ಜನರ ತುರ್ತು ಚಿಕಿತ್ಸೆ ಹಿನ್ನಲೆಯಲ್ಲಿ ಆರಂಭವಾಗಿದ್ದ 108 ಆಂಬ್ಯುಲೆನ್ಸ್ ಸೇವೆ ಸಿಬ್ಬಂಧಿಗಳಿಗೆ ಕಳೆದ ಮೂರು ತಿಂಗಳಿಂದ ಸಂಬಳ ಸಿಗದೆ ಪರದಾಡುತ್ತಿದ್ದಾರೆ.ಜಿವಿಕೆ ಸಂಸ್ಥೆ ಮತ್ತು ರಾಜ್ಯ ಸರ್ಕಾರ ವಿರುದ್ಧ ಸಿಬ್ಬಂದಿ ಗಳು ಆಕ್ರೋಶ ವ್ಯಕ್ತಪಡಿಸಿದ್ದು ಕಳೆದ ಮೂರು ತಿಂಗಳಿಂದ ಸಂಬಳ ನೀಡಿಲ್ಲ ಮತ್ತೊಂದು ಕಡೆ ಜಿವಿಕೆ ಸಂಸ್ಥೆ ವೇತನ ಕಡಿತಗೊಳಿಸಿದ್ದಾರೆಂದು ತಿಳಿಸಿದ್ದಾರೆ. ಈ ಎಲ್ಲಾ ಕಾರಣ ಗಳಿಗೆ ಸೋಮವಾರ ರಾತ್ರಿಯಿಂದ ಆಂಬ್ಯುಲೆನ್ಸ್ ಓಡಾಟ ಸ್ಥಗಿತಗೊಳಿಸಿ ಮುಷ್ಕರ ನೀಡುವ ಎಚ್ಚರಿಕೆ ನೀಡಿದ್ದಾರೆ. ಫೆಬ್ರವರಿ, ಮಾರ್ಚ್ ,ಏಪ್ರಿಲ್ ವೇತನ ಬಾಕಿಯಿದ್ದು ಜಿವಿಕೆ ಸಂಸ್ಥೆ ಡಿಸೆಂಬರ್ , ಜನವರಿ ತಿಂಗಳ ವೇತನ 30 ಸಾವಿರ ಕಡಿಮೆ ಮಾಡಿ ಕೇವಲ 13 ಸಾವಿರ ವೇತನ ನೀಡಿದೆ, ನಾಳೆ ಸಾಯಂಕಾಲ ವರೆಗೆ ವೇತನ ಪಾವತಿ ಮಾಡುವಂತೆ ಒತ್ತಾಯಿಸಿ ದ್ದು ವೇತನ ಪಾವತಿಸದಿದ್ದಾರೆ ನಾಳೆಯಿಂದ ಮುಷ್ಕರ ನಡೆಸಲಾಗುವುದೆಂದು ಸಿಬ್ಬಂದಿ ಗಳು ಎಚ್ಚರಿಸಿದ್ದಾರೆ.
Post a Comment