April 2024

 



ಬೆಳಗಾವಿ ಯ ಕಾಗವಾಡ ದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಶಾಸಕ ರಾಜು ಕಾಗೆ,ಮೋದಿ ತೀರಿಕೊಂಡರೆ ಈ ದೇಶದಲ್ಲಿ ಮುಂದೆ ಪ್ರಧಾನಿ ಆಗೋದೆ ಇಲ್ವಾ?140 ಕೋಟಿ ಜನಸಂಖ್ಯೆ ಯಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ವಾ ಪ್ರಶ್ನೆ ಮಾಡಿದ್ದಾರೆ.ಈಗಿನ ಯುವಕರು ಮೋದಿ ಮೋದಿ ಅನ್ನುತ್ತಾರೆ,ಮೋದಿನ ತೆಗೆದುಕೊಂಡು ನೆಕ್ಕುತ್ತಿರಾ?ರಾಜ್ಯದಲ್ಲಿ ಕಾಂಗ್ರೆಸ್ ಬೇಕು,ಕೇಂದ್ರದಲ್ಲಿ ಮೋದಿನೇ ಬರಬೇಕು ಅಂತಾರೆ,ಇಲ್ಲಿ ಏನು ಆದ್ರೂ ಮೋದಿ ಬರಲ್ಲ,ನಾವೇ ಬರಬೇಕೆಂದು ಶಾಸಕ ರಾಜು ಕಾಗೆ ಪ್ರಚಾರ ಸಭೆಯಲ್ಲಿ ತಿಳಿಸಿದರು.ಈ ಹೇಳಿಕೆ ಗೆ ಬಿಜೆಪಿ ಖಂಡನೆ ವ್ಯಕ್ತಪಡಿಸಿದ್ದು ಚುನಾವಣಾ ಅಯೋಗ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

 



ಹೈನುಗಾರರಿಗೆ ಆದಾಯದ ಮೂಲವಾಗಿದ್ದ  ಪ್ರತಿ ಲೀಟರ್ ಗೆ 5 ರೂ ಸಹಾಯಧನ ಕಳೆದ ಏಳು ತಿಂಗಳಿನಿಂದ ರೈತರ ಕೈ ಸೇರಿಲ್ಲ.ಬರಗಾಲ ಮತ್ತು ಉಷ್ಣಾಂಶ ಏರಿಕೆ ಪರಿಣಾಮ ಒಣ,ಹಸಿ ಮೇವು ಕೊರತೆ ಉಂಟಾಗಿದ್ದು,ಹಿಂಡಿ,ಬೂಸಾ ಬೆಲೆಯೂ ಏರಿಕೆಯಾಗಿದೆ.ಈ ಹಿಂದೆ ಪ್ರತಿ ಬೇಸಿಗೆ ಸಂದರ್ಭ ದಲ್ಲಿ ಒಕ್ಕೂಟಗಳು ಧಾರಣೆ ಏರಿಕೆ ಮಾಡುತ್ತಿದ್ದವು ಈ ಬಾರಿ ಹೆಚ್ಚಳಕ್ಕೆ ಮುಂದಾಗಿಲ್ಲ ಒಂದು ಕಡೆ ಪ್ರೋತ್ಸಾಹ ಧನ ನೀಡದಿರುವುದು,ಮೇವು ಬೆಲೆ ಏರಿಕೆ ಪರಿಣಾಮ ಹೈನುಗಾರರು ಸಂಕಷ್ಟದಲಿದ್ದಾರೆ,ಸುಮಾರು 700 ಕೋಟಿ ಪ್ರೋತ್ಸಾಹ ಧನ ಸರ್ಕಾರದಿಂದ ಬಿಡುಗಡೆಯಾಗಬೇಕಿದೆ.ತಕ್ಷಣ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೈನುಗಾರರು ಒತ್ತಾಯಿಸಿದ್ದಾರೆ.

 


ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಪ್ರಸ್ತುತ ಎಂ.ಡಿ ಯಾಗಿದ್ದ ಕೃಷ್ಣ ಕುಮಾರ್ ನಿವೃತ್ತಿ ಹಿನ್ನೆಲೆಯಲ್ಲಿ ನೂತನ ಮ್ಯಾನೇಜಿಂಗ್ ಡೈರೆಕ್ಟರ್ ರಾಗಿ ಡಾ:ಬಿ.ವಿ.ಸತ್ಯನಾರಾಯಣ ನೇಮಕಗೊಂಡಿದ್ದಾರೆ.ಇವರು ಈ ಹಿಂದೆ ಮದರ್ ಡೈರಿ ಬೆಂಗಳೂರು ನಿರ್ದೇಶಕರು,KMF ಸಹ ನಿರ್ದೇಶಕರು,ಉಪಾಧ್ಯಕ್ಷರು ಐಡಿಯಲ್ ಇಸ್ ಕ್ರೀಮ್ ಮಾರುಕಟ್ಟೆ ವಿಭಾಗ ಹೀಗೆ ಕೃಷಿ ಮತ್ತು ಸಹಕಾರ ವಿಭಾಗದಲ್ಲಿ ಅನುಭವ ಹೊಂದಿರುವರು.

 



ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಯತ್ನಿಸುತ್ತಿದೆ ನಾನಿರುವವರೆಗೆ ಈ ಮೀಸಲಾತಿ ತರಲು ಸಾಧ್ಯವಿಲ್ಲವೆಂದು ತೆಲಂಗಾಣ  ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಕಾಂಗ್ರೆಸ್ ತುಷ್ಟಿಕರಣ ನೀತಿಯನ್ನು ಮಾಡಿಕೊಂಡು ಬಂದಿದ್ದು ಇದೀಗ SC, ST ಒಬಿಸಿ ಕೋಟಾ ದ ಮೀಸಲಾತಿ ಕಡಿತಗೊಳಿಸಿ ಅಲ್ಪಸಂಖ್ಯಾತರಿಗೆ ನೀಡಲು ಸಿದ್ದವಾಗಿದೆ ಇಂತಹ ವೋಟ್ ಬ್ಯಾಂಕ್ ರಾಜಕಾರಣ ವನ್ನು ಬಿಜೆಪಿ ಸಹಿಸುವುದಿಲ್ಲ,ನರೇಂದ್ರ ಮೋದಿ ಇರುವವರೆಗೆ ಸಾದ್ಯವಿಲ್ಲ ವೆಂದು ನರೇಂದ್ರ ಮೋದಿ ತಿಳಿಸಿದರು.

 



ಕುಲ್ಕುಂದ ಕಡೆಯಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಬರುತಿದ್ದ ಸುಬ್ರಹ್ಮಣ್ಯ ಗ್ರಾ.ಪಂ ನ ಕಸ ವಿಲೇವಾರಿ ವಾಹನ ಕುಲ್ಕುಂದ ಎಂಬಲ್ಲಿ ರಸ್ತೆಯ ಎಡಬದಿ ಚರಂಡಿಗೆ ಬಿದ್ದಿರುವುದಾಗಿ ವರದಿಯಾಗಿದೆ.


ಚಾಲಕ ಸಣ್ಣ ಪುಟ್ಟ ಗಾಯಗಳಾಗಿದ್ದು ಯಾವುದೇ ಪ್ರಾಣಪಾಯ ಸಂಭವಿಸಿಲ್ಲ, ವಾಹನದ ಎದುರಿನ ಗಾಜುಪುಡಿಯಾಗಿದ್ದು ವಾಹನದ ಎಡಬದಿಗೆ ಹಾನಿಯಾಗಿದೆ.




ಸುಳ್ಯದ ದುಗಲಡ್ಕ  ದುಗ್ಗಲಾಯ ದೇವಸ್ಥಾನದ ಎದುರು ಭಾಗದಲ್ಲಿ ಅಳವಡಿಸಲಾಗಿದ್ದ ಘಂಟೆಯನ್ನು ನಿನ್ನೆ ರಾತ್ರಿ ಕಳವುಗೈದಿದ್ದಾರೆ.

ಸುಮಾರು 30 ಸಾವಿರ ಮೌಲ್ಯದ ಒಂದು ಕಂಚಿನ  ಘಂಟೆಯನ್ನು ನಿನ್ನೆ ರಾತ್ರಿ ಕಳ್ಳರು ಕೊಂಡೊಯ್ದಿದ್ದಾರೆ. ದೈವಸ್ಥಾನಕ್ಕೆ ಆಗಮಿಸಿದ ಭಕ್ತರೋರ್ವರಿಗೆ ವಿಷಯ ತಿಳಿದು ಆಡಳಿತ ಸಮಿತಿಯವರಿಗೆ ತಿಳಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಸುಂದರ ರಾವ್, ಗೌರವಾಧ್ಯಕ್ಷ ದಯಾನಂದ ಸಾಲಿಯಾನ್, ದಿನೇಶ್ ಡಿ.ಕೆ.ಆಗಮಿಸಿ ಪರಿಶೀಲಿಸಿ ಸುಳ್ಯ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.



2024ರ ಲೋಕಸಭಾ ಚುನಾವಣೆ ಅವಧಿಯಲ್ಲಿ ಶಸ್ತ್ರಾಸ್ತ್ರಗಳ ಬಳಕೆ ನಿರ್ಬಂಧ ಹೇರುವುದನ್ನು ಹಿಂಪಡೆಯಲು ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಮುಗಿಲನ್ ಎಂ.ಪಿ. ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ರಿಷ್ಯಂತ್ ಸಿ.ಬಿ. ಅವರ ನೇತೃತ್ವದಲ್ಲಿ ನಡೆದ ಸ್ತ್ರೀನಿಂಗ್ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಜಿಲ್ಲೆಯಲ್ಲಿ ಕೃಷಿ ರಕ್ಷಣೆಗಾಗಿ ಆಯುಧ ಪರವಾನಿಗೆ ಹೊಂದಿರುವ (ಪೊಲೀಸ್‌ ಆಯುಕ್ತರ ಕಾರ್ಯವ್ಯಾಪ್ತಿಯನ್ನು ಹೊರತುಪಡಿಸಿ) ಎಲ್ಲಾ ಆಯುಧ ಪರವಾನಿಗೆದಾರರು ತಮ್ಮ ಆಯುಧಗಳನ್ನು ಈಗಾಗಲೇ ಪೊಲೀಸ್ ಠಾಣೆ / ಅಧಿಕೃತ ಕೋವಿ ಹಾಗೂ ಮದ್ದುಗುಂಡು ವ್ಯಾಪರಸ್ಥರಲ್ಲಿ ಠೇವಣೆ ಇರಿಸಿದ್ದು ಈ ಆಯುಧಗಳನ್ನು ಹಿಂಪಡೆಯಲು ಆಯುಧ ಪರವಾನಿಗೆದಾರರಿಗೆ ಏ.29ರ ಸೋಮವಾರದಿಂದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಮುತ್ತೈ ಮುಗಿಲನ್ ಎಂ.ಪಿ ಅವರು ಆದೇಶಿಸಿದ್ದಾರೆ.


ನಿಯಮಗಳು : ಯಾವುದೇ ಮೆರವಣಿಗೆ, ಜಾತ್ರೆ ಇತ್ಯಾದಿಗಳಲ್ಲಿ ಶಸ್ತ್ರಾಸ್ತ್ರವನ್ನು ಒಯ್ಯಲು ಅವಕಾಶವಿರುವುದಿಲ್ಲ. ಬೆಳೆಗಳ ರಕ್ಷಣೆಗಾಗಿ ಸದ್ರಿ ಆಯುಧಗಳನ್ನು ಮಾತ್ರ ಬಳಸತಕ್ಕದ್ದು. ಪರವಾನಿಗೆಯಲ್ಲಿ ಹೊಂದಿರುವ ಶಸ್ತ್ರಾಸ್ತ್ರವನ್ನು ಬಹಿರಂಗವಾಗಿ ಎಲ್ಲೂ ಪ್ರದರ್ಶಿಸುವಂತಿಲ್ಲ. ಸಾರ್ವಜನಿಕರನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆದರಿಸಲು ಶಸ್ತ್ರಾಸ್ತ್ರವನ್ನು ಬಳಸಬಾರದು. ಯಾವುದೇ ಸಂದರ್ಭದಲ್ಲಿ ಅವಶ್ಯವೆನಿಸಿದಲ್ಲಿ ಪೋಲೀಸ್‌ ಅಧಿಕಾರಿಗಳು/ ಸರಕಾರಿ ಅಧಿಕಾರಿಗಳಿಗೆ ತಪಾಸಣೆ ವೇಳೆ ಹಾಜರುಪಡಿಸತಕ್ಕದ್ದು ಮತ್ತು ತಪಾಸಣೆಗೆ ಸಹಕರಿಸಿ ಪೂರಕ ದಾಖಲೆಗಳನ್ನು ಒದಗಿಸತಕ್ಕದ್ದು. ಪರವಾನಿಗೆದಾರರು ಮೇಲಿನ ಶರ್ತಗಳನ್ನು ಉಲ್ಲಂಘನೆ ಮಾಡಿ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿರುವುದು ಕಂಡುಬಂದಲ್ಲಿ, ಪರವಾನಿಗೆಯಲ್ಲಿ ಹೊಂದಿರುವ ಶಸ್ತ್ರಾಸ್ತ್ರವನ್ನು ಯಾವುದೇ ಮುನ್ಸೂಚನೆ ನೀಡದೆ ವಶಪಡಿಸಿಕೊಳ್ಳಲಾಗುವುದು.


ನೀತಿ ಸಂಹಿತೆಯು ಜಾರಿಯಲ್ಲಿರುವ ಸಮಯದಲ್ಲಿ ಆಯುಧ ಪರವಾನಿಗೆದಾರರು ಯಾವುದೇ ಷರತ್ತುಗಳನ್ನು ಉಲ್ಲೇಖಿಸಿದಲ್ಲಿ ಐಪಿಸಿ ಸೆಕ್ಷನ್ 188 ರಂತೆ ಪ್ರಕರಣ ದಾಖಲಿಸಲು ಹಾಗೂ ಪರವಾನಿಗೆ ರದ್ದುಪಡಿಸಲು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲೈಮುಗಿಲನ್ ಎಂ.ಪಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

 



ಸುದೀರ್ಘ 5 ದಶಕಗಳ ಕಾಲ ರಾಜಕಾರಣದಲ್ಲಿದ್ದು,1974 ರಿಂದ ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಆರು ಬಾರಿ ಸಂಸದರಾಗಿ ,ಎರಡು ಬಾರಿ ಶಾಸಕರಾಗಿ,ಕೇಂದ್ರ ಆಹಾರ ಸಚಿವರಾಗಿ, ರಾಜ್ಯ ಕಂದಾಯ ಸಚಿವರಾಗಿ ಮಾಡಿದ ಕಾರ್ಯ ಗಮನಾರ್ಹ.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಶ್ರೀನಿವಾಸ ಪ್ರಸಾದ್ ಸಂಘದ ದ್ವಿತೀಯ ವರ್ಷದ ಸಂಘ ಶಿಕ್ಷಾವರ್ಗದ ಪ್ರಶಿಕ್ಷಣ ಪಡೆದವರು,ಸಾಮಾಜಿಕ ಸಮರಸತೆ ಸೇರಿದಂತೆ ಅನೇಕ ಮುಖಗಳಲ್ಲಿ ಸಂಘದ ಜೊತೆಗೆ ಸಾಮಾಜಿಕ ಕಾರ್ಯ ಕೈ ಜೋಡಿಸಿದವರು.ನೂರಾರು ಕಾರ್ಯಕರ್ತರ ನಿಕಟ ಸಂಪರ್ಕ ಹೊಂದಿದ್ದರು.ಅವರ ನಿಧನ ದುಃಖ ಭರಿಸುವ ಶಕ್ತಿ ಕುಟುಂಬ,ಬಂಧುಗಳಿಗೆ ಆ ಭಗವಂತ ನೀಡಲಿ ಮತ್ತು ಆತ್ಮಕ್ಕೆ ಸದ್ಗತಿ ದೊರೆಯಲೆಂದು ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೆಯ ಹೊಸಬಾಳೆ ಮತ್ತು ಕ್ಷೇತ್ರೀಯ ಸಂಘಚಾಲಕ ಡಾ. ಪಿ.ವಾಮನ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 



ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆಗಳ ಪೆನ್‌ಡ್ರೈವ್ ಪ್ರಕರಣ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅವರನ್ನು ಉಚ್ಚಾಟನೆ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್. ಡಿ ದೇವೇಗೌಡ ಆದೇಶ ಹೊರಡಿಸಿದ್ದಾರೆ.


ಇನ್ನು ಈ ಪ್ರಕರಣದಿಂದ ಜೆಡಿಎಸ್‌ ಪಕ್ಷಕ್ಕೆ ಮುಜುಗರ ಉಂಟಾಗಿದ್ದು ಸ್ವಪಕ್ಷೀಯರಿಂದಲೇ ಪ್ರಜ್ವಲ್ ರೇವಣ್ಣ ಅವರ ಉಚ್ಚಾಟನೆಗೆ ಒತ್ತಡ ಕೇಳಿ ಬಂದ ಬೆನ್ನಲ್ಲೇ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ ಅವರು ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.

 



ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.


ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು (ಏಪ್ರಿಲ್ 29) ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ಮೂಲಗಳ ಪ್ರಕಾರ ಸದ್ಯ ಎಸ್ಎಂ ಕೃಷ್ಣ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

 



ಹಲವು ವರ್ಷಗಳಿಂದ ಸಾರ್ವಜನಿಕ ರ ಬೇಡಿಕೆಯಾದ ಪುತ್ತೂರು ವಿವೇಕಾನಂದ ಕಾಲೇಜ್ ಬಳಿಯ ರೈಲ್ವೆ ಮೇಲ್ಸೇತುವೆ ಸಂಚಾರಕ್ಕೆ ತೆರೆದುಕೊಂಡಿದೆ. ಈ ಬಗ್ಗೆ ವಿವೇಕಾನಂದ ವಿದ್ಯಾರ್ಥಿಗಳು ಟ್ವಿಟರ್ ಸಂಗ್ರಹ,ಪತ್ರ ಮುಖೇನ ಗಮನ ಸೆಳೆದಿದ್ದರು.ಈ ಹಿಂದಿನ ಸಂಸದ ನಳಿನ್ ಕಟೀಲ್ ಹಿಂದಿನ ಶಾಸಕರಾದ ಸಂಜೀವ ಮಠಂದೂರು,ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಶ್ರಮ ಕೂಡ ಉಲ್ಲೇಖನೀಯ.



 



ಕಡಬ: ತಾನು ಮತದಾನ ಮಾಡಿದ್ದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಘಟನೆ ಕಡಬದಲ್ಲಿ ನಡೆದಿದ್ದು, ಇದೀಗ ಆರೋಪಿಯ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.


ಆಲಂಕಾರು ಗ್ರಾಮದ ಬೂತ್ ನಂ.59 ರಲ್ಲಿ ಸದಾನಂದ ಪೂಜಾರಿ ಎಂಬವರು ತಾನು ಮತದಾನ ಮಾಡಿದ ಫೋಟೋವನ್ನು ಫೇಸ್‌ಬುಕ್‌ ನಲ್ಲಿ ಸ್ಟೇಟಸ್ ಹಾಕಿದ್ದು, ಆರೋಪಿಯ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಚುನಾವಣೆಯ ದಿನ ಪುತ್ತೂರಿನಲ್ಲಿ ಇಂತಹುದೇ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಲಾಗಿತ್ತು.



ಇತ್ತೀಚೆಗೆ ಕಡಬ  ಬಿಜೆಪಿಯ ಕಾರ್ಯಕರ್ತರು ಮನೆ ಮನೆ ಪ್ರಚಾರದ ವೇಳೆ ಮಕ್ಕಳಿಗೆ ಪಕ್ಷದ ಶಾಲು ಹಾಕಿರುವ ಫೋಟೊವನ್ನು ಹಂಚಿಕೊಂಡು  ಈ ವ್ಯಕ್ತಿಯೇ ಕ್ರಮಕ್ಕೆ ಆಗ್ರಹಿಸಿದ್ದರು. ಇದೀಗ ಬಿಜೆಪಿ ಕಾರ್ಯಕರ್ತರು ಈತ ಅಪ್ಲೋಡ್ ಮಾಡಿರುವ ಪೋಟೊ ಹಂಚಿಕೊಂಡು ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.



ಸಂಸದ ವಿ.ಶ್ರೀನಿವಾಸ ಪ್ರಸಾದ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.


ಮೂತ್ರಕೋಶ ಸಮಸ್ಯೆ ಮತ್ತು ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. 3 ದಿನಗಳ ಹಿಂದೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗಿನಜಾವ 1.30ಕ್ಕೆ ಅವರು ಕೊನೆಯುಸಿರೆಳದರು.

 



ಸುಳ್ಯ ದ ಅರಂತೋಡು ಗ್ರಾಮ ಪಂಚಾಯತಿ ಸದಸ್ಯ ಹಾಗೂ ಬಿಜೆಪಿ ಕಾರ್ಯಕರ್ತ  ಗಂಗಾಧರ ಬನ ಹಾಗೂ ಶೇಷಪ್ಪ ಗೌಡರ ಅವರ ಮನೆ  ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರು ಎ.28ರಂದು ಅಪರಾಹ್ನ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.





ಬಿಜೆಪಿ ಯ ಸಕ್ರಿಯ ಕಾರ್ಯಕರ್ತರಾದ  ಗಂಗಾಧರ  ಬನ ಅವರ ಪುತ್ರ ದರ್ಶನ್ ಬಿ.ಜಿ. ಅವರು ಮತದಾನ ಮಾಡಲು ಮೈಸೂರಿನಿಂದ ಆಗಮಿಸುತ್ತಿದ್ದ ವೇಳೆ  ಸಂಪಾಜೆಯ ದೊಡ್ಡಡ್ಕ ಎಂಬಲ್ಲಿ  ಬೈಕ್ ಅಪಘಾತವಾಗಿ ದರ್ಶನ್ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಬ್ರಿಜೇಶ್ ಚೌಟ ಮನೆಗೆ ತೆರಳಿ ಸ್ವಾಂತ್ವನ ಹೇಳಿದರು.

ಈ ವೇಳೆ ಶೇಷಪ್ಪ ಗೌಡ ಬನ ಅವರ ಮನೆಗೂ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಕ್ಯಾಪ್ಟನ್ ಬ್ರಿಜೇಶ್ ಚೌಟರು ಮಾತನಾಡಿದರು.


ಶೇಷಪ್ಪ ಗೌಡರ ಪುತ್ರ ಅವಿನ್ ಅವರು ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂದರ್ಭದಲ್ಲಿ  ಸ್ಥಳೀಯ ಬಿಜೆಪಿ ನಾಯಕರುಗಳಾದ ಸಂತೋಷ್ ಕುತ್ತಮೊಟ್ಟೆ, ಕೇಶವ ಅಡ್ತಲೆ,  ದಯಾನಂದ ಕುರುಂಜಿ, ಶಿವಾನಂದ ಕುಕ್ಕುಂಬಳ , ಶಂಕರಲಿಂಗಂ, ತೀರ್ಥರಾಮ ಅಡ್ಕಬಳೆ, ಕುಸುಮಾಧರ ಅಡ್ಕಬಳೆ,  ಭಾರತಿ ಪುರುಷೋತ್ತಮ ಉಳುವಾರು, ಸೇರಿದಂತೆ ಮತ್ತಿತರ  ಸ್ಥಳೀಯ ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

 



ದಕ್ಷಿಣಕನ್ನಡ ಲೋಕಸಭಾ ಚುನಾವಣೆ ಮುಗಿದಿದ್ದು ಇನ್ನು ಎನಿದ್ದರು ಫಲಿತಾಂಶ ಕ್ಕೆ ಜೂನ್4 ರವರೆಗೆ ಕಾಯಬೇಕು.ಜಿಲ್ಲೆಯಲ್ಲಿ 77.56% ಮತದಾನ ವಾಗಿದ್ದು,ಮತ ಪ್ರಮಾಣ ಏರಿಕೆ ಯಾದ ಸಂದರ್ಭದಲ್ಲಿ ಬಿಜೆಪಿ ಗೆ ಅನುಕೂಲವಾದ ಉದಾಹರಣೆ ಜಿಲ್ಲೆಯಲ್ಲಿದ್ದು ಅದರಲ್ಲೂ ಮುಖ್ಯವಾಗಿ ಬಿಜೆಪಿ ಯ ಭದ್ರ ಬೇರು ಪುತ್ತೂರು, ಸುಳ್ಯ,ಬೆಳ್ತಂಗಡಿ ಯಲ್ಲಿ 80% ದಾಟಿರುವುದು ಬಿಜೆಪಿ ಗೆ ನೆಮ್ಮದಿ ತಂದಿದೆ. ಕಾಂಗ್ರೆಸ್ ಬಿಲ್ಲವ ಮತ್ತು ಮುಸ್ಲಿಂ ಕ್ರೋಡೀಕರಣ ಲೆಕ್ಕಾಚಾರದಲ್ಲಿದ್ದು ಅದೇನು ನಡೆದರೆ ಮೂಡಬಿದ್ರೆ, ಮಂಗಳೂರು ದಕ್ಷಿಣ ಮತ್ತು ಬಂಟ್ವಾಳ ದಲ್ಲಿ ಬಿಜೆಪಿ ಯ ಹಿಂದಿನ ಲೀಡ್ ಎಷ್ಟು ಕಡಿಮೆಯಾಗುತ್ತದೆ ಅದರ ಮೇಲೆ ನಿರ್ಧರಿತವಾಗಲಿದೆ. ಸದ್ಯಕ್ಕೆ ಸಂಘ ಪರಿವಾರ ಆಂತರಿಕ ಸಮೀಕ್ಷೆ ಪ್ರಕಾರ 80 ರಿಂದ 1ಲಕ್ಷ 20 ಸಾವಿರ ಒಳಗಡೆ ಬಿಜೆಪಿ ಗೆಲುವು ಸಾಧಿಸಬಹುದು,ಈ ಬಾರಿ ಸ್ವಲ್ಪ ಮಟ್ಟಿಗೆ ಜಾತಿ ಯ ವಿಚಾರ ಹಬ್ಬಿರುವುದು ಇದಕ್ಕೆ ಕಾರಣ,ಸ್ಥಳೀಯ ಶಾಸಕರು ಅಷ್ಟಾಗಿ ತೊಡಗಿಸಿಕೊಳ್ಳದು,ಅಸಹಕಾರ,ಕೆಲ ಒಳ ರಾಜಕಾರಣ, ಮುಸ್ಲಿಂ ಮತ ಕ್ರೋಡೀಕರಣ ಬಿಜೆಪಿ ಅಂತರ ಕಡಿಮೆಯಾಗಲು ಮುಖ್ಯ ಕಾರಣ. ಕಾಂಗ್ರೆಸ್ ಮೂಲ ಗಳ ಪ್ರಕಾರ ಸುಳ್ಯ ಪುತ್ತೂರು ಬೆಳ್ತಂಗಡಿ ಬಿಜೆಪಿ ಲೀಡ್ ಕಡಿಮೆಯಾಗಿ ಮಂಗಳೂರು ಕ್ಷೇತ್ರದಲ್ಲಿ 50 ಸಾವಿರ ಲೀಡ್, ದಕ್ಷಿಣ ಮತ್ತು ಮೂಡಬಿದಿರೆ ಯಲ್ಲಿ ಅಲ್ಪ ಮುನ್ನಡೆಯಿಂದ ಕೊನೆಯದಾಗಿ ಕಾಂಗ್ರೆಸ್ 30 ಸಾವಿರ ಅಂತರದಲ್ಲಿ ಗೆಲ್ಲುತ್ತೇವೆ ವಿಶ್ವಾಸ ಕಾಂಗ್ರೆಸ್ ಮುಖಂಡರದ್ದು. ಬಿಜೆಪಿ ಗೆ ಕಾರ್ನಾರ್,ಚಾವಡಿ ಸಭೆ,ಮೋದಿ ಮುಖ ನೋಡಿ ವೋಟ್ ಚಲಾಯಿಸುವ ಮತದಾರರು ಜಿಲ್ಲೆಯಲ್ಲಿರುವುದರಿಂದ ಬಿಜೆಪಿ  ಗೆಲ್ಲೋದು ನಿಶ್ಚಿತ ಆದರೆ ಅಂತರ ಕಡಿಮೆಯಾಗಬಹುದೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಲ್ಲಿ ವರೆಗೆ ಇಲ್ಲದ ಜಾತಿ ರಾಜಕಾರಣ ಬಹಿರಂಗವಾಗಿ ಕಾಣಿಸಿಕೊಂಡಿರುವುದು ಈ ಚುನಾವಣೆಯ ವಿಶೇಷ.ಅಂತಿಮವಾಗಿ ಬಿಜೆಪಿ  ದಕ್ಷಿಣಕನ್ನಡ ಕ್ಷೇತ್ರ ದಲ್ಲಿ ಆಶಾದಾಯಕವಾಗಿದೆ.

 



ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶೇ.83ಮತದಾನವಾಗಿದೆ.


ಬೆಳಗ್ಗೆ 7 ಗಂಟೆಗೆ ಆರಂಭಗೊಂಡ‌‌ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆ ತನಕ‌ ನಡೆಯಿತು.


ಕ್ಷೇತ್ರದಲ್ಲಿ ಒಟ್ಟು 2 ಲಕ್ಷದ 8 ಸಾವಿರದ 853 ಮತದಾರರಿದ್ದರು. ಅವರಲ್ಲಿ 1,73,354 ಮತದಾರರು ಮತ ಚಲಾಯಿಸಿದ್ದಾರೆ. ಒಟ್ಟು 233 ಬೂತ್ ಗಳಲ್ಲಿ ಮತದಾನ ನಡೆಯಿತು.


233 ಬೂತ್ ಗಳಲ್ಲಿ ಅಡ್ಡತೋಡು, ಶಾಂತಿನಗರ  ಸೇರಿದಂತೆ 4 ಬೂತ್ ಗಳಲ್ಲಿ ಟೋಕನ್ ನೀಡಲಾಗಿದ್ದು ಅದರ ಲೆಕ್ಕಾಚಾರ ಪೂರ್ತಿಯಾಗಿದ್ದು ಒಟ್ಟು  ಶೇ.83 ಫಲಿತಾಂಶ ದಾಖಲಾಗಿದೆ.

 



ಜಿಲ್ಲೆಯಲ್ಲಿ ನಡೆದ ಲೋಕಸಭಾ ಚುನಾವಣೆ  ಮತದಾನ ಮುಗಿದಿದ್ದು ಅಂತಿಮವಾಗಿ 77.40% ಮತದಾನವಾಗಿದೆ.ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸಿದ್ದು, ಒಟ್ಟು 1406873 ಚಲಾವಣೆ ಯಾದ ಮತಗಳು ಅದರಲ್ಲಿ ಮಹಿಳೆಯರು726025 ಮತ್ತು ಪುರುಷರು 680829 ಮತದಾನ ಮಾಡಿದ್ದಾರೆ.ಬಂಟ್ವಾಳ  81.37%,ಬೆಳ್ತಂಗಡಿ 80.58,ಮಂಗಳೂರು 78.01%,ಮಂಗಳೂರು ಉತ್ತರ 73.72%,ಮಂಗಳೂರು ದಕ್ಷಿಣ 67.29,ಮೂಡಬಿದಿರೆ 76.21,ಪುತ್ತೂರು 81.08 ಮತ್ತು ಸುಳ್ಯ  83% ಮತದಾನ ವಾಗಿದೆ,ಒಟ್ಟಾರೆ ಯಾಗಿ ಜಿಲ್ಲೆಯಲ್ಲಿ  77.40 % ಮತದಾನ ನಡೆದಿದೆ.

 





ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಪಾಲಿಗೆ ಹಬ್ಬ. ಮತದಾರರು ನೇರವಾಗಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಮುಂದಿನ ಆಡಳಿತ ಯಾರು ಮಾಡಬೇಕೆಂದು ನಿರ್ಧರಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮತದಾರರು ಬಿರು ಬಿಸಿಲನ್ನೂ ಲೆಕ್ಕಿಸದೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.‌ ಮತದಾನಕ್ಕೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಇದಕ್ಕಾಗಿ ಮತದಾರ ಬಾಂಧವರಿಗೆ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅಭಿನಂದನೆ ಸಲ್ಲಿಸಿದ್ದಾರೆ.‌


ಅಲ್ಲದೆ, ಇಡೀ ಚುನಾವಣಾ ಪ್ರಕ್ರಿಯೆಯನ್ನು ಶಾಂತಿಯುತವಾಗಿ ನಡೆಸಲು ಸಹಕರಿಸಿದ ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಅಧಿಕಾರಿ ವರ್ಗಕ್ಕೂ ಧನ್ಯವಾದ ಹೇಳಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಲ್ಲದೆ, ಪಕ್ಷದ ಕಾರ್ಯಕರ್ತರು ಪ್ರಖರ ಬಿಸಿಲಿನ ನಡುವೆಯೂ ಒಟ್ಟಾಗಿ ಮತದಾನ ಪ್ರಕ್ರಿಯೆಗೆ ಕೈಜೋಡಿಸಿದ್ದಾರೆ. 


ಬಿಜೆಪಿ ಪಾಲಿಗೆ ದೇವದುರ್ಲಭ ಕಾರ್ಯಕರ್ತರೇ ಶಕ್ತಿ. ಕರಾವಳಿಯ ಕಠಿಣ ಬಿಸಿಲಿನ ನಡುವೆಯೂ ಬೂತ್ ಏಜಂಟರಿಂದ ಹಿಡಿದು ಮತಗಟ್ಟೆ ಒಳಗೆ, ಹೊರಗೆ ಕಾರ್ಯ ನಿರ್ವಹಿಸಿದ ಪಕ್ಷದ ಕಾರ್ಯಕರ್ತರು, ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಪ್ರೇರಣೆ ನೀಡಿದ ಕಾರ್ಯಕರ್ತರಿಗೆ ಋಣಿಯಾಗಿದ್ದೇನೆ‌. ತಿಂಗಳ ಪರ್ಯಂತ ನಡೆದ ಚುನಾವಣೆ ಪ್ರಚಾರ, ಮನೆ ಮನೆಗೆ ತೆರಳಿ ಜನರು ಹಕ್ಕು ಚಲಾಯಿಸಲು ಪ್ರೇರಣೆ ನೀಡಿದ ಕಾರ್ಯಕರ್ತರು, ಬೂತ್ ಪ್ರಮುಖರು, ಪಕ್ಷದ ಸಭೆಗಳಿಗೆ ಬಂದು ಸಹಕರಿಸಿದ ಲಕ್ಷಾಂತರ ಕಾರ್ಯಕರ್ತರಿಗೆ, ಪ್ರಧಾನಿ ಮೋದಿ ಅಭಿಮಾನಿಗಳಿಗೆ ಅಭಿನಂದನೆ ಹೇಳುತ್ತೇನೆ. ಚುನಾವಣೆ ಪ್ರಕ್ರಿಯೆ ಉದ್ದಕ್ಕೂ ಪ್ರಚಾರ ನೀಡಿ ಎಲ್ಲ ರೀತಿಯ ಸಹಕಾರ ನೀಡಿದ ಮಾಧ್ಯಮ ಬಂಧುಗಳಿಗೂ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ನಿಮ್ಮೆಲ್ಲರ ಸಹಕಾರದಿಂದ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವನ್ನೂ ಹೊಂದಿದ್ದೇನೆ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‌

 



ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶೇ.82.97 ಮತದಾನವಾಗಿದೆ.


ಬೆಳಗ್ಗೆ 7 ಗಂಟೆಗೆ ಆರಂಭಗೊಂಡ‌‌ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆ ತನಕ‌ ನಡೆಯಿತು.


ಕ್ಷೇತ್ರದಲ್ಲಿ ಒಟ್ಟು 2 ಲಕ್ಷದ 8 ಸಾವಿರದ 853 ಮತದಾರರಿದ್ದರು. ಒಟ್ಟು 233 ಬೂತ್ ಗಳಲ್ಲಿ ಮತದಾನ ನಡೆಯಿತು.


233 ಬೂತ್ ಗಳಲ್ಲಿ ಅಡ್ಡತೋಡು ಸೇರಿದಂತೆ 4 ಬೂತ್ ಗಳಲ್ಲಿ ಟೋಕನ್ ನೀಡಲಾಗಿದ್ದು ಅದರ ಲೆಕ್ಕಚಾರ ಇನ್ನೂ ಬಂದಿಲ್ಲ. ಅವೆಲ್ಲವೂ ಆದರೆ ಸರಿ ಸುಮಾರು 83.03 ಫಲಿತಾಂಶ ದಾಖಲಾಗಬಹುದೆಂದು ಅಂದಾಜಿಸಲಾಗಿದೆ.

 



ದಕ್ಷಿಣಕನ್ನಡ ಲೋಕಸಭಾ ಚುನಾವಣೆ 5  ಗಂಟೆ ವೇಳೆಗೆ 71.72% ಮತದಾನ ವಾಗಿದೆ.ಬೆಳ್ತಂಗಡಿ 75.59%,ಮೂಡಬಿದಿರೆ 68.62%  ,ಮಂಗಳೂರು ಉತ್ತರ 69.16%,ಮಂಗಳೂರು ದಕ್ಷಿಣ 61.83%,ಮಂಗಳೂರು 73.51%,ಬಂಟ್ವಾಳ 73. 05% , ಪುತ್ತೂರು 75.59%, ಸುಳ್ಯ 78.35% ಶೇಕಡಾ ಮತದಾನವಾಗಿದೆ.

 


ದಕ್ಷಿಣಕನ್ನಡ ಲೋಕಸಭಾ ಚುನಾವಣೆ 3 ಗಂಟೆ ವೇಳೆಗೆ 58.33 ಮತದಾನ ವಾಗಿದೆ.ಬೆಳ್ತಂಗಡಿ 61.41%,ಮೂಡಬಿದಿರೆ 54.95%,ಮಂಗಳೂರು ಉತ್ತರ 54,15%,ಮಂಗಳೂರು ದಕ್ಷಿಣ 50.94%,ಮಂಗಳೂರು 58.72%,ಬಂಟ್ವಾಳ 61.96,ಪುತ್ತೂರು 62.02,ಸುಳ್ಯ 64.15 ಶೇಕಡಾ ಮತದಾನವಾಗಿದೆ.

 



ಪ್ರಧಾನ ನರೇಂದ್ರ ಮೋದಿ ಪಾಲಿಗೆ ನಾರಿಶಕ್ತಿಯೇ ರಕ್ಷಾ ಕವಚ ನವರಾತ್ರಿ ದಿನಗಳಲ್ಲಿ ಮೋದಿಯವರು ನವದುರ್ಗೆಯರನ್ನು ಆರಾಧಿಸಿ ಒಂಬತ್ತು ದಿನಗಳಲ್ಲಿ ಅನ್ನಾಹಾರ ತ್ಯಜಿಸಿ ಕೇವಲ ನೀರು ಕುಡಿದು ನವರಾತ್ರಿ ಆಚರಿಸುವುದನ್ನು ವಾಡಿಕೆ ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ನಾರಿಶಕ್ತಿಗೆ ನೀಡುವ ಮನ್ನಣೆಯನ್ನು ಗುರುತಿಸಿ ಈ ಬಾರಿ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ, ಮೋದಿ ಪರವಾಗಿ ನಾರಿಶಕ್ತಿ ಒಗ್ಗೂಡುವಂತೆ ಕರೆ ನೀಡಿದ್ದರು. ಇದಕ್ಕೆ ಜಿಲ್ಲೆಯಲ್ಲಿ ಒಳ್ಳೆಯ ಸ್ಪಂದನೆ ಸಿಕ್ಕಿದೆ.



ಎಲ್ಲ ಮತಗಟ್ಟೆಗಳಲ್ಲೂ ನವದುರ್ಗೆಯರಾಗಿ ಮಹಿಳೆಯರು ಮೊದಲು ಬಂದು ಮತ ಚಲಾಯಿಸಿದ್ದಾರೆ. ಇದರ ಫೋಟೋಗಳನ್ನು ಜಾಲತಾಣದಲ್ಲಿ ಶೇರ್ ಮಾಡಿದ್ದು, ಬಿಜೆಪಿ ಅಭ್ಯರ್ಥಿ ನೀಡಿರುವ ಕರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿರುವುದು ಕಂಡುಬಂದಿದೆ. ನವದುರ್ಗೆಯರ ರೂಪದಲ್ಲಿ ಮತಗಟ್ಟೆಗೆ ಮೊದಲು ಬಂದು ಮತ ಚಲಾಯಿಸಬೇಕು, ಆಮೂಲಕ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವಂತೆ ಆಶೀರ್ವಾದ ಮಾಡಬೇಕು ಎಂದು ಬ್ರಿಜೇಶ್ ಚೌಟ ಕರೆ ನೀಡಿದ್ದರು.


ಮಂಗಳೂರಿನ ಕಪಿತಾನಿಯೋ ಶಾಲೆಯ ಮತಗಟ್ಟೆಯಲ್ಲಿ ಒಂಬತ್ತು ಮಂದಿ ಮಹಿಳೆಯರು ಬೆಳಗ್ಗೆ 6.30ರ ವೇಳೆಗೇ ಬಂದು ಕುಳಿತುಕೊಂಡಿದ್ದರು. ಮತಗಟ್ಟೆ ತೆರೆಯುವ ಮೊದಲೇ ಸೀರೆಯುಟ್ಟ ನಾರಿಯರು ಹೊರಗಿನ ಅಂಗಣದಲ್ಲಿ ಕುಳಿತು ವಿಜಯದ ನಗೆ ಬೀರಿದ್ದಾರೆ. ಆಮೂಲಕ ನಾರಿಶಕ್ತಿಯ ಸಾಥ್ ನರೇಂದ್ರ ಮೋದಿ ಪರವಾಗಿದೆ ಎನ್ನುವ ಸಂದೇಶವನ್ನು ಮಹಿಳೆಯರು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕ್ಯಾ.ಬ್ರಿಜೇಶ್ ಚೌಟ, ಜಿಲ್ಲೆಯಾದ್ಯಂತ ನಾರಿಶಕ್ತಿಯರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಮೊದಲ ಬಾರಿಗೆ ಮತಗಟ್ಟೆಗೆ ಬಂದು ಮೋದಿಯವರಿಗೆ ಆಶೀರ್ವದಿಸಿದ್ದಾರೆ. ಅವರಿಗೆಲ್ಲ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.


ಸಾಮಾನ್ಯವಾಗಿ ಮಹಿಳೆಯರು ಬೆಳಗ್ಗೆ ಎಂದಿನ ತಮ್ಮ ಕೆಲಸ ಮುಗಿಸಿ ಮತಗಟ್ಟೆಗೆ ತೆರಳುವುದು ರೂಢಿ. ಆದರೆ, ಬ್ರಿಜೇಶ್ ಚೌಟರು ನವದುರ್ಗೆಯರ ರೂಪದಲ್ಲಿ ಬನ್ನಿ ಎನ್ನುವ ಕೋರಿಕೆ ಇಟ್ಟಿದ್ದನ್ನು ಮಹಿಳೆಯರು ಪುರಸ್ಕರಿಸಿದ್ದಾರೆ. ಆಮೂಲಕ ಮತದಾನ ಕೇಂದ್ರಗಳಲ್ಲಿ ಮಹಿಳೆಯರು ಬೆಳಗ್ಗೆಯೇ ಹೊಸ ಸಂಚಲನ ಮೂಡಿಸಿದ್ದಾರೆ.

 



ಮಂಗಳೂರು ನಗರ ದಕ್ಷಿಣ ಶಾಸಕರಾದ  ಡಿ.ವೇದವ್ಯಾಸ್ ಕಾಮತ್ ಅವರು ಗಾಂಧಿನಗರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೂತ್ ನಂಬರ್ 86 ರಲ್ಲಿ ಕುಟುಂಬ ಸಮೇತ ಮತ ಚಲಾಯಿಸಿದರು.


ರಾಷ್ಟ್ರದ ಪ್ರಗತಿಗಾಗಿ ಪ್ರತಿಯೊಬ್ಬರೂ ಮತ ಚಲಾಯಿಸಿ ತಮ್ಮ ಕರ್ತವ್ಯವನ್ನು ಪಾಲಿಸುವ ಮೂಲಕ ಪ್ರಜಾಪ್ರಭುತ್ವದ ಅತೀ ದೊಡ್ಡ ಕಾರ್ಯದಲ್ಲಿ ಜವಾಬ್ದಾರಿಯಿಂದ ಭಾಗವಹಿಸೋಣವೆಂದು ಕರೆ ನೀಡಿದರು.

 



ಮಾಜಿ ಶಾಸಕ ಹಾಗೂ ಮಾಜಿ ಸಚಿವರಾದ ಎಸ್.ಅಂಗಾರ ಅವರು ಬೂತ್ ಸಂಖ್ಯೆ 157 ದೊಡ್ಡತೋಟ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು. ಅಂಗಾರ ಅವರು ಪತ್ನಿ ಶ್ರೀಮತಿ ವೇದಾವತಿ ,ಪುತ್ರಿ ಪೂಜಾ ಹಾಗೂ ಕುಟುಂಬದ ಸದಸ್ಯರ ಜೊತೆ ಆಗಮಿಸಿ ಮತದಾನ ಮಾಡಿದರು.

 



ಸುಳ್ಯ:ಲೋಕಸಭಾ ಚುನಾವಣೆಯಲ್ಲಿ ದ.ಕ.ಲೊಕಸಭಾ ಕ್ಷೇತ್ರದಲ್ಲಿ ಮೊದಲ 4 ಗಂಟೆಯಲ್ಲಿ ಶೇ.30.96 ಮತದಾನವಾಗಿದೆ. 7 ಗಂಟೆಗೆ ಮತದಾನ ಆರಂಭಗೊಂಡಿದ್ದು 11 ಗಂಟೆಯ ವೇಳೆಗೆ ಶೇ.30.96 ಮತದಾರರು ಮತ ಚಲಾಯಿಸಿದ್ದಾರೆ. ಸುಳ್ಯದಲ್ಲಿ ಅತೀ ಹೆಚ್ಚು ಅಂದರೆ ಶೇ. 35.05 ಮತದಾನ ಆಗಿದೆ. 332.39,  27.46, ಮಂಗಳೂರು ಉತ್ತರ 30.39, ಮಂಗಳೂರು ದಕ್ಷಿಣ 26.54, ಮಂಗಳೂರು 31.63, ಬಂಟ್ವಾಳ 32.28, ಪುತ್ತೂರು 32.98 ಶೇಖಡಾ ಮತದಾನ ಆಗಿದೆ.

ಸುಳ್ಯ ದಲ್ಲಿ

 73,209 ಮಂದಿ ಮತ ಚಲಾಯಿಸಿ


ಶೆ.35.05 ಮತದಾನ ಆಗಿದೆ.

 



ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಶುಕ್ರವಾರ ಮಂಗಳೂರಿನ ಕಪಿತಾನಿಯೋ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಪತ್ನಿ ಸಾಯಿರಶ್ಮಿರಾಜ್ ಪೂಜಾರಿ ಹಾಗೂ ಪುತ್ರಿ ರಿತುರಾಜ್ ಹಾಗೂ ಹಿತೈಷಿಗಳೊಂದಿಗೆ ಆಗಮಿಸಿದ ಅವರು

 ಮತ ಚಲಾಯಿಸಿದರು.

 



ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಡೊಂಗರಿಕೇರಿ ವಾರ್ಡಿನ ಬೂತ್ ಸಂಖ್ಯೆ 117 ರಲ್ಲಿ ತಂದೆ ಮತ್ತು ತಾಯಿಯೊಂದಿಗೆ ತೆರಳಿ ಮತ ಚಲಾಯಿಸಿದರು. ಈ ವೇಳೆ ಚೌಟ


ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಏಳಿಗೆಗಾಗಿ ಪ್ರಧಾನಿ ಮೋದಿಯವರು ಕೈಗೊಂಡ ದೂರದೃಷ್ಟಿಯ ಯೋಜನೆಗಳನ್ನು ಮನದಲ್ಲಿಟ್ಟುಕೊಂಡು ತಮ್ಮ ಅತ್ಯಮೂಲ್ಯವಾದ ಮತವನ್ನು ಚಲಾಯಿಸಿ

ದೇಶದ ಉಜ್ವಲ ಭವಿಷ್ಯಕ್ಕಾಗಿ ತಪ್ಪದೇ ಮತದಾನ ಮಾಡಿ.. ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು

 



ಸುಳ್ಯ ತಾಲೂಕಿನ ಲ್ಲಿ ಮತದಾನ ಬೆಳಿಗ್ಗೆ ಯೇ ಚುರುಕುಗೊಂಡಿದ್ದು,7 ಗಂಟೆಯ ವೇಳೆಗೆ ಜನ ಸರತಿ ಸಾಲಿನಲ್ಲಿ ನಿಂತಿದ್ದರು.ಆರೆಸ್ಸೆಸ್ ದಕ್ಷಿಣ ಪ್ರಾಂತ್ಯ ಸಹ ಸೇವಾ ಪ್ರಮುಖ್ ನ.ಸೀತಾರಾಮ ಕುಟುಂಬ ಸಮೇತರಾಗಿ  ಜಾಲ್ಸುರ್  ಕದಿಕಡ್ಕ ಶಾಲೆಯಲ್ಲಿ ತಮ್ಮ ಮತಚಲಾಯಿಸಿದರು.

 



ಲೋಕಸಭಾ ಚುನಾವಣೆ ನಡೆಯುತಿದ್ದು ಬೆಳಗ್ಗೆ 7 ಗಂಟೆಯಿಂದ ‌ಮತದಾನ ಆರಂಭಗೊಂಡಿದೆ. ಪ್ರತೀ ಎರಡು ಗಂಟೆಗೊಮ್ಮೆ ವಿಧಾನಸಭಾ ‌ಕ್ಷೇತ್ರವಾರು ಮತ ಚಲಾವಣೆಯ ಶೇಕಡಾ ವನ್ನು ಅಧಿಕಾರಿಗಳು ಸಂಗ್ರಹ ಮಾಡುತಿದ್ದು, ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಶೇ.16.46 ಮತದಾನವಾಗಿದೆ. 


ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 233 ಬೂತ್ ಗಳಲ್ಲಿ ಮತದಾನ ನಡೆಯುತಿದ್ದು, ಒಟ್ಟು 2 ಲಕ್ಷದ 8 ಸಾವಿರದ 853 ಮಂದಿ ಮತದಾರರಿದ್ದಾರೆ.

 



ಎ.26ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ 233 ಬೂತ್ ಗಳಿಗೆ ಚುನಾವಣಾ ಕರ್ತವ್ಯಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತೆರಳಿದ್ದಾರೆ.



ಇಂದು‌ ಬೆಳಗ್ಗೆ  ಸುಳ್ಯ ಎನ್ ಎಂ ಸಿ ಕಾಲೇಜಿನಲ್ಲಿ ರಿಪೂರ್ಟ್ ಮಾಡಿಕೊಂಡು ಚುನಾವಣಾ ಸಿಬ್ಬಂದಿಗಳು ಬಳಿಕ ಮತ ಪೆಟ್ಟಿಗೆಯೊಂದಿಗೆ ತಮಗೆ ನಿಗದಿ ಪಡಿಸಿದ ಬೂತ್ ಗಳಿಗೆ ತೆರಳಿದರು.


  ಶಾಂತಿಯುತವಾಗಿ ನಡೆಯಲು ಚುನಾವಣೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು  ಸಿ ಆರ್ ಪಿ ಎಫ್ ನ 100 ಸಿಬ್ಬಂದಿಗಳು  ಪೊಲೀಸ್ ಇಲಾಖೆಯಿಂದ 426 ಮಂದಿ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ.


 ಧಾರವಾಡ ಭಾಗದ  ಓರ್ವ ಡಿವೈಎಸ್ಪಿ ಮೂರು ಪೊಲೀಸ್ ವೃತ ನಿರೀಕ್ಷಕರು,13 ಉಪ ನಿರೀಕ್ಷಕರುಗಳು ಒಳಗೊಂಡಿರುವ ಕಾವಲು ಪಡೆ ಈಗಾಗಲೇ ಸಿದ್ಧಗೊಂಡಿದೆ.ಇವರಲ್ಲಿ 82 ಮಂದಿ ಕೋಸ್ಟಲ್ ವಿಭಾಗದವರು, 145 ಮಂದಿ ಗ್ರಹರಕ್ಷಕ ದಳದ ಸಿಬ್ಬಂದಿಗಳು, ಉಳಿದಂತೆ ಬಳ್ಳಾರಿ ಸುಬ್ರಹ್ಮಣ್ಯ ಸುಳ್ಯ ಸೇರಿದ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಸೇರಿರುತ್ತಾರೆ.

 9 ಕೊಠಡಿಗಳಲ್ಲಿ  ಸೆಕ್ಟರ್ ಅಧಿಕಾರಿಗಳು ತಮ್ಮ ತಮ್ಮ ಅದೀನದಲ್ಲಿ ಬರುವ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳಿಗೆ ಮಾಹಿತಿ ಹಾಗೂ ತರಬೇತಿ ನೀಡುವ ಕಾರ್ಯಕ್ರಮಗಳು ನಡೆಯುತ್ತಿದೆ.

 ಪರಿಸರ ಸ್ವಚ್ಛತೆ ಮತ್ತು ಸಾಮಾಗ್ರಿಗಳ ಜೋಡಣೆ ಮುಂತಾದ ಕೆಲಸ ಕಾರ್ಯಗಳಲ್ಲಿ  ಸುಳ್ಯ ನಗರ ಪಂಚಾಯತ್ ಮುಖ್ಯ ಅಧಿಕಾರಿ  ಬಿ ಎಂ ಡಾಂಗೆ ಅವರ ನೇತೃತ್ವದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದೆ.

 ಸುಮಾರು ಒಂದುವರೆ ಸಾವಿರ ಮಂದಿಗೆ  ಊಟ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಬೆಳಗ್ಗಿನ ಪದಾರ್ಥದಲ್ಲಿ ಶಿರಾ ಉಪ್ಪಿಟ್ಟು ಅವಲಕ್ಕಿ ಚಾ ಹಾಗೂ ಕಾಫಿಯ ವ್ಯವಸ್ಥೆಯನ್ನು ಮಾಡಲಾಗಿತ್ತು.


 ಮಧ್ಯಾಹ್ನದ ಊಟದ ವ್ಯವಸ್ಥೆಯಲ್ಲಿ ಅನ್ನ ಸಾಂಬಾರು, ತರಕಾರಿ ಗಸಿ, ಉಪ್ಪಿನಕಾಯಿ, ಪಾಯಸ,  ಮೊಸರು ನೀಡಲಾಗುತ್ತಿದೆ. ಊಟದ ವ್ಯವಸ್ಥೆಗೆ ಸುಮಾರು 6 ಕೌಂಟರ್ ಗಳನ್ನು ನಿರ್ಮಿಸಲಾಗಿದ್ದು  ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

 ಮಧ್ಯಾಹ್ನದ ಊಟದ ಬಳಿಕ  ಎರಡು ಗಂಟೆಯಿಂದ  ಮತದಾನ ಕೇಂದ್ರಕ್ಕೆ ಸಿಬ್ಬಂದಿಗಳು ತೆರಳಲಿದ್ದು ಅವರಿಗಾಗಿ ನೂರಾರು ವಾಹನಗಳು ಸಿದ್ದಗೊಂಡಿವೆ.

 



ಕ್ಯಾಂಪ್ಕೊ ಸಂಸ್ಥೆಯ 'ಸಾಂತ್ವನ' ಯೋಜನೆಯಡಿಯಲ್ಲಿ  ಕ್ಯಾಂಪ್ಕೊ ಕಡಬ ಶಾಖೆಯ ಸಕ್ರಿಯ ಸದಸ್ಯರಾದ    ನೊಣಪ್ಪ ಗೌಡ ಹಾಗೂ ಗೋಪಾಲಕೃಷ್ಣ ಡಿ.  ರವರ ತೆರೆದ ಹೃದಯ  ಅಂಜಿಯೋಪ್ಲಾಸ್ಟಿ ಚಿಕಿತ್ಸೆಯ ಸಹಾಯಧನದ ಮೊತ್ತ  ತಲಾ ರೂ.50000/- (ರೂಪಾಯಿ ಐವತ್ತು ಸಾವಿರ) ದ ಚೆಕ್ಕನ್ನು  ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕರಾದ   ಕೃಷ್ಣಪ್ರಸಾದ ಮಡ್ತಿಲರವರು ಎ. 25 ರಂದು  ಸದಸ್ಯರಿಗೆ  ವಿತರಿಸಿದರು.ಈ ಸಂದರ್ಭದಲ್ಲಿ  ನೂಜಿಬಾಲ್ತಿಳ ಗ್ರಾಮ ಪಂಚಾಯತ್ ಸದಸ್ಯರಾದ   ಇಮ್ಮಾನ್ಯುವೆಲ್ ಪಿ. ಜೆ.,  ಎಂ.ಕೃಷ್ಣ ಭಟ್ ಕನಕವನ, ರಘುಚಂದ್ರ ರೈ, ಶಿವಪ್ಪ ಗೌಡ,ಶ್ರೀಮತಿ ವಸಂತಿ ಹಾಗೂ ಕಡಬ ಶಾಖೆಯ ಪ್ರಬಂಧಕರಾದ ಮಹೇಶ  ಕೆ. ಎನ್ ಉಪಸ್ಥಿತರಿದ್ದರು.

 



ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಪಿತ್ರಾರ್ಜಿತ ಆಸ್ತಿಯ 55% ಭಾಗ ಸರ್ಕಾರಕ್ಕೆ ನೀಡಬೇಕು ಆ ರೀತಿಯ ಕಾನೂನು ತರಬೇಕೆಂದು ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.ಖಾಸಗಿ ಸಂದರ್ಶನದಲ್ಲಿ ಮಾತನಾಡುತ್ತ ದೇಶದಲ್ಲಿ ಪಿತ್ರಾರ್ಜಿತ ಅಸ್ತಿಯಿದ್ದರೆ ವ್ಯಕ್ತಿ ಸತ್ತ ಮೇಲೆ 55% ಭಾಗ ಸರ್ಕಾರ ವಶಪಡಿಸಲಿದೆ ಉಳಿದ 45% ಭಾಗ ಮಾತ್ರ ಅವರಿಗೆ ನೀಡಲಾಗುವುದೆಂದರು,ಈ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು ಉಳಿದ ಜಾಗ ಅಕ್ರಮ ವಲಸಿಗರಿಗೆ ಕಾಂಗ್ರೆಸ್ ನೀಡಲು ಬಯಸಿದೆ ಒಬ್ಬ ವ್ಯಕ್ತಿಯ ಶ್ರಮ ದ ಹಣ ವನ್ನು ಸರ್ಕಾರ ವಶಪಡಿಸಿಕೊಳ್ಳುವುದು ಸರಿಯೇ?" ಪ್ರಶ್ನೆ ಮಾಡಿದ್ದಾರೆ

 



ಏಳು ಹಂತದಲ್ಲಿ ನಡಯುವ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಾಳೆ(ಏ.26ರಂದು) ನಡೆಯಲಿದೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ 12 ರಾಜ್ಯಗಳಲ್ಲಿ ಶುಕ್ರವಾರ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 7 ರಿಂದ ಸಂಜೆ 6ಗಂಟೆಯವರೆಗೆ ಮತದಾನ ನಡೆಯಲಿದೆ.


ಎರಡನೇ ಹಂತದಲ್ಲಿ ಕೇರಳದ 20, ಕರ್ನಾಟಕದ 14, ರಾಜಸ್ಥಾನದ 13, ಉತ್ತರಪ್ರದೇಶದ 8, ಮಹಾರಾಷ್ಟ್ರದ 8, ಮಧ್ಯಪ್ರದೇಶದ 6, ಅಸ್ಸಾಂನ 5 ಲೋಕಸಭಾ ಸ್ಥಾನಗಳು ಸೇರಿದಂತೆ 89 ಕ್ಷೇತ್ರಗಳಿ ಚುನಾವಣೆ ನಡೆಯಲಿದೆ. ಎರಡನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಬುಧವಾರ ಸಂಜೆ ಕೊನೆಗೊಂಡಿತ್ತು. ಚುನಾವಣೆ ಆಯೋಗ ಮತದಾನಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 14 ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದೆ. ಉಳಿದ 14 ಕ್ಷೇತ್ರಗಳಲ್ಲಿ ಮೇ.7ರಂದು ಚುನಾವಣೆ ನಡೆಯಲಿದೆ. ಕೇರಳದ 20 ಕ್ಷೇತ್ರಗಳಲ್ಲಿ ನಾಳೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

 



ಚುನಾವಣಾ ಸಿಬ್ಬಂದಿಯ ಬೇಜವಾಬ್ದಾರಿಯ ಪರಿಣಾಮವಾಗಿ ಬೆಳ್ಳಾರೆ ಯ ಮುಪ್ಪೇರ್ಯ ಗ್ರಾಮದ 137 ನೇ ಬೂತಿನ ಸುಮಾರು 28 ಜನರ ಹೆಸರು ಮತದಾರರ  ಪಟ್ಟಿಯಿಂದ ಡಿಲೀಟ್ ಆಗಿರುವ ಘಟನೆ ವರದಿಯಾಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗಿರುವುದರಿಂದ ಈ ಬಾರಿಯ ಮತದಾನಕ್ಕೆ ಇವರಿಗೆ ಅವಕಾಶ ಇಲ್ಲದಂತಾಗಿದೆ.

28 ಜನರ ಹೆಸರು ಡಿಲಿಟ್ ಆಗಿದ್ದು ಸುಮಾರು 23 ಜನರ ಹೆಸರು ಡಿಲಿಟ್ ಆಗಿರುವುದು ಕನ್ಫರ್ಮ್ ಆಗಿರುವುದಾಗಿ ಆ ವಾರ್ಡಿನ ಗ್ರಾ.ಪಂ.ಸದಸ್ಯ ಹರ್ಷ ಜೋಗಿಬೆಟ್ಟು ತಿಳಿಸಿದ್ದಾರೆ.

ಈ ಬಗ್ಗೆ ಚುನಾವಣಾ ಬೂತ್ ಲೆವೆಲ್ ಆಫೀಸರ್ ಕೃಷ್ಣಪ್ರಸಾದ್ ರವರಲ್ಲಿ ವಿಚಾರಿಸಿದಾಗ " ಶಿಫ್ಟಿಂಗ್ ಆಗುವಾಗ ಈ ರೀತಿ ಆಗಿದೆ.

ಮದುವೆ ಆಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಾಗ ಮನೆಯಲ್ಲಿ ಅವರು ಇಲ್ಲದಿದ್ದರೆ ಶಿಫ್ಟಿಂಗ್  ಅಂತ ಕೊಡಬೇಕು. ನಾವು ಆ ರೀತಿ ಕೊಟ್ಟಿದ್ದೇವೆ.  ಆದರೆ 

ಚುನಾವಣಾ ಕಚೇರಿಯಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ.

6 ಜನರದ್ದು ಹಾಗೆ ಆಗಿದೆ.

15 ಜನರದ್ದು ನಿಧನರಾದದ್ದು ಇದೆ"  ಎಂದು ತಿಳಿಸಿದ್ದಾರೆ.

 



ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರ ಬಗ್ಗೆ ಬಂಟರ ಬ್ರಿಗೇಡ್ ಹೆಸರಲ್ಲಿ ಕರಪತ್ರ ಮುದ್ರಿಸಿ, ಆಕ್ಷೇಪಾರ್ಹ ವಿಚಾರಗಳನ್ನು ಬರೆದು ಜಾತಿ, ಜಾತಿಗಳ ನಡುವೆ ದ್ವೇಷ ಹಬ್ಬಿಸುವ ಯತ್ನ ನಡೆದಿದ್ದು ಬಿಜೆಪಿ ಕಾನೂನು ಪ್ರಕೋಷ್ಠದಿಂದ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ. 



ಕರಪತ್ರದಲ್ಲಿ ಬ್ರಿಜೇಶ್ ಚೌಟರ ಭಾವಚಿತ್ರ ಬಳಸಿ ಆಕ್ಷೇಪಾರ್ಹ ವಿಚಾರಗಳನ್ನು ಮುದ್ರಿಸಿ, ದ್ವೇಷ ಹಬ್ಬಿಸುವ ಯತ್ನ ನಡೆದಿದೆ. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯೇ ಈ ಕೃತ್ಯವನ್ನು ಮಾಡಿದ್ದಾರೆ. ಈ ರೀತಿಯ ಕರಪತ್ರವನ್ನು ಮುದ್ರಿಸಿ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಜಾತಿಗಳ ನಡುವೆ ದ್ವೇಷ ಬಿತ್ತಿ ಅದರ ದುರ್ಲಾಭವನ್ನು ಕಾಂಗ್ರೆಸ್ ಅಭ್ಯರ್ಥಿ ಪಡೆಯುತ್ತಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾನೂನು ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ದೇವಿಪ್ರಸಾದ್ ಸಾಮಾನಿ ಒತ್ತಾಯಿಸಿದ್ದಾರೆ. 


ಬಂಟ ಬ್ರಿಗೇಡ್ ಎನ್ನುವ ಯಾವುದೇ ಸಂಸ್ಥೆ ಅಸ್ತಿತ್ವದಲ್ಲಿಲ್ಲ. ಅಂತಹ ಸಂಸ್ಥೆ ಹೆಸರಲ್ಲಿ ಯಾವುದೇ ಕಾರ್ಯ ಚಟುವಟಿಕೆ ನಡೆಸುವುದು ಕಂಡುಬಂದಿಲ್ಲ. ಚುನಾವಣೆಗೆ ಎರಡು ದಿನ ಇರುವಾಗ ಮತದಾರರಿಗೆ ಪ್ರಭಾವ ಬೀರುವ ಉದ್ದೇಶದಿಂದ ಈ ರೀತಿಯ ಕೃತ್ಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇಂತಹ ವಿಚಾರಗಳನ್ನು ಪಸರಿಸಿ ಚುನಾವಣೆಯಲ್ಲಿ ಲಾಭ ಮಾಡಲು ಯತ್ನಿಸುತ್ತಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಅಧಿಕಾರಿಯಲ್ಲಿ ಒತ್ತಾಯಿಸಿದ್ದಾರೆ.

 



ಲೋಕಸಭಾ ಚುನಾವಣೆಯ ಪ್ರಯುಕ್ತ ನಗರ‌ ಬಿಜೆಪಿ ವತಿಯಿಂದ ಸುಳ್ಯದಲ್ಲಿ ರೋಡ್ ಶೋ‌ ಮೂಲಕ ಬಿಜೆಪಿ‌ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪರ ಮತಯಾಚನೆ ನಡೆಯಿತು.



ಸುಳ್ಯ ಜ್ಯೋತಿ ಸರ್ಕಲ್ ನಿಂದ ಆರಂಭಗೊಂಡ ರೋಡ್ ಶೋ, ನಗರದ ಮುಖ್ಯ‌ಬೀದಿಯಲ್ಲಿ ನಡೆಯಿತು. ಅಂಗಡಿಗಳಿಗೆ ಮನವಿ ಪತ್ರ ನೀಡುತ್ತಾ ಮತ ಯಾಚನೆ ಮಾಡಿದರು.




ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವೀಂದ್ರ ಉಳಿದೊಟ್ಟು, ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ‌ ಸಚಿವ ಎಸ್.ಅಂಗಾರ, ಶಾಸಕಿ‌ ಭಾಗೀರಥಿ ಮುರುಳ್ಯ ,ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜೆಡಿಎಸ್ ಅಧ್ಯಕ್ಷ ‌ಸುಕುಮಾರ್ ಕೋಡ್ತುಗುಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಉಪಾಧ್ಯಕ್ಷ ರವಿಕುಮಾರ್ ಬುಡ್ಲೆಗುತ್ತು, ರಾಮಚಂದ್ರ ಬಳ್ಳಡ್ಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ, ಬಿಜೆಪಿ ಸುಳ್ಯ ಪ್ರಭಾರಿ  ಪ್ರಮುಖರಾದ ಎ.ಟಿ. ಕುಸುಮಾಧರ, ಶಂಕರ ಪೆರಾಜೆ, ಜಯರಾಜ್ ಕುಕ್ಕೆಟ್ಟಿ, ಸುಭೋದ್ ಶೆಟ್ಟಿ, ಪಿ.ಕೆ.ಉಮೇಶ್, ವಿನಯ ಕುಮಾರ್ ಕಂದಡ್ಕ, ಚಂದ್ರಜಿತ್ ಮಾವಂಜಿ, ನಾರಾಯಣ ಎಂ.ಎಸ್., ಚೋಮ ನಾವೂರು, ಜಗದೀಶ್ ಡಿ.ಪಿ., ಪಿ.ಕೆ.ಉಮೇಶ್, ಗುಣವತಿ ಕೊಲ್ಲಂತಡ್ಕ, ಶಿಲ್ಪಾ ಸುದೇವ್, ಪ್ರವಿತಾ ಪ್ರಶಾಂತ್, ಗುರುಸ್ವಾಮಿ‌ ಬೀರಮಂಗಲ, ಶಿವರಾಮ ಕೇರ್ಪಳ, ಚಂದ್ರಶೇಖರ ನಡುಮನೆ, ಬಾಲಗೋಪಾಲ ಸೇರ್ಕಜೆ, ಅಶೋಕ್ ಅಡ್ಕಾರ್, ಶೀನಪ್ಪ ಬಯಂಬು, ಬಾಲಕೃಷ್ಣ ಕೀಲಾಡಿ, ಧನಂಜಯ ನೆಲ್ಲೂರು‌ಕೆಮ್ರಾಜೆ, ಕೇಶವ ಸಿ.ಎ., ಬುದ್ದ ನಾಯ್ಕ, ಜಿನ್ನಪ್ಪ ಪೂಜಾರಿ, ನವೀನ ಸಾರಕೆರೆ, ಹೇಮಂತ ಮಠ ಸೇರಿದಂತೆ ನೂರಾರು ನಗರ ಬಿಜೆಪಿ, ಗ್ರಾಮ ಸಮಿತಿ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.

 



ಮಂಗಳೂರು: ದ.ಕ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಮುಂಜಾಗ್ರತಾ ಕ್ರಮವಾಗಿ 1157 ಮಂದಿ ಮೇಲೆ ಕ್ರಮ ಜರುಗಿಸಲಾಗಿದೆ. 806 ಮಂದಿ ಮೇಲೆ ಬೌಂಡ್ ಓವ‌ರ್ ಮಾಡಲಾಗಿದೆ. 75 ಮಂದಿಯನ್ನು ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ. 8 ಮಂದಿ ಮೇಲೆ ಗೂಂಡಾ ಕಾಯ್ದೆ ದಾಖಲಿಸಲಾಗಿದೆ. 4 ಮಂದಿ ಮೇಲೆ ಹೈಕೋರ್ಟ್‌ ಅಡ್ಡೆಸರಿ ಕಮಿಟಿಯಿಂದ ಗೂಂಡಾ ಕಾಯ್ದೆ ಅಡಿ ಒಂದು ವರ್ಷದ ಅವಧಿಗೆ ಬಂಧನ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನ‌ರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರದ ಒಟ್ಟು 42 ಕಡೆಯಲ್ಲಿ ಸಿಎಪಿಎಫ್ ತುಕಡಿ ಸ್ಥಳೀಯ ಪೊಲೀಸ್ ನೊಂದಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದ ನಾಲ್ಕು ವಿಧಾನ ಸಭಾ ಕ್ಷೇತ್ರದಲ್ಲಿ 12 ಎಸ್‌ಎಸ್ಟಿ ಚೆಕ್‌ ಪೋಸ್ಟ್ ನಿಯೋಜನೆ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ನಂತರ ನಗರದಲ್ಲಿ ಒಟ್ಟು 2224489/- ನಗದು, 887950 ಮೌಲ್ಯದ ಅಮಲು ಪದಾರ್ಥ, ಒಟ್ಟು ಮೂರು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.


ಮಂಗಳೂರು ನಗರದಲ್ಲಿ ಚುನಾವಣಾ ಬಂದೋಸ್ತ್ರಾಗಿ 46 ಪಿಎಸ್‌ಐ ಸೆಕ್ಟ‌ರ್ ಮೊಬೈಲ್ ಗಳು, 14 ಪಿಐ ಸೂಪ‌ರ್ ವಿಷನ್ ಸೆಕ್ಟರ್ ಅಧಿಕಾರಿಗಳು, 4 ಎಸಿಪಿ ನೋಡಲ್ ಅಧಿಕಾರಿಗಳು, 1003 ಪೋಲಿಸ್ ಸಿಬ್ಬಂದಿಗಳು, 350 ಗೃಹ ರಕ್ಷಕ ಸಿಬ್ಬಂದಿಗಳು, 17 ಫಾರೆಸ್ಟ್ ಗಾರ್ಡ್ ನಿಯೋಜನೆ ಮಾಡಲಾಗಿದ್ದು, 36 ಕ್ರಿಟಿಕಲ್ ಮತಗಟ್ಟೆಗಳಿಗೆ ಕೇಂದ್ರೀಯ ಭದ್ರತಾ ಪಡೆ 16 ಎಎಸ್‌ಐ ನಿಯೋಜನೆ ಮಾಡಲಾಗಿದೆ. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಪ್ರದೇಶದಲ್ಲಿ 3 ಪಿಐ, 21 ಪಿಎಸ್‌ಐ, 13 ಎಎಸ್‌ಐ, 43 ಪಿಸಿ,ಎಫ್ಟಿ, ಸೇರಿ 80 ಮಂದಿ ನಿಯೋಜನೆ ಮಾಡಲಾಗಿದೆ.ನಗರದಲ್ಲಿ 2 ಸಿಆರ್ಪಿಎಫ್, 1 ಕೆಎಸ್‌ಆರ್ಫಿ ತುಕುಡಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

 



ಮಂಗಳೂರು: ತಾನು ಹಿಂದೂ. ಹಿಂದೂ ಧರ್ಮದ ಆಚಾರ - ವಿಚಾರಗಳನ್ನು ಶಿರಸಾ ವಹಿಸಿ ಪಾಲಿಸುತ್ತಿದ್ದೇನೆ‌. ಇಂತಹ ಹಿಂದೂ ಧರ್ಮ, ಸಾಮರಸ್ಯದ ಬದುಕನ್ನು ತನಗೆ ಹೇಳಿಕೊಟ್ಟಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.


ಸುರತ್ಕಲ್ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬೈಕಂಪಾಡಿ ಎಪಿಎಂಸಿ ಮುಂಭಾಗ ಮಂಗಳವಾರ ಸಂಜೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.


ತುಳುನಾಡಿನ ಸಂಸ್ಕೃತಿ, ಗ್ರಾಮೀಣ ಸೊಗಡಿನ ಆಟಗಳು ಇವುಗಳ ಜೊತೆಗೆ ಈ ತುಳುನಾಡಿನಲ್ಲಿ ಮೆಡಿಕಲ್ ಹಬ್, ಶಿಕ್ಷಣ ಹಬ್ ಮಾಡಲು ಸಾಧ್ಯ. ಪ್ರವಾಸೋದ್ಯಮ ಬೆಳೆಸಲು ವಿಫುಲ ಅವಕಾಶಗಳಿವೆ. ಇದರಿಂದ ಉದ್ಯೋಗ ಸೃಷ್ಟಿ, ಜಿಲ್ಲೆಯ ಅಭಿವೃದ್ಧಿ ಸಾಧ್ಯ. ಯುವಕರು ನಮ್ಮೂರಲ್ಲೇ ಉದ್ಯೋಗ ಪಡೆಯಲು ಸಾಧ್ಯ. ಮಕ್ಕಳ ಇರುವಿಕೆಯಲ್ಲಿ ಕಾಯುತ್ತಿರುವ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಹೀಗೆ ಅಭಿವೃದ್ಧಿಯ ಜೊತೆ ಹೆತ್ತವರ ಕನಸೂ ಈಡೇರಲಿದೆ. ಮನೆ ಮನೆಗಳು ಗಟ್ಟಿಯಾದರೆ, ದೇಶ ಸಮೃದ್ಧವಾಗಲಿದೆ ಎಂದರು.


ಕಾಂಗ್ರೆಸ್ ಗೆಲ್ಲುವುದು ನಿಶ್ಚಯವಾಗುತ್ತಿದ್ದಂತೆ ಅಪಪ್ರಚಾರದ ಕೆಲಸ ನಡೆಯುತ್ತಿದೆ. ಇದಕ್ಕೆ ಕಿವಿಕೊಡಬೇಡಿ. ನೀವು ತಲೆತಗ್ಗಿಸುವ ಕೆಲಸವನ್ನು ತಾನೆಂದೂ ಮಾಡುವುದಿಲ್ಲ. ನೀವು ಪಟ್ಟ ಶ್ರಮ ವ್ಯರ್ಥವಾಗಬಾರದು. ಆದ್ದರಿಂದ ಮುಂದಿರುವ ಕೆಲವು ಗಂಟೆಗಳಷ್ಟು ಸಮಯ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ. ತುಳುನಾಡಿನ ಸಾಮರಸ್ಯದ ಗತವೈಭವ ಮರುಕಳಿಸಲಿದೆ ಎಂದರು.


ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಬೈಕಂಪಾಡಿಯಲ್ಲಿ ನಡೆದಿರುವ ಪ್ರಚಾರ ಸಭೆ ಕಾಂಗ್ರೆಸ್ ಗೆಲುವಿನ ದಿಕ್ಸೂಚಿ. ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವ ಸೂಚನೆ ಸಿಕ್ಕಿದೆ. ದಕ್ಷಿಣ ಕನ್ನಡದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪ್ರಾಮಾಣಿಕ, ಸಮರ್ಥ ಅಭ್ಯರ್ಥಿ. ಯಾವುದೇ ಕಳಂಕ ರಹಿತ ವ್ಯಕ್ತಿತ್ವ ಅವರದ್ದು. ಮತದಾನದ ಕೊನೆಕ್ಷಣದವರೆಗೂ ಕೆಲಸ ಮಾಡಿ, ಶ್ರಮಿಸಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಗೆಲ್ಲಿಸಿ ಎಂದರು.



ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡಿ, ರಾಜ್ಯದಲ್ಲಿ ೬ ಕೋಟಿಗೂ ಅಧಿಕ ಮಂದಿಗೆ ಕಾಂಗ್ರೆಸ್ ಸರಕಾರ ಗ್ಯಾರೆಂಟಿ ಯೋಜನೆಯನ್ನು ನೀಡಿದೆ. ಇದಲ್ಲದೇ ಅನೇಕ ಅಭಿವೃದ್ಧಿ ಸಾಧನೆಯನ್ನು ಕಾಂಗ್ರೆಸ್ ಮಾಡಿದೆ. ಆದರೆ ಯಾವ ಅಭಿವೃದ್ಧಿ ಸಾಧನೆಯನ್ನು ಮಾಡದ ಬಿಜೆಪಿ, ರಾಜ್ಯದಲ್ಲಿ ಯಾವ ರೀತಿ ಮತ ಕೇಳುತ್ತಾರೆ. ಕಾಂಗ್ರೆಸಿಗರಿಗೆ ಇದರ ಭಯ ಇಲ್ಲ. ಧೈರ್ಯವಾಗಿ ಜನರ ಬಳಿ ಹೋಗಿ ಮತ ಕೇಳಬಹುದು. ಜನರೂ ಕಾಂಗ್ರೆಸ್ ಕಾರ್ಯಕರ್ತರನ್ನು ಸ್ವಾಗತಿಸುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಾತನಾಡಿ, ಇಷ್ಟು ದಿನ ಕಾಂಗ್ರೆಸ್ ಗೆಲುವಿಗಾಗಿ ಮಾಡಿರುವ ನಮ್ಮ ಶ್ರಮ ವ್ಯರ್ಥವಾಗುವುದಿಲ್ಲ. ಪದ್ಮರಾಜ್ ಆರ್. ಪೂಜಾರಿ ಅವರು ಈ ಬಾರಿ ಗೆದ್ದು, ಜಿಲ್ಲೆಯ ಅಭಿವೃದ್ಧಿಗೆ ಮುನ್ನುಡಿ ಬರೆಯಲಿದ್ದಾರೆ ಎಂದರು.


ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಮೇಯರ್ ಮಹಾಬಲ, ಎಂ.ಜಿ. ಹೆಗ್ಡೆ, ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ, ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜಾ, ಕೆಪಿಸಿಸಿ ಸದಸ್ಯ ಪೃಥ್ವಿರಾಜ್, ರಾಜೀವ್ ಗಾಂಧಿ ವೈದ್ಯಕೀಯ ವಿವಿ ಸಿಂಡಿಕೇಟ್ ಸದಸ್ಯ ಡಾ. ಇಫ್ತಿಕರ್, ಸುರೇಂದ್ರ ಕಂಬ್ಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ಯಾಲೆಟ್ ಪಿಂಟೋ, ಜಯಲಕ್ಷ್ಮೀ ಪೂಜಾರಿ, ಪ್ರತಿಭಾ ಕುಳಾಯಿ, ಪದ್ಮನಾಭ ಕೋಟ್ಯಾನ್, ಜಯಶೀಲ ಅಡ್ಯಂತಾಯ, ಪುರುಷೋತ್ತಮ ಚಿತ್ರಾಪುರ ಮೊದಲಾದವರು ಉಪಸ್ಥಿತರಿದ್ದರು.


ಬೃಹತ್ ರೋಡ್ ಶೋ:

ಪ್ರಚಾರ ಸಭೆಗೆ ಮೊದಲು ಕುಳಾಯಿಯಿಂದ ಬೈಕಂಪಾಡಿಯವರೆಗೆ ಬೃಹತ್ ರೋಡ್ ಶೋ ನಡೆಯಿತು. ಅಭ್ಯರ್ಥಿ, ಮುಖಂಡರು ತೆರೆದ ವಾಹನದಲ್ಲಿ ಸಾಗಿದರೆ, ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ಮತದಾರರು ಕಾಲ್ನಡಿಗೆಯಲ್ಲಿ ಘೋಷಣೆ ಕೂಗುತ್ತಾ, ಗ್ಯಾರೆಂಟಿ ಯೋಜನೆಯ ಫಲಕ ಪ್ರದರ್ಶಿಸುತ್ತಾ ಸಾಗಿದರು. ರೋಡ್ ಶೋಗೆ ಚೆಂಡೆ, ನಾಸಿಕ್ ಬ್ಯಾಂಡ್, ಹುಲಿ ಕುಣಿತ ರಂಗು ತುಂಬಿತು. ಬೈಕಂಪಾಡಿ ಬಳಿ ಬೃಹತ್ ಹೂಮಾಲೆಯನ್ನು ಅಭ್ಯರ್ಥಿಗೆ ಹಾಕಲಾಯಿತು.

 


ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರವಾಗಿ ಬಿಜೆಪಿ ಸುಳ್ಯ ನಗರ ವತಿಯಿಂದ ಇಂದು ಅಪರಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯ ತನಕ ಸುಳ್ಯ ನಗರದ  ಮುಖ್ಯ ರಸ್ತೆಯಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಲಿದೆ.


ಜ್ಯೋತಿ ವೃತ್ತದಿಂದ ಪ್ರಾರಂಭಗೊಂಡು ಯಾತ್ರೆಯು ಗಾಂಧಿನಗರ ಪೆಟ್ರೋಲ್ ಪಂಪ್ ನಲ್ಲಿ ಸಂಪನ್ನಗೊಳ್ಳಲಿದೆ.

 



ಸೌಜನ್ಯ ಪರ ಹೋರಾಟದ ನೇತೃತ್ವ ವಹಿಸಿರುವ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಹೋರಾಟ ಸಮಿತಿಯ ವತಿಯಿಂದ ನೋಟಾ ಚಳವಳಿ ರೋಡ್ ಶೋ ಎ. 23ರಂದು ನಿಂತಿಕಲ್ಲು, ಬೆಳ್ಳಾರೆ, ಐವರ್ನಾಡು ,ಸುಳ್ಯ  ಪೇಟೆಯಲ್ಲಿ ನಡೆಯಿತು.

ಹತ್ತಾರು ದ್ವಿಚಕ್ರ, ತ್ರಿಚಕ್ರ ಮತ್ತು ಚತುರ್ಚಕ್ರ ವಾಹನದ ಮೂಲಕ ಓಟ್ ಫಾರ್ ನೋಟಾ ಎಂಬ ಘೋಷಣೆಯೊಂದಿಗೆ ಜಾಥಾ ನಡೆಯಿತು. ನೂರಾರು ಮಂದಿ ಸೌಜನ್ಯ ಪರ ಹೋರಾಟಗಾರರು ಚಳವಳಿಯಲ್ಲಿ ಭಾಗವಹಿಸಿದ್ದರು.

 



ಬಿಜೆಪಿ ಮಂಡಲ ಮಾಜಿ ಉಪಾಧ್ಯಕ್ಷ ರಾಗಿ, ಜಾಲ್ಸೂರು‌ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ರಾಗಿದ್ದ ಕರುಣಾಕರ ಅಡ್ಪಂಗಾಯ ಹಾಗೂ ಅಜ್ಜಾವರ ಗ್ರಾಮ ಪಂಚಾಯತ್ ‌ಮಾಜಿ ಅಧ್ಯಕ್ಷೆ ಶ್ರೀಮತಿ ಬೀನಾ ಕರುಣಾಕರ ಅಡ್ಪಂಗಾಯ ‌ದಂಪತಿ‌ ಸಹಿತ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.


ಇಂದು ಸುಬ್ರಹ್ಮಣ್ಯ ದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ‌ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ರಿದ್ದು ಕರುಣಾಕರ ಅಡ್ಪಂಗಾಯ ದಂಪತಿಗಳಿಗೆ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.



ಈ ಕುರಿತು ಪ್ರತಿಕ್ರಿಯೆ ನೀಡಿರುವ ಕರುಣಾಕರ ಅಡ್ಪಂಗಾಯ ರು

"ಬಿಜೆಪಿ ಪಕ್ಷದಲ್ಲಿ‌ ದುಡಿದವರನ್ನು‌ ಕಡೆಗಣಿಸಲಾಗಿದೆ.‌ ಅಡ್ಪಂಗಾಯದಲ್ಲಿ ಬಿಜೆಪಿ ಗೆಲುವು ಆಗದ ಸಂದರ್ಭದಲ್ಲಿ ಪಂಚಾಯತ್ ಚುನಾವಣೆಯಲ್ಲಿ ನಾವು ಗೆದ್ದು, ಕಾಂಗ್ರೆಸ್ ಬಹುಮತವಿದ್ದ ಪಂಚಾಯತ್ ನಲ್ಲಿ ಬಿಜೆಪಿ ಆಡಳಿತ‌ ನಡೆಸಿದ್ದು ದಾಖಲೆ. ಕಳೆದ ಸಿ.ಎ. ಬ್ಯಾಂಕ್‌ ಚುನಾವಣೆಯಲ್ಲಿ ಪಕ್ಷ ಕೆಲವರ ಮಾತು ಕೇಳಿ ನಮಗೆ  ಅನ್ಯಾಯ‌ ಮಾಡಿದೆ. ಕಾಂಗ್ರೆಸ್ ಪಕ್ಷವನ್ನು ಜನರು ನೆಚ್ಚಿಕೊಂಡಿದ್ದು, ಗ್ಯಾರಂಟಿ ‌ಯೋಜನೆ ಜನಪರವಾಗಿದೆ.‌ ಬಿಜೆಪಿ ಸರಕಾರದಿಂದ ಬಡವರ ಪರ ಕೆಲಸ ಆಗುತಿಲ್ಲ. ನಮ್ಮ ಅಸ್ತಿತ್ವಕ್ಕೆ ನೋವಾಗುವಂತೆ ಕೆಲವು ವ್ಯಕ್ತಿಗಳು ಮಾಡಿದರೂ ಅದನ್ನು ಪಕ್ಷ ಸರಿ‌ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.

 



ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ದಾಖಲೆಯ ಅಂತರದಿಂದ ಗೆಲ್ಲಿಸಬೇಕು. ಭಾರತೀಯ ಸೇನೆಯ ಗೋರ್ಖಾ ರೆಜಿಮೆಂಟಿನಲ್ಲಿ ದೇಶ ಸೇವೆ ಮಾಡಿ ಬಂದವರು. ದಕ್ಷಿಣ ಕನ್ನಡ ಜಿಲ್ಲೆಯ ಸರ್ವಾಂಗಣ ಅಭಿವೃದ್ಧಿಯ ಬಗ್ಗೆ ದೊಡ್ಡ ಕನಸನ್ನು ಇಟ್ಟುಕೊಂಡ ವ್ಯಕ್ತಿ ನಮಗೆ ಅಭ್ಯರ್ಥಿಯಾಗಿ ಸಿಕ್ಕಿದ್ದಾರೆ. ರೆಕಾರ್ಡ್ ಮಾದರಿಯಲ್ಲಿ ಗೆಲ್ಲಿಸಿ ಮೋದಿಯವರ ಕೈಬಲಪಡಿಸಬೇಕು ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.



ಪುತ್ತೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೋದಿಯವರು ಮತ್ತೊಮ್ಮೆ ಪ್ರಧಾನಿ ಹೇಗೂ ಆಗುತ್ತಾರೆ ಎಂದು ಉದಾಸೀನ ತಾಳುವುದು ಬೇಡ. ಕಳೆದ ಬಾರಿ 79 ಪರ್ಸೆಂಟ್ ಓಟಿಂಗ್ ಆಗಿತ್ತು. ಅದನ್ನು ನಾವು 85 ಪರ್ಸೆಂಟ್ ಆಗುವಂತೆ ಮಾಡಬೇಕಾಗಿದೆ. ಗೆಲುವಿನ ಅಂತರವನ್ನು ದಾಖಲೆಯ ಮಟ್ಟಕ್ಕೆ ಒಯ್ಯಬೇಕಾಗಿದೆ. ಎಪ್ರಿಲ್ 19ರಂದು ಮೊದಲ ಹಂತದ ಓಟಿಂಗ್ ತಮಿಳುನಾಡು ಸೇರಿ ಕೆಲವು ಕಡೆ ಆಗಿದೆ. ಆದರೆ, 2019ಕ್ಕೆ ಹೋಲಿಸಿದರೆ ಈ ಬಾರಿ ಮೊದಲ ಹಂತದಲ್ಲಿ ಓಟಿಂಗ್ ಪರ್ಸೆಂಟ್ ಕಡಿಮೆಯಾಗಿದೆ. ಬಿಸಿಲು ಜಾಸ್ತಿಯಿದೆಯೆಂದು ನಾವು ಓಟ್ ಮಾಡದೇ ಇರುವುದಲ್ಲ.


ಯಾರಿಗೆಲ್ಲ ನಮ್ಮ ಪ್ರಧಾನಿ ಮೋದಿ ಮೇಲೆ ಪ್ರೀತಿ ಇದೆಯೋ ಅವರೆಲ್ಲ ಓಟ್ ಮಾಡಲೇಬೇಕಾಗಿದೆ. ಮೋದಿಯವರು 400 ಸ್ಥಾನಗಳನ್ನು ಗೆಲ್ಲಿಸುವ ಗುರಿ ನೀಡಿದ್ದಾರೆ. ಮುಂದಿನ 25 ವರ್ಷದ ಕನಸು ಇಟ್ಟುಕೊಂಡು ಮೋದಿ ಈ ಗುರಿ ಇಟ್ಟಿದ್ದಾರೆ. ನಾವೆಲ್ಲ ಮೋದಿಯವರ ಗುರಿ ಸಾಧನೆಗೆ ಬೆಂಬಲ ನೀಡಬೇಕಾಗಿದೆ. ಆದರೆ ಕಾಂಗ್ರೆಸಿನವರು ಚೊಂಬು ಹಿಡ್ಕೊಂಡು ಓಡಾಡುತ್ತಿದ್ದಾರೆ. ಮೋದಿಯವರು ಇಷ್ಟೊಂದು ಸಂಖ್ಯೆಯಲ್ಲಿ ಟಾಯ್ಲೆಟ್ ಕಟ್ಟಿಕೊಟ್ಟಿದ್ದಾರೆ, ಕಾಂಗ್ರೆಸ್ ಈಗಲೂ ಯಾಕೆ ಚೊಂಬು ಹಿಡ್ಕೊಂಡು ಹೋಗುತ್ತಿದ್ದಾರೆಂದು ಅರ್ಥವಾಗಲ್ಲ. ಕಾಂಗ್ರೆಸಿಗೆ ವಾರಂಟಿ ಇಲ್ಲ, ಅವರಿಗೆ ಗ್ಯಾರಂಟಿಯೂ ಇಲ್ಲ ಎಂದು ವ್ಯಂಗ್ಯವಾಡಿದರು.


ನಿಮ್ಮ ಉತ್ಸಾಹಕ್ಕೆ ಋಣಿಯಾಗಿದ್ದೇನೆ ; ಕ್ಯಾಪ್ಟನ್ ಬ್ರಿಜೇಶ್ ಚೌಟ 


ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಇಷ್ಟೊಂದು ಬಿಸಿಲಿನ ನಡುವೆಯೂ ಉತ್ಸಾಹದಿಂದ ಸೇರಿದ ನಿಮ್ಮೆಲ್ಲರನ್ನು ನೋಡಿ ಹೆಮ್ಮೆಯಾಗುತ್ತಿದೆ. ಹಿಂದುತ್ವಕ್ಕಾಗಿ, ಪ್ರಧಾನಿ ಮೋದಿಗಾಗಿ, ಈ ದೇಶದ ಭವಿಷ್ಯಕ್ಕಾಗಿ ಪುತ್ತೂರಿನಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದೀರಿ. ನಿಮ್ಮ ಉತ್ಸಾಹಕ್ಕೆ ಋಣಿಯಾಗಿದ್ದೇನೆ. ನಿಮ್ಮ ಆಶೋತ್ತರಗಳನ್ನು ಈಡೇರಿಸಲು ಕಟಿಬದ್ಧನಾಗಿದ್ದೇನೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ನಮ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು ಓಟಿಂಗ್ ಆಗುವಂತೆ ಸಂಕಲ್ಪ ಮಾಡೋಣ ಎಂದು ಹೇಳಿದರು. 


ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಫೈರ್ ಬ್ರಾಂಡ್ ಮುಖಂಡ ಅರುಣ್ ಪುತ್ತಿಲ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರೋಡ್ ಶೋ ವಾಹನಲ್ಲಿ ಇದ್ದರು. ಪುತ್ತೂರಿನಲ್ಲಿ ಸುಡುವ ಬಿಸಿಲನ್ನೂ ಲೆಕ್ಕಿಸದೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದು ವಿಶೇಷವಾಗಿತ್ತು. ದರ್ಬೆಯಿಂದ ತೊಡಗಿ ಮಧ್ಯಾಹ್ನದ ಸುಡು ಬಿಸಿಲ ನಡುವೆಯೂ ಕಾರ್ಯಕರ್ತರ ಜೊತೆಗೆ ಅಣ್ಣಾಮಲೈ ಮತ್ತು ಪ್ರಮುಖರು ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. 


ಇದಕ್ಕೂ ಮುನ್ನ ಕಡಬ ಪೇಟೆಯಲ್ಲಿ ರೋಡ್ ಶೋ ನಡೆದಿದ್ದು ಅಲ್ಲಿಯೂ ಸುಡು ಬಿಸಿಲನ್ನು ಲೆಕ್ಕಿಸದೆ ಭಾರೀ ಸಂಖ್ಯೆಯ ಯುವ ಕಾರ್ಯಕರ್ತರು ರೋಡ್ ಶೋ ವಾಹನದ ಮುಂದೆ ಸಾಗಿದರು. ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಕಡಬದ ಬಿಳಿನೆಲೆ ಶಾಲೆಯ ಹೆಲಿಪ್ಯಾಡ್ ಗೆ ಆಗಮಿಸಿದ ಅಣ್ಣಾಮಲೈ ಅವರನ್ನು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಸೇರಿದಂತೆ ಬಿಜೆಪಿ ನಾಯಕರು ಸ್ವಾಗತಿಸಿದರು. ಪುತ್ತೂರಿನಿಂದ ಮಂಗಳೂರಿಗೆ ಹಿಂತಿರುಗುವ ಸಂದರ್ಭದಲ್ಲಿ ಫರಂಗಿಪೇಟೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಕಾರ್ಯಕರ್ತರು ಅವಿರತ ಶ್ರಮ ಹಾಕಬೇಕಾಗಿದೆ ಎಂದರು.


ಪುತ್ತೂರಿನಲ್ಲಿ ಬಿಂದು ಫ್ಯಾಕ್ಟರಿಗೆ ತೆರಳಿದ ಅಣ್ಣಾಮಲೈ ಮತ್ತು ಕ್ಯಾ. ಬ್ರಿಜೇಶ್ ಚೌಟ ಅಲ್ಲಿನ ನೂರಾರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು. 2024ರ ಚುನಾವಣೆ ದೇಶದ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದು. ಮೋದಿಯವರು ಕೈಗೊಂಡ ಯೋಜನೆಗಳ ಸಾಕಾರಕ್ಕಾಗಿ ಅವರೇ ಮತ್ತೆ ಪ್ರಧಾನಿಯಾಗುವ ಅಗತ್ಯವಿದೆ. ಅದಕ್ಕಾಗಿ ಎಲ್ಲರೂ ಮತ ಹಾಕಬೇಕು ಎಂದು ಅಲ್ಲಿ ಸೇರಿದ್ದ ಮಹಿಳಾ ಕಾರ್ಮಿಕರಲ್ಲಿ ಮನವಿ ಮಾಡಿದರು.

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget