ಚಿಪ್ಪು- ಚೊಂಬು ಲ್ಲಿ ಕಳೆದು ಹೋದ ರಾಜ್ಯ ಲೋಕಸಭಾ ಚುನಾವಣೆ

 



ರಾಜ್ಯದಲ್ಲಿ ಎರಡನೇ ಹಂತ ದ ಲೋಕ ಸಭಾ ಚುನಾವಣೆ ನಾಡಿದ್ದು ಮುಕ್ತಾಯಗೊಳ್ಳಲಿದೆ.ದೇಶ ದೃಷ್ಟಿಯಿಂದ ಲೋಕಸಭಾ ಚುನಾವಣೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ, ಈ ಬಾರಿ ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಸ್ವ ಹಿತ,ತನ್ನ ಕುಟುಂಬ,ಆಪ್ತರನ್ನು ಹೇಗೆ ಗೆಲ್ಲಿಸಿಕೊಂಡು ಬರಬೇಕೆನ್ನುವ ಚಿಂತನೆಯಲ್ಲಿದೆ ವಿನಹ ರಾಜ್ಯಕ್ಕೆ ಕೇಂದ್ರದಿಂದ ರೈಲ್ವೆ ಯೋಜನೆ,ಪ್ರವಾಸೋದ್ಯಮ,ಮೂಲ ಸೌಕರ್ಯ ಬಗ್ಗೆ  ಗಂಭೀರ ಚರ್ಚೆಗಳು ನಡೆಯದಿರುವುದು ವಿಷಾದನೀಯ.ಜಾಹಿರಾತು,ಜಾಲ ತಾಣ ಗಳಲ್ಲಿ ಚೊಂಬು,ಚಿಪ್ಪು, ವೈಯುಕ್ತಿಕ ಟೀಕೆ ಟಿಪ್ಪಣಿ ಗಳೇ ತುಂಬಿಕೊಂಡಿದ್ದವು.ರಾಜ್ಯದಲ್ಲಿ ಹೊಸ ಮತದಾರರು,ಯುವ ಶಕ್ತಿಯನ್ನು ಹೇಗೆ ಬಳಸಿಕೊಳ್ಳಬಹುದು,ಉದ್ಯೋಗಬಸೃಷ್ಟಿ ಯಾವ ರೀತಿ ಮಾಡಿಕೊಳ್ಳಬಹುದು ಯಾವೊಬ್ಬ ನಾಯಕನು ಈ ವಿಚಾರದಲ್ಲಿ ಗಂಭೀರವಾಗಿರಲಿಲ್ಲ, ಹೇಗಾದರೂ ನಾನು ಗೆಲ್ಲಬೇಕು  ಒಂದೇ ಗುರಿಯಾಗಿತ್ತು.ರಾಜಕಾರಣ ದ ಬಗ್ಗೆ ಜನ ಆಸಕ್ತಿ ಕಳೆದುಕೊಂಡ ಸ್ಥಿತಿಗೆ ಬಂದಿರುವುದು ಪಕ್ಷಗಳಿಗೆ ಕರೆಗಂಟೆ ಕರಾವಳಿ ಜಿಲ್ಲೆಗಳಲ್ಲಿ ಭಾಷಣ ಗಳಿಗೆ ಜನ ಸೀಮಿತವಾಗಿ ಭಾಗವಹಿಸಿರುವುದನ್ನು ಗಮನಿಸಬಹುದು.ಈ ಹಿಂದೆ ಪ್ರತಿ ಹೋಬಳಿ,ಶಕ್ತಿ ಕೇಂದ್ರಗಳಲ್ಲಿ ದೊಡ್ಡ ಸಭೆಗಳು ನಡೆಯುತ್ತಿದ್ದವು ಈ ಬಾರಿ ಅದೇಲ್ಲೂ ಕಾಣ ಸಿಗಲಿಲ್ಲ.ಪ್ರಚಾರ ಮನೆ ಭೇಟಿ 100% ಯಶಸ್ವೀಯಾಗಿದೆನ್ನಲು  ಪಕ್ಷಗಳಿಗೆ ದೈರ್ಯವಿಲ್ಲ, ಎಲ್ಲೋ ಒಂದು ಕಡೆ ನಾಯಕ ಮತ್ತು ಕಾರ್ಯಕರ್ತ ನಡುವಿನ ಅಂತರ ಹೆಚ್ಚಾಗುತ್ತಿದೆ ಈ ಚುನಾವಣೆ ಯಲ್ಲಿ ಜನರ ಮೂಡ್ ಅರಿಯಲು ಎಲ್ಲಾ ಪಕ್ಷಗಳು ವಿಫಲವಾಗಿದೆ,ಆದೇನಿದ್ದರೂ ಫಲಿತಾಂಶ ನಂತರವೇ ತಿಳಿಯಬಹುದು.ವೈಯುಕ್ತಿಕ ಟೀಕೆ, ನಿಂದನೆ,ಟಿಪ್ಪಣಿ ಗಳೇ ಚುನಾವಣಾ ಅಸ್ತ್ರ ಗಳಾದಗ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget