ಕೋವಿ ಠೇವಣಿ ಆದೇಶ ಹಿಂಪಡೆಯುವಂತೆ ಸುಳ್ಯದಲ್ಲಿ ಹಕ್ಕೊತ್ತಾಯ

 



ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರೈತರು ತಮ್ಮ ಕೋವಿಯನ್ನು ಪೋಲೀಸ್ ಠಾಣೆಯಲ್ಲಿ ಠೇವಣಿ ಇಡಬೇಕೆಂಬ ಚುನಾವಣಾ ಆಯೋಗದ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ಸುಳ್ಯ ತಾಲೂಕು ಕಚೇರಿ ಎದುರು ಹಕ್ಕೊತ್ತಾಯ ಸಭೆ ನಡೆಸಿದರು



ಸಭೆಯಲ್ಲಿ ಮಾತನಾಡಿದ ನ್ಯಾಯವಾದಿ  ಎಂ.ವೆಂಕಪ್ಪ ಗೌಡರು, ನಾವು ರೈತರು. ನಮ್ಮ ಬೆಳೆ ರಕ್ಷಣೆಗಾಗಿ ನಾವು ಕೋವಿಯನ್ನು ಪಡೆದುಕೊಂಡಿದ್ದೇವೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಠೇವಣಿ ಇಡಬೇಕೆನ್ನುವ ಕ್ರಮ ಸರಿಯಲ್ಲ. ಅದರಿಂದ ವಿನಾಯಿತಿ ನೀಡುವಂತೆ ಒತ್ತಾಯಿಸಿದರು.


 ಕೆ.ಪಿ ಜಗದೀಶ್ ಸಂಪಾಜೆ ಮಾತನಾಡಿ ಸಂಪಾಜೆ ಪರಿಸರದಲ್ಲಿ ನಿರಂತರವಾಗಿ ಆನೆ ಹಾವಳಿ ಯಿದ್ದು,ಆನೆಗಳಿಗೆ ಭಯ ಹುಟ್ಟಿಸಲು ಗಾಳಿಯಲ್ಲಿ ಗುಂಡು ಹೊಡೆದು ಕಾಡು ಪ್ರಾಣಿ ಓಡಿಸಲು ಏಕೈಕ ಮಾರ್ಗ ವಿನಾಯಿತಿ ನೀಡುವಂತೆ ತಿಳಿಸಿದರು. ಕೃಷಿಕ  ವಿಶ್ವನಾಥ್ ರಾವ್ ಕಾಂತಮಂಗಲ, ಸುರೇಶ್ ಭಟ್



ಕೃಷಿಕ ಪಾರೆ ಶಂಬಯ್ಯ, ಉಮಾಶಂಕರ್ ತೊಡಿಕಾನ, ಭರತ್ ಕುಮಾರ್, ಕಾಡು ಪ್ರಾಣಿಯಿಂದ ಕೃಷಿ ನಷ್ಟದ ಕುರಿತು ಮಾತನಾಡಿದರು. 

ಬಳಿಕ ಹಕ್ಕೊತ್ತಾಯ ಸಭೆ ಆಗಮಿಸಿ ತಹಶೀಲ್ದಾರ್ ಮಂಜುನಾಥರು  ಅಹವಾಲು ಸ್ವೀಕರಿಸಿದರು.ಬಳಿಕ ಮಾತನಾಡಿದ ತಹಶೀಲ್ದಾರರು  ಜಿಲ್ಲಾಧಿಕಾರಿಗಳಲ್ಲಿ ಮಾತನಾಡಿ ನಿಮಗೆ ವಿಚಾರ ತಿಳಿಸುತ್ತೇವೆ ಎಂದು ಹೇಳಿದರು.ಹೆಚ್ಜಿನ ಸಂಖ್ಯೆಯಲ್ಲಿ ರೈತರು, ಕೃಷಿಕರು ಭಾಗವಹಿಸಿದ್ದರು

Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget