2-3 ಸದ್ಯದ ಸ್ಥಿತಿಯಲ್ಲಿ ಪಡೆದುಕೊಳ್ಳಲಿದೆಯೆಂದು ತಿಳಿಸಿದೆ. 5 ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.ಕರಾವಳಿ ಕರ್ನಾಟಕ ಮತ್ತು ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಜೆಡಿಯಸ್ ಮೈತ್ರಿಕೂಟಕ್ಕೆ ಅನುಕೂಲಕರ ವಾತಾವರಣ ವಿದೆ.ಉತ್ತರ ಕನ್ನಡ,ಬೆಳಗಾವಿ,ಚಿಕ್ಕೋಡಿ,ಬೀದರ್,ತುಮಕೂರು,ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಗೆ ಒಳಯೇಟು ಅತಂಕವಿದ್ದು,ಉತ್ತರ ಕನ್ನಡ ಬಿಜೆಪಿ ಹಾಲಿ ಸಂಸದ ಅನಂತ್ ಕುಮಾರ್ ಹೆಗ್ಡೆ ಪಕ್ಷದ ಪರ ಗುರುತಿಸಿಕೊಳ್ಳದಿರುವುದು, ಯಲ್ಲಾಪುರ ಶಾಸಕ ಹೆಬ್ಬಾಳ್ಕರ್ ನಡೆ ಬಿಜೆಪಿ ಗೆ ತುಸು ತ್ರಾಸದಯಕವೆನಿಸಿದೆ. ಬಿಜೆಪಿ ಈ ಬಾರಿ ಸೋತ 6 ಮಾಜಿ ಶಾಸಕರುಗಳಿಗೆ ಮನ್ನಣೆ ನೀಡಿದೆ,ಕಾಂಗ್ರೆಸ್ ಬಹುಪಾಲು ಸಚಿವರ ಕುಟುಂಬಸ್ಥರು ಟಿಕೆಟ್ ನೀಡಿದೆ.ಈ ಬಾರಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಲೇಬೇಕೆಂದು ಒತ್ತಡದಲಿದ್ದು,ಬಿಜೆಪಿ ತನ್ನ ಸ್ಥಾನ ಉಳಿಸಿಕೊಳ್ಳುವ ಹೋರಾಟ ನಡೆಸುತ್ತಿದೆ.  ಗ್ಯಾರಂಟಿ ಯೋಜನೆ ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಬಿರುತ್ತ ಪ್ರಶ್ನೆಗೆ 40% ಪರಿಣಾಮ ಬೀರಬಹುದೆಂದಿದ್ದಾರೆ. ಮುಂದಿನ 10 ದಿನಗಳಲ್ಲಿ ರಾಜಕೀಯ ಚಿತ್ರಣ ಬದಲಾಗುವ ಸಾಧ್ಯತೆಯಿದೆ.

 



ಕಾಂಗ್ರೆಸ್ 27 ಕ್ಷೇತ್ರ ಟಿಕೆಟ್ ಅನೌನ್ಸ್ ಮಾಡಿದ್ದು,ಕೋಲಾರ ಅಭ್ಯರ್ಥಿ ಆಯ್ಕೆ ಅಂತಿಮವಾಗಿಲ್ಲ. 



ಮಹತ್ವದ ಬೆಳವಣಿಗೆಯಲ್ಲಿ ಚಿಕ್ಕಬಳ್ಳಾಪುರ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ವೀರಪ್ಪ ಮೊಯ್ಲಿ ಗೆ ಟಿಕೆಟ್ ನೀಡದೆ ಯುವ ಮುಖಂಡ ರಕ್ಷಾ ರಾಮಯ್ಯ ರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.ಚಾಮರಾಜನಗರ ಮೀಸಲು ಕ್ಷೇತ್ರದಿಂದ ಸಚಿವ ಮಹದೇವಪ್ಪ ಪುತ್ರ ಸುನಿಲ್ ಗೆ ಟಿಕೆಟ್ ನೀಡಿದೆ,ಬಳ್ಳಾರಿ ಯಿಂದ ಸಂಡೂರು ಕ್ಷೇತ್ರದ ಶಾಸಕ ತುಕರಾಮ್  ಸ್ಪರ್ಧಿಸಲಿದ್ದಾರೆ.







 


ಲೋಕಸಭಾ ಚುನಾವಣೆ ನೀತಿ ಸಂಹಿತೆ ರಾಜ್ಯದಲ್ಲಿ ಮಾರ್ಚ್ 16 ರಿಂದ ಜಾರಿಗೆ ಬಂದ ನಂತರ ಚುನಾವಣಾ ಆಯೋಗ


ಹದ್ದಿನ ಕಣ್ಣಿಟ್ಟಿದೆ. ಇದುವರೆಗೆ 20 ಕೋಟಿ ಕ್ಯಾಶ್ ಮತ್ತು 27 ಕೋಟಿ ಮೌಲ್ಯ ಮದ್ಯ ಅದಲ್ಲದೆ ಉಚಿತ ವಸ್ತು ಗಳು ದಾಖಲೆ ಗಳಿಲ್ಲದ ಆಭರಣ ಗಳನ್ನು ಆಯೋಗ ವಶಕ್ಕೆ ಪಡೆದುಕೊಂಡಿದೆ. ಇವೆರೆಗಿನವರೆಗೆ ವಶಪಡಿಸಿಕೊಂಡ ಒಟ್ಟಾರೆ ಮೌಲ್ಯ 62.42 ಕೋಟಿ,ಒಟ್ಟಾರೆಯಾಗಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಯೋಗ  ಚೆಕ್ ಪೋಸ್ಟ್ ಗಳಲ್ಲಿ ಚೆಕ್ಕಿಂಗ್ ಕಾರ್ಯ ತೀವ್ರಗೊಳಿಸಿದೆ




ಲೋಕಸಭಾ ಚುನಾವಣೆಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಉಸ್ತುವಾರಿ ಯಾಗಿ ಎಂ.ವೆಂಕಪ್ಪ ಗೌಡರನ್ನು ನೇಮಕಗೊಳಿಸಿ, ಜಿಲ್ಲಾ ಪ್ರಚಾರ ಸಮಿತಿ ಉಸ್ತುವಾರಿ ರಮಾನಾಥ ರೈಯವರು ನೇಮಕಗೊಳಿಸಿ ಆದೇಶ ಮಾಡಿದ್ದಾರೆ.

 



ಬಿಜೆಪಿ ಜಿಲ್ಲಾ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ಜಿಲ್ಲಾ ಸಮಿತಿ ನೂತನವಾಗಿ ರಚನೆಗೊಂಡಿದೆ.ಬಿಜೆಪಿ ಜಿಲ್ಲಾ ಕಛೇರಿ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ಜಿಲ್ಲಾ ಸಂಚಾಲಕ ಅಶೋಕ್ ಶೆಟ್ಟಿ ಸರಪಾಡಿ ಕಲೆ ಮತ್ತು ಸಂಸ್ಕೃತಿ ಉಳಿಯುವಲ್ಲಿ ಬಿಜೆಪಿ ಪಾತ್ರ ಹಿರಿದು,ಈ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಹೇಳಿದರು.ಜಿಲ್ಲಾ ಸಮಿತಿಗೆ ಪುತ್ತೂರು ಮಂಡಲದಿಂದ ರಾಜಾರಾಮ್ ನಾಗರಕಟ್ಟೆ, ಸುಳ್ಯದಿಂದ ರೋಹಿತ್  ಯಸ್, ಬಂಟ್ವಾಳ ಮಧು ಬಂಗೇರ,ಮಂಗಳೂರು ಮಲ್ಲಿಕಾ ಉಳ್ಳಾಲ,ಮಂಗಳೂರು ದಕ್ಷಿಣ ಚೇತಕ್ ಪೂಜಾರಿ,ಮಂಗಳೂರು ಉತ್ತರ ಯಾದವ ಕೋಟ್ಯಾನ್,ಬೆಳ್ತಂಗಡಿ ಯಿಂದ ಜಯರಾಮ್ ಮುಂಡಾಜೆ ಜವಾಬ್ದಾರಿ ವಹಿಸಲಾಯಿತು.ವೇದಿಕೆಯಲ್ಲಿ ಜಿಲ್ಲಾ ಪ್ರಕೋಷ್ಠ ಸಂಯೋಜಕ ಸುಧೀರ್ ಶೆಟ್ಟಿ ಕಣ್ಣೂರು,ಸಹ ಸಂಯೋಜಕ ಪ್ರಸನ್ನ ದರ್ಬೆ,ಲಕುಮಿ ತಂಡದ ಲ:ಕಿಶೋರ್ ಡಿ.ಶೆಟ್ಟಿ,ಸಸಿಹಿತ್ಲು ಮೇಳ ಸಂಚಾಲಕ ರಾದ ರಾಜೇಶ್ ಗುಜರಾನ್,ಬಪ್ಪನಾಡು ಮೇಳ ಸಂಚಾಲಕ  ವಿನೋದ್ ಕುಮಾರ್,ಜಿಲ್ಲಾ ಸಹ ಸಂಚಾಲಕ ಚೇತಕ್ ಪೂಜಾರಿ ಉಪಸ್ಥಿತರಿದ್ದರು.

 


ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ  ಇಂದು ಜಾಲ್ಸುರ್ ನ ಕೆ ಸುಬ್ರಾಯ ಕಾಮತ್ ಆಂಡ್ ಸನ್ಸ್ ಕ್ಯಾಶೂ ಕಾರ್ಖಾನೆಗೆ ಭೇಟಿ ನೀಡಿ ನೌಕರರ ಜೊತೆ ಸಮಾಲೋಚನೆ ನಡೆಸಿ,ಬಿಜೆಪಿ ಗೆ ಮತ ನೀಡುವಂತೆ ಮನವಿ ಮಾಡಿದರು.











ಈ ಸಂದರ್ಭ ದಲ್ಲಿ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್,ಮಾಲೀಕ ರಾದ ಸುಧಾಕರ ಕಾಮತ್,ಸ್ಥಳೀಯರಾದ ಜಯರಾಮ್ ರೈ  ಮತ್ತಿತರರು ಉಪಸ್ಥಿತರಿದ್ದರು.





 



ಸುಳ್ಯದಲ್ಲಿ ನಡೆದ ಇವತು‌ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಭಾಗವಹಿಸಿ ಸಂಸದ ನಳಿನ್ ಕಟಿಲ್ ಮಾತನಾಡುತ್ತ ಮೊದಲ ಬಾರಿ ಸಂಘಟನೆ ನನಗೆ ಅವಕಾಶ ನೀಡಿತ್ತು,ಯಾರ ಕೈ ಕಾಲು ಹಿಡಿದು ಸೀಟು ಗಿಟ್ಟಿಸಿಕೊಂಡಿರಲಿಲ್ಲ,ಒಬ್ಬ ಸಾಮಾನ್ಯ ಕಾರ್ಯಕರ್ತ ಸಂಸದನಾಗಬೇಕೆಂದು ಪಕ್ಷ ಅವಕಾಶ ಮಾಡಿ ಕೊಟ್ಟಿತ್ತು. 15 ವರ್ಷಗಳ ಸಂಸದನಾಗಿ ಪಕ್ಷ ಕೊಟ್ಟ ಜವಾಬ್ದಾರಿ ಯನ್ನು ಯಾವುದೇ ಕಳಂಕವಿಲ್ಲದೆ ನಿರ್ವಹಿಸಿದ ತೃಪ್ತಿ ನನಗಿದೆ, ಈ ಕ್ಷೇತ್ರದಲ್ಲಿ ಸಾವಿರಾರು ಕೋಟಿ ಅನುದಾನ ಮೂಲಕ ಅಭಿವೃದ್ಧಿ ಕಾರ್ಯ ಮಾಡಿರುತ್ತೇನೆ.



ಮಾಣಿ- ಮೈಸೂರು ಹೆದ್ದಾರಿ ಕಾಮಗಾರಿ ಶೀಘ್ರ ಟೆಂಡರ್ ಆಗಿ ಕೆಲಸ ಪ್ರಾರಂಭವಾಗಲಿದೆ,ಒಬ್ಬ ಹಳ್ಳಿಯ ಸಾಮಾನ್ಯ ಕಾರ್ಯಕರ್ತನನ್ನು ಸಂಸದನಾಗಿ ಮಾಡುವ ಕಾರ್ಯ ಬಿಜೆಪಿಯಿಂದ ಮಾತ್ರ ಸಾಧ್ಯ.ನನಗೆ ಸ್ಥಾನ ಸಿಗದಿರದ ಬಗ್ಗೆ ಬೇಸರವಿಲ್ಲ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ಅತ್ಯಧಿಕ ಮತಗಳಿಂದ ವಿಜಯಶಾಲಿಯಗಬೇಕು,3 ಅವಧಿಗೆ  ಬಿಜೆಪಿಯಿಂದ ನಾನು ಸಂಸದನಾಗಿ ಆಯ್ಕೆಯಾದ ಬಗ್ಗೆ ಹೆಮ್ಮೆಯಿದೆ.ಮೊದಲು ನಿಂತಾಗ ಬೇಡವೆಂದಿದ್ದೆ, ಕಳೆದ ಬಾರಿ ಟಿಕೆಟ್ ಬೇಡವೆಂದು ವರಿಷ್ಠರಿಗೆ ತಿಳಿಸಿದ್ದೆ ಆದರೆ ಅವಕಾಶ ಮಾಡಿಕೊಟ್ಟಿರುತ್ತದೆ,ಅಧಿಕಾರಕ್ಕೆ ನಳಿನ್ ಕಟಿಲ್ ಯಾವತ್ತೂ ಆಂಟಿ ಕೂರುವ ವ್ಯಕ್ತಿಯಲ್ಲವೆಂದು ಸಂಸದ ನಳಿನ್ ಕಟಿಲ್ ಭಾವುಕ ರಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

 



ಲೋಕಸಭಾ ಚುನಾವಣೆ ಹಿನ್ನಲೆ ಬಿಜೆಪಿ ಮತ್ತು ಜೆಡಿಯಸ್ ಸಮನ್ವಯ ಸಭೆ ಬೆಂಗಳೂರು ಲ್ಲಿ ನಡೆಯಿತು.28 ಕ್ಷೇತ್ರಗಳ ಪೈಕಿ ಬಿಜೆಪಿ 25,ಜೆಡಿಯಸ್ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು,ಅಭ್ಯರ್ಥಿ ಗಳನ್ನು ಘೋಷಿಸಿದೆ. ಈ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೆ ಗೌಡ, ಮಾಜಿ ಮುಖ್ಯಮಂತ್ರಿ ಬಿ.ಯಸ್.ಯಡಿಯೂರಪ್ಪ,ಕುಮಾರಸ್ವಾಮಿ,ಡಿವಿ ಸದಾನಂದ ಗೌಡ,ಬಿಜೆಪಿ ರಾಜ್ಯಾಧ್ಯಕ್ಷ ವಿಜೆಯೇಂದ್ರ,ಜಿಟಿ ದೇವೇಗೌಡ,ಆರ್ ಅಶೋಕ್, ಎರಡು ಪಕ್ಷ ಪ್ರಮುಖರು ಉಪಸ್ಥಿತರಿದ್ದರು.






 



ಸುಳ್ಯ:  ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಸುಳ್ಯ ಮಂಡಲ ಕಾರ್ಯಕರ್ತರ ಸಮಾವೇಶ ಸುಳ್ಯ ಕೇರ್ಪಳದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಮಾ.29ರಂದು ನಡೆಯಿತು. ಸಮಾವೇಶವನ್ನು ಉದ್ಘಾಟಿಸಿದ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ

ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ, ಸಂಸದ ನಳಿನ್ ಕುಮಾ‌ರ್ ಕಟೀಲ್‌, ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪಸಹ ನಾಯಕ್‌, ಮಾಜಿ ಸಚಿವ ಎಸ್.ಅಂಗಾರ, ಸುಳ್ಯ ಮಂಡಲ ಉಸ್ತುವಾರಿಗಳಾದ ಅಪ್ಪಯ್ಯ ಮಣಿಯಾಣಿ, ಸೀತಾರಾಮ ಬೆಳಾಲು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ

ಯತೀಶ್ ಆರ್ವಾರ್, ಕಿಶೋರ್ ಕುಮಾರ್ ಬೊಟ್ಯಾಡಿ, ಕಾರ್ಯದರ್ಶಿ ವಿನಯಕುಮಾ‌ರ್ ಮುಳುಗಾಡು, ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ದೇವದಾಸ ಶೆಟ್ಟಿ,ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕರಾದ ಹರೀಶ್ ಕಂಜಿಪಿಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಕಾರ್ಯಕ್ರಮದಲ್ಲಿ ಮಾಜಿ ಸಚಿವ  ಎಸ್.ಅಂಗಾರ ಮಾತನಾಡಿ, ಸುಳ್ಯ ತಾಲೂಕಿನ ಸಂಘಟನಾತ್ಮಕ ಶಕ್ತಿ ಮತ್ತೊಮ್ಮೆ ತೋರ್ಪಡಿಸುವ ಸಮಯ ಬಂದಿದೆ,ಹೆಚ್ಚಿನ ಅಂತರದಿಂದ ಮತ್ತೊಮ್ಮೆ ಬಿಜೆಪಿ ಯನ್ನು ಗೆಲ್ಲಿಸೋಣ ಎಂದು ಹೇಳಿದರು.



ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಪ್ರತಿ ಕಾರ್ಯಕರ್ತರು ತಮ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಲೀಡ್ ದೊರಕಿಸುವಂತೆ ಕಾರ್ಯ ನಿರ್ವಹಿಸಬೇಕೆಂದರು ಆ ಮೂಲಕ ನರೇಂದ್ರ ಮೋದಿ ಯವರಿಗೆ ಶಕ್ತಿ ತುಂಬುವಂತೆ ಕರೆ ನೀಡಿದರು.15 ವರ್ಷ ಕ್ಷೇತ್ರದಲ್ಲಿ ಅವಕಾಶ ನೀಡಿರುವಿರಿ ನನ್ನ ನಡೆ,ನುಡಿಯಲ್ಲಿ ತಪ್ಪು ನಡೆದಿದ್ದರೆ ಕಾರ್ಯಕರ್ತರಲ್ಲಿ ಕ್ಷಮೆ ಕೋರುತ್ತೆನೆಂದರು.




ಬಿ ಜೆ ಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮಾತಾನಾಡಿ ಸುಳ್ಯ ಕ್ಷೇತ್ರ ದೇಶ ಮಟ್ಟದಲ್ಲಿ ಬಿಜೆಪಿ ಗೆ ಆದರ್ಶ ದ ಕ್ಷೇತ್ರ,ಸಂಘಟನಾತ್ಮಕ ಈ ನೆಲ ದಲ್ಲಿ ಮತ್ತೊಮ್ಮೆ ಬಿಜೆಪಿ ಯನ್ನು ಗೆಲ್ಲಿಸೋಣ,1837 ಬ್ರಿಟಿಷರ   ವಿರುದ್ಧ  ಹೋರಾಟ ದಲ್ಲಿ ಸುಳ್ಯ ದ ಮಹಾ ಪುರುಷರ ಆ ತ್ಯಾಗ ನಮಗೆ ಪ್ರೇರಣೆ,ಕುರುಂಜಿ ವೆಂಕಟ್ರಮಣ ಗೌಡರಂತ ಹಿರಿಯರು ಶಿಕ್ಷಣ ಕ್ರಾಂತಿ ಮೂಲಕ ಸುಳ್ಯವನ್ನು ಗುರುತಿಸುವಂತೆ ಮಾಡಿದ್ದಾರೆ,ಹಳದಿ ರೋಗ ದ ಬಗ್ಗೆ ಮುಂದಿನ ಡಿನಗಳಲ್ಲಿ ಗಂಭಿರವಾದ ಪ್ರಯತ್ನವನ್ನು ಮಾಡುತ್ತೇನೆಂದು ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ತಿಳಿಸಿದರು.




ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾ‌ರ್ ಕಂದಡ್ಕ ಸ್ವಾಗತಿಸಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ರೈ ಮನವಳಿಕೆ ವಂದಿಸಿದರು.



ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ.ಕಾರ್ಯಕ್ರಮ ನಿರೂಪಿಸಿದರು.

 



ಮಂಗಳೂರು: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಕೂಳೂರು ಬೀಡಿಗೆ ಭೇಟಿ ನೀಡಿದರು.



ಮನೆ ಯಜಮಾನ ವಜ್ರ ಕುಮಾರ್ ಕರ್ಣಾಂತಾಯ ಬಲ್ಲಾಳ್ ಅವರು ದೈವಗಳ ಮುಂದೆ ಪದ್ಮರಾಜ್ ಆರ್. ಅವರ ಗೆಲುವಿಗೆ ಪ್ರಾರ್ಥಿಸಿದರು.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಮಹಾನಗರ ಪಾಲಿಕೆ ಸದಸ್ಯ ಅನಿಲ್ ಕುಮಾರ್, ಬ್ಲಾಕ್ ಅಧ್ಯಕ್ಷರುಗಳಾದ ಸುರೇಂದ್ರ ಕಾಂಬ್ಳಿ, ಪದ್ಮನಾಭ ಕೋಟ್ಯಾನ್, ಗಿರೀಶ್ ಆಳ್ವ, ರೂಪೇಶ್ ರೈ, ದೀಪಕ್ ಪೂಜಾರಿ, ಹಕೀಂ ಕೂಳೂರು, ರಾಜೇಶ್ ಕುಳಾಯಿ, ರಾಜೇಶ್ ದೇವಾಡಿಗ, ಶ್ಯಾಲೆಟ್ ಪಿಂಟೋ, ರೆಹಮಾನ್ ಖಾನ್ ಕುಂಜತ್ತಬೈಲ್, ಗಿರೀಶ್ ಆಳ್ವ, ಪುರುಷೋತ್ತಮ್ ಚಿತ್ರಾಪುರ, ಬಿ.ಎಲ್. ಪದ್ಮನಾಬ್ ಮೊದಲಾದವರು ಉಪಸ್ಥಿತರಿದ್ದರು.

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget